ಅನಾವರಣವಾಯ್ತು ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಟೊಯೊಟಾ ಇತ್ತೀಚೆಗೆ ಫಾರ್ಚೂನರ್ ಫೇಸ್‌ಲಿಫ್ಟ್ ಅನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಪರಿಚಯಿಸಿತು. ಇದೀಗ ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿಯನ್ನು ಅನಾವರಣಗೊಳಿಸಿದೆ.

ಅನಾವರಣವಾಯ್ತು ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿ

ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿಯಲ್ಲಿ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿ ರೆಡ್ ಸ್ಟ್ರಿಪ್ ಮತ್ತು ಟಿಆರ್‌ಡಿ ಬ್ಯಾಡ್ಜಿಂಗ್ ಹೊಂದಿರುವ ದೊಡ್ಡ ಗ್ರಿಲ್ ಅನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಫಾಗ್ ಲ್ಯಾಂಪ್ ಗಳನ್ನು ಸಹ ನವೀಕರಿಸಲಾಗಿದೆ. ಮುಂಭಾಗದಲ್ಲಿ ಬಂಪರ್, ಗ್ರಿಲ್, ಫಾಗ್ ಲ್ಯಾಂಪ್ ಗಳು ಮತ್ತು ಮಿರರ್ ಗಳ ಮೇಲೆ ಡಾರ್ಕ್ ಅಸೆಂಟ್ ಗಳ ಜೊತೆಗೆ ಕ್ರೋಮ್ ಬ್ಲ್ಯಾಕ್ ಅಂಶಗಳಿಂದ ಅಲಂಕರಣಗಳಿವೆ.

ಅನಾವರಣವಾಯ್ತು ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿ

ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿ 18 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಈ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

MOST READ: ಐಷಾರಾಮಿ ಫೋಕ್ಸ್‌ವ್ಯಾಗನ್ ಎಸ್‍ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ

ಅನಾವರಣವಾಯ್ತು ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿ

ಈ ಹೊಸ ಎಸ್‍ಯುವಿಯಲ್ಲಿ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ. ಈ ಎಸ್‍ಯುವಿಯಲ್ಲಿ ಇಂಟಿರಿಯರ್ ನಲ್ಲಿ ಸ್ಮಾರ್ಟ್ ಪೋನ್ ಕನೆಕ್ಟಿವಿಟಿ, ಪವರ್ಡ್ ಫ್ರಂಟ್ ಸೀಟುಗಳು ಮತ್ತು 4.2-ಇಂಚಿನ ಮಲ್ಟಿ-ಇನ್ಫೋ ಡ್ರೈವರ್ಸ್ ಡಿಸ್ ಪ್ಲೇಯೊಂದಿಗೆ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸಹ ಪಡೆಯುತ್ತದೆ.

ಅನಾವರಣವಾಯ್ತು ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿ

ಇನ್ನು ಈ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿಯಲ್ಲಿ ಆಂಟಿ-ಗ್ಲೇರ್ ಮಿರರ್ ಗಳು, ವೈರ್‌ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್ ಮತ್ತು ಆಕ್ಟಿವೇಟ್ ಕಿಕ್ ಡೋರ್ ಸಹ ಒಳಗೊಂಡಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಅನಾವರಣವಾಯ್ತು ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿ

ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ 7 ಏರ್‌ಬ್ಯಾಗ್, ಟ್ರ್ಯಾಕ್ಷನ್ ಕಂಟ್ರೋಲ್, ವೈಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ,

ಅನಾವರಣವಾಯ್ತು ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿ

ಇಂಡೋನೇಷ್ಯಾದಲ್ಲಿ ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿಯಲ್ಲಿ 2.4ಎಲ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿ

ಇನ್ನು ಸ್ಟ್ಯಾಂಡರ್ಡ್ ಫಾರ್ಚೂನರ್ ಎಸುವಿಯಲ್ಲಿ 2.8-ಲೀಟರ್ ಡೀಸೆಲ್ ಎಂಜಿನ್ ಅಳವಡಿಸಬಹುದು. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯನ್ನು ನೀದಲಾಗಿದೆ.

ಅನಾವರಣವಾಯ್ತು ಹೊಸ ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿವೊ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ಟ್ಯಾಂಡರ್ಡ್ ಫಾರ್ಚೂನರ್ ಎಸುವಿಯಲ್ಲಿ ಬಿಎಸ್-6, 2.8ಎಲ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 174 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಈ ಎಸ್‍ಯುವಿಯಲ್ಲಿ ಹಿಂದಿನ ಮಾದರಿಯಂತೆ ಆರ್‌ಡಬ್ಲ್ಯುಡಿ(ರಿಯರ್-ವೀಲ್-ಡ್ರೈವ್) ಮತ್ತು 4 ಡಬ್ಲ್ಯೂಡಿ (ಫೋರ್ ವ್ಹೀಲ್ ಡ್ರೈವ್) ಆಯ್ಕೆಗಳನು ಮುಂದುವರೆಸುತ್ತಾರೆ.

Article Published On: Friday, October 16, 2020, 16:37 [IST]
English summary
2021 Toyota Fotuner TRD Sportivo Revealed. Read In Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+