ಹೊಸ ವಾಹನ ಮಾರಾಟದಲ್ಲಿ ಹೆಚ್ಚಳ- ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಭಾರೀ ಆದಾಯ

ಲಾಕ್‌ಡೌನ್ ಅವಧಿಯಲ್ಲಿ ತೀವ್ರ ಕುಸಿತ ಕಂಡಿದ್ದ ಹೊಸ ವಾಹನಗಳ ಮಾರಾಟವು ಇದೀಗ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹಲವು ಆಟೋ ಉತ್ಪಾದನಾ ಕಂಪನಿಗಳ ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.

ಹೊಸ ವಾಹನ ಮಾರಾಟದಲ್ಲಿ ಹೆಚ್ಚಳ- ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಭಾರೀ ಆದಾಯ

ಕರೋನಾ ವೈರಸ್‌ನಿಂದ ಎಪ್ರಿಲ್ ಅವಧಿಯಲ್ಲಿ ವಾಹನ ಮಾರಾಟ ಸ್ಥಗಿತಗೊಳಿಸಿದ ಪರಿಣಾಮ ಭಾರೀ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ಮೇ, ಜೂನ್ ಮತ್ತು ಜುಲೈ ಅವಧಿಯಲ್ಲೂ ಕನಿಷ್ಠ ಪ್ರಮಾಣದ ವಾಹನ ಮಾರಾಟ ಮಾಡಿದ್ದವು. ತದನಂತರ ಅಗಸ್ಟ್, ಸೆಪ್ಟೆಂಬರ್‌ನಲ್ಲಿ ತುಸು ಸುಧಾರಣೆ ಕಂಡಿದ್ದ ವಾಹನ ಮಾರಾಟವು ದಸರಾ ಸಂಭ್ರಮದ ಹಿನ್ನಲೆಯಲ್ಲಿ ಅಕ್ಟೋಬರ್ ಅವಧಿಯಲ್ಲಿನ ವಾಹನ ಮಾರಾಟವು ಈ ಹಿಂದಿನ ಹಲವು ದಾಖಲೆಗಳನ್ನು ಹಿಂದಿಕ್ಕಿದೆ.

ಹೊಸ ವಾಹನ ಮಾರಾಟದಲ್ಲಿ ಹೆಚ್ಚಳ- ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಭಾರೀ ಆದಾಯ

ಹೌದು, ಅಕ್ಬೋಬರ್ ಅವಧಿಯಲ್ಲಿ ಬಹುತೇಕ ಆಟೋ ಕಂಪನಿಗಳು ಶೇ. 10ರಿಂದ ಶೇ. 60 ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸಿದ್ದು, ಕರ್ನಾಟಕದಲ್ಲೂ ದೇಶದ ಇತರೆ ರಾಜ್ಯಗಳಿಂತಲೂ ಹೆಚ್ಚಿನ ಮಟ್ಟದಲ್ಲಿ ಹೊಸ ವಾಹನಗಳನ್ನು ನೋಂದಣಿ ಮಾಡಲಾಗಿದೆ.

ಹೊಸ ವಾಹನ ಮಾರಾಟದಲ್ಲಿ ಹೆಚ್ಚಳ- ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಭಾರೀ ಆದಾಯ

ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಸಾರಿಗೆ ಇಲಾಖೆಯು ಹೊಸ ವಾಹನಗಳ ನೋಂದಣಿಯಿಂದ ರೂ. 1,044 ಕೋಟಿ ತೆರಿಗೆ ಸಂಗ್ರಹಿಸಿದ್ದು, ಇದೇ ಅವಧಿಯಲ್ಲಿ ಕಳೆದ ವರ್ಷ ರೂ. 1,042 ಕೋಟಿ ತೆರಿಗೆ ಸಂಗ್ರಹವಾಗಿತ್ತು.

ಹೊಸ ವಾಹನ ಮಾರಾಟದಲ್ಲಿ ಹೆಚ್ಚಳ- ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಭಾರೀ ಆದಾಯ

ಆದರೆ ಕಳೆದ ವರ್ಷದ ಎಪ್ರಿಲ್‌ನಿಂದ ಅಕ್ಬೋಬರ್ ಅವಧಿಯಲ್ಲಿ ಹೊಸ ವಾಹನಗಳ ನೋಂದಣಿಯಿಂದ ಸುಮಾರು ರೂ. 3,450 ಕೋಟಿ ತೆರಿಗೆ ಸಂಗ್ರಹಿಸಿದ್ದ ಸಾರಿಗೆ ಇಲಾಖೆಯು ಈ ವರ್ಷದ ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ ರೂ. 2,409 ಕೋಟಿ ತೆರಿಗೆ ಸಂಗ್ರಹಿಸಿದೆ. ಕರೋನಾ ವೈರಸ್ ಪರಿಣಾಮ ವಾಹನ ಮಾರಾಟ ಸ್ಥಗಿತ ಮತ್ತು ಲಾಕ್‌ಡೌನ್ ವಿಸ್ತರಿಸಿದ ಪರಿಣಾಮ ವಾಹನ ನೋಂದಣಿಯಲ್ಲಿ ಕುಂಠಿತಗೊಂಡಿದ್ದೆ ಆದಾಯ ಇಳಿಕೆಗೆ ಪ್ರಮುಖ ಕಾರಣವಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಹೊಸ ವಾಹನ ಮಾರಾಟದಲ್ಲಿ ಹೆಚ್ಚಳ- ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಭಾರೀ ಆದಾಯ

ಆದರೆ ಕಳೆದ ನಾಲ್ಕೈದು ತಿಂಗಳಿನಲ್ಲಿ ಉಂಟಾದ ವಾಹನ ಮಾರಾಟ ನಷ್ಟದ ಪ್ರಮಾಣವು ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ದೀಪಾವಳಿ ಸಂಭ್ರಮದಲ್ಲಿ ಮತ್ತಷ್ಟು ಹೊಸ ವಾಹನ ಮಾರಾಟವನ್ನು ನೀರಿಕ್ಷಿಸಲಾಗಿದೆ.

ಹೊಸ ವಾಹನ ಮಾರಾಟದಲ್ಲಿ ಹೆಚ್ಚಳ- ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಭಾರೀ ಆದಾಯ

ಜೊತೆಗೆ ಕರೋನಾ ವೈರಸ್ ಪರಿಣಾಮ ಬಹುತೇಕರು ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಬಳಕೆ ಮಾಡಲು ಹಿಂದೇಟು ಹಾಕುತ್ತಿದ್ದು, ದಿನನಿತ್ಯದ ಓಡಾಟಕ್ಕಾಗಿ ಬಜೆಟ್ ಬೆಲೆಯಲ್ಲಿ ಸ್ವಂತ ವಾಹನಗಳನ್ನು ಖರೀದಿಸುತ್ತಿರುವುದು ಹೊಸ ವಾಹನ ಮಾರಾಟ ಸುಧಾರಣೆಗೆ ಪ್ರಮುಖ ಕಾರಣವಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ವಾಹನ ಮಾರಾಟದಲ್ಲಿ ಹೆಚ್ಚಳ- ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಭಾರೀ ಆದಾಯ

ಸಮೀಕ್ಷೆಗಳ ಪ್ರಕಾರ ಮುಂಬರುವ ದಿನಗಳಲ್ಲಿ ಹೊಸ ವಾಹನಗಳ ಮಾರಾಟವು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿದ್ದು, ರೂ.10 ಲಕ್ಷದೊಳಗಿನ ಕಾರುಗಳ ಮಾರಾಟವು ಭಾರೀ ಏರಿಕೆ ಕಂಡಿದೆ.

Most Read Articles

Kannada
English summary
Karnataka state automobile sector has hit the recovery. Read in Kannada.
Story first published: Saturday, November 7, 2020, 21:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X