ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ಪರಿಸರ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆ ಉದ್ದೇಶದಿಂದ ಆಟೋ ಉದ್ಯಮದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಸದ್ಯದಲ್ಲೇ 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳಿಗೆ ಸ್ಕ್ರ್ಯಾಪಿಂಗ್ ನೀತಿಯನ್ನು ಕಡ್ಡಾಯವಾಗಿ ಜಾರಿಗೆ ತರುವ ಸುಳಿವು ನೀಡಿದೆ.

ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ದೇಶಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವು ಹೊಸ ಹೊಸ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಇದಕ್ಕೆ ಪರಿಣಾಮಕಾರಿಯಾಗಿ ತಡೆ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಸದ್ಯದಲ್ಲೇ ಸ್ವಯಂಚಾಲಿತ ಸ್ಕ್ರ್ಯಾರ್ಪಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ಹೊಸ ನಿಯಮ ಜಾರಿಗೆ ಬಂದಲ್ಲಿ 15 ಮೇಲ್ಪಟ್ಟ ವಾಹನಗಳು ಗಣನೀಯ ತಗ್ಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ಸ್ಕ್ರ್ಯಾಪಿಂಗ್ ನೀತಿಯನ್ನು ಜಾರಿಗೆ ತರಲು ಕಳೆದ ವರ್ಷವೇ ಹೊಸ ವಿಧೇಯಕ ಒಂದನ್ನು ಮಂಡಿಸಿದ್ದ ಕೇಂದ್ರ ಸರ್ಕಾರವು ಇದೀಗ ಕಾಯ್ದೆಯನ್ನು ಜಾರಿಗೆ ತರಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ಕಾಯ್ದೆಯಲ್ಲಿದ್ದ ಕೆಲವು ಗೊಂದಲಗಳನ್ನು ನಿವಾರಣೆ ಮಾಡಲಾಗಿದೆ.

ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ಈ ಕುರಿತಂತೆ ಫೇಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಶಿಯನ್ಸ್ ಆಯೋಜಿಸಿದ್ದ '2020 ಆಟೋ ಸಮಿಟ್' ಸಮ್ಮೇಳನದಲ್ಲಿ ಮಾತನಾಡಿರುವ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನೀತಿನ್ ಗಡ್ಕರಿಯರು, ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಪರಿಣಾಮಕಾರಿ ನೀತಿಗಳು ಅಗತ್ಯವಿದ್ದು, ಮುಂದಿನ ಒಂದು ತಿಂಗಳೊಳಗಾಗಿ ಸ್ಕ್ರ್ಯಾಪಿಂಗ್ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದಿದ್ದಾರೆ.

ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ಜೊತೆಗೆ ಹೊಸ ಯೋಜನೆಯಿಂದ ಮಾಲಿನ್ಯವನ್ನು ಮಾತ್ರ ತಗ್ಗಿಸುವುದಲ್ಲದೇ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದರಿಂದ ಆಟೋಮೊಬೈಲ್ ಉತ್ಪಾದನಾ ವೆಚ್ಚ ಕೂಡಾ ತಗ್ಗಲಿದೆ ಎನ್ನಲಾಗಿದ್ದು, ಸ್ಕ್ರ್ಯಾಪ್ ಪ್ರಕ್ರಿಯೆಯಿಂದ ಬರುವ ಬಿಡಿಭಾಗಗಳನ್ನು ಮರುಬಳಕೆ ಮಾಡಿಕೊಳ್ಳುವ ಮೂಲಕ ಹೊಸ ವಾಹನಗಳ ಬೆಲೆಯನ್ನು ಕೂಡಾ ತಗ್ಗಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದಕ್ಕಾಗಿ ಜಿಎಸ್‌ಟಿ ನೀತಿಯಲ್ಲೂ ಕೆಲವು ಬದಲಾವಣೆಗಳನ್ನು ತರಲಾಗಿದೆ.

ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ಒಂದು ವೇಳೆ ಹೊಸ ಯೋಜನೆಯು ಯಶಸ್ವಿಯಾದಲ್ಲಿ ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ ಸುಮಾರು ರೂ.15 ಸಾವಿರ ಕೋಟಿ ಆದಾಯ ಹರಿದುಬರಲಿದ್ದು, ಉತ್ಪಾದನಾ ವೆಚ್ಚ ತಗ್ಗುವುದಲ್ಲದೇ ಹೊಸ ವಾಹನಗಳ ಬೆಲೆಗಳು ಕೂಡಾ ಕಡಿತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುವುದು ಸಚಿವ ನಿತಿನ್ ಗಡ್ಕರಿ ಅವರ ಅಭಿಪ್ರಾಯವಾಗಿದೆ.

ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ಹೊಸ ಉದ್ಯಮ, ವಿಫುಲ ಉದ್ಯೋಗಾವಕಾಶ..

ಹೊಸ ಕಾಯ್ದೆ ಜಾರಿಯಾದಲ್ಲಿ ಸ್ಕ್ರ್ಯಾರ್ಪಿಂಗ್ ವಿಭಾಗಗಳಲ್ಲಿ ಕೂಡಾ ವಿಫುಲ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿದ್ದು, 15 ವರ್ಷ ಮೇಲ್ಪಟ್ಟ ವಾಹನಗಳ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾರುತಿ ಸುಜುಕಿ ಬಲೆನೊ(ಸೆಡಾನ್), ಮಾರುತಿ 800, ಹೋಂಡಾ ಸಿಟಿ ಟೈಪ್ 2 ವಿಟೆಕ್, ಫಿಯೆಟ್ ಫಾಲಿಯೋ ಎಸ್10 ಸೇರಿದಂತೆ ಹಲವು ವಾಣಿಜ್ಯ ವಾಹನಗಳು ಕೂಡಾ ಸ್ಕ್ರ್ಯಾಪ್‌ಗೊಳ್ಳಲಿವೆ.

ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ಇನ್ನು ಜಾರಿಗೆ ತರಲಾಗುತ್ತಿರುವ ವ್ಯಾಲೆಂಟರಿ ವೆಹಿಕಲ್ ಫ್ಲಿಟ್ ಮಾಡರ್ನೈಷನ್ ಪ್ರೋಗ್ರಾಂ (ವಿ-ವಿಎಂಪಿ) ನೀತಿ ಅಡಿ ದೇಶಾದ್ಯಂತ ಬರೋಬ್ಬರಿ 28 ಮಿಲಿಯನ್ (2.80 ಕೋಟಿ) ಹಳೆಯ ವಾಹನಗಳು (2005ರ ಮಾರ್ಚ್ 31ರ ಮೊದಲು ಖರೀದಿ ಮಾಡಿದ ವಾಹನ) ಸ್ಕ್ರ್ಯಾರ್ಪಿಂಗ್‌ಗೊಳ್ಳಲಿವೆ.

ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ಈ ಮೂಲಕವೇ ಶೇ. 65ರಷ್ಟು ಮಾಲಿನ್ಯ ಪ್ರಮಾಣವು ತಗ್ಗಿಸಬಹುದು ಎನ್ನಲಾಗಿದ್ದು, ಇದಕ್ಕಾಗಿ ಬೇಕಾಗಿರುವ ಅಗತ್ಯ ನಿಯಮಗಳನ್ನು ಸಿದ್ದಪಡಿಸಿರುವ ಕೇಂದ್ರ ಸರ್ಕಾರವು ಸಿಎಂವಿಆರ್(ಸೆಂಟ್ರಲ್ ಮೋಟಾರ್ ವೆಹಿಕಲ್ ರೂಲ್ಸ್)ಗೆ ತಿದ್ದುಪಡಿ ತರಲಾಗಿದೆ.

ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ಹೀಗಾಗಿ ಹೊಸ ಸ್ಕ್ರ್ಯಾರ್ಪಿಂಗ್ ನೀತಿಯು ಶೀಘ್ರದಲ್ಲೇ ಅನುಷ್ಠಾನಕ್ಕೆ ಬರುವುದು ಬಹುತೇಕ ಖಚಿತ ಎನ್ನಲಾಗಿದ್ದು, ಹಳೆಯ ವಾಹನಗಳನ್ನು ಸ್ಕ್ರ್ಯಾರ್ಪಿಂಗ್ ಮಾಡುವ ವಾಹನ ಮಾಲೀಕರಿಗೆ ಹೊಸ ವಾಹನ ಖರೀದಿಗೆ ಜಿಎಸ್‌ಟಿ ವಿನಾಯ್ತಿ ಸೇರಿದಂತೆ ಹಲವಾರು ಆಫರ್‌ಗಳನ್ನು ನೀಡಲು ಉದ್ದೇಶಿಸಲಾಗಿದೆ.

ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ಒಂದು ವೇಳೆ ಸ್ಕ್ರ್ಯಾರ್ಪಿಂಗ್ ನೀತಿ ಅಡಿ ಗುಜರಿಗೆ ಹಾಕಲು ಒಪ್ಪದಿರುವ ವಾಹನ ಮಾಲೀಕರು ಅನಧಿಕೃತವಾಗಿ ಬಳಕೆ ಮಾಡಿದ್ದಲ್ಲಿ ಸೀಜ್ ಮಾಡಲಿದ್ದು, ಸೀಜ್ ಮಾಡಿದ ನಂತರ ಹೊಸ ವಾಹನ ಖರೀದಿಗೆ ನೀಡಲಾಗುವ ಜಿಎಸ್‌ಟಿ ವಿನಾಯ್ತಿಗಳನ್ನು ಕಡಿತಗೊಳಿಸಲಾಗುತ್ತದೆ.

ಶೀಘ್ರದಲ್ಲೇ ಗುಜರಿ ಸೇರಲಿವೆ 2.80 ಕೋಟಿ ಹಳೆಯ ವಾಹನಗಳು- ನೀತಿನ್ ಗಡ್ಕರಿ..

ಇದರಿಂದ ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ವ್ಯಾಲೆಂಟರಿಯಾಗಿ ಗುಜರಿಗೆ ಹಾಕಬೇಕು ಇಲ್ಲವೇ ಬಳಕೆ ಮಾಡದೇ ಮನೆಯಲ್ಲೇ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.

Article Published On: Monday, February 10, 2020, 14:02 [IST]
English summary
Vehicle scrappage policy to be implemented soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+