ಹಳೆ ವಾಹನಗಳ ರಿಜಿಸ್ಟ್ರೇಷನ್ ನಂಬರ್ ಪಡೆಯಲಿವೆ ಹೊಸ ವಾಹನಗಳು

ಹೊಸ ವಾಹನಗಳನ್ನು ಹಳೆಯ ರಿಜಿಸ್ಟ್ರೇಷನ್ ನಂಬರ್ ನೊಂದಿಗೆ ರಿಜಿಸ್ಟರ್ ಮಾಡಿಕೊಳ್ಳಬಹುದು ಎಂದು ಉತ್ತರ ಪ್ರದೇಶ ಸರ್ಕಾರವು ನಿರ್ದೇಶನ ನೀಡಿದೆ. ಉತ್ತರ ಪ್ರದೇಶದ ಎಲ್ಲಾ ಜಿಲ್ಲಾ ಸಾರಿಗೆ ಇಲಾಖೆಗಳಿಗೆ ಈ ಕುರಿತು ನಿರ್ದೇಶನ ನೀಡಲಾಗಿದೆ.

ಹಳೆ ವಾಹನಗಳ ರಿಜಿಸ್ಟ್ರೇಷನ್ ನಂಬರ್ ಪಡೆಯಲಿವೆ ಹೊಸ ವಾಹನಗಳು

ಈ ನಿರ್ದೇಶನದಡಿಯಲ್ಲಿ, ಹೊಸ ವಾಹನವನ್ನು ಖರೀದಿಸುವಾಗ ಹೊಸ ರಿಜಿಸ್ಟ್ರೇಷನ್ ನಂಬರ್ ಪಡೆಯುವುದು ಇನ್ನು ಮುಂದೆ ಕಡ್ಡಾಯವಲ್ಲ.ಹೊಸ ವಾಹನಗಳಿಗೆ ಹಳೆಯ ರಿಜಿಸ್ಟ್ರೇಷನ್ ನಂಬರ್ ನೀಡಲು ಉತ್ತರ ಪ್ರದೇಶ ಸರ್ಕಾರವು ಕೆಲವು ಷರತ್ತುಗಳನ್ನು ವಿಧಿಸಿದೆ. ಇದರಂತೆ ಹೊಸ ನಾಲ್ಕು ಚಕ್ರ ವಾಹನಗಳಿಗೆ, ಹಳೆಯ ನಾಲ್ಕು ಚಕ್ರಗಳ ಸಂಖ್ಯೆಯನ್ನು ಹಾಗೂ ಹೊಸ ದ್ವಿಚಕ್ರ ವಾಹನಗಳಿಗೆ ಹಳೆಯ ದ್ವಿಚಕ್ರ ವಾಹನಗಳ ಸಂಖ್ಯೆಯನ್ನು ನೀಡಲಾಗುವುದು.

ಹಳೆ ವಾಹನಗಳ ರಿಜಿಸ್ಟ್ರೇಷನ್ ನಂಬರ್ ಪಡೆಯಲಿವೆ ಹೊಸ ವಾಹನಗಳು

ದ್ವಿಚಕ್ರ ವಾಹನಗಳಿಗೆ ನಾಲ್ಕು ಚಕ್ರ ವಾಹನಗಳ ನೋಂದಣಿ ಸಂಖ್ಯೆಯನ್ನು ನೀಡಲಾಗುವುದಿಲ್ಲ. ನಾಲ್ಕು ಚಕ್ರಗಳ ನೋಂದಣಿ ಸಂಖ್ಯೆ ನೀಡಲು ರೂ.25 ಸಾವಿರ ಹಾಗೂ ದ್ವಿಚಕ್ರ ವಾಹನಗಳಿಗೆ ರೂ.1,000 ಶುಲ್ಕ ವಿಧಿಸಲಾಗುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹಳೆ ವಾಹನಗಳ ರಿಜಿಸ್ಟ್ರೇಷನ್ ನಂಬರ್ ಪಡೆಯಲಿವೆ ಹೊಸ ವಾಹನಗಳು

ರಿಜಿಸ್ಟ್ರೇಷನ್ ನಂಬರ್ ನೀಡುವಾಗ ವಾಹನದ ಬಳಕೆಯನ್ನು ಸಹ ಕಾಣಬಹುದು. ಹಳೆಯ ಖಾಸಗಿ ವಾಹನದ ರಿಜಿಸ್ಟ್ರೇಷನ್ ನಂಬರ್ ಅನ್ನು ಹೊಸ ಖಾಸಗಿ ವಾಹನಕ್ಕೆ ಮಾತ್ರ ನೀಡಲಾಗುತ್ತದೆ. ವಾಣಿಜ್ಯ ವಾಹನಗಳಿಗೂ ಇದೇ ನಿಯಮ ಅನ್ವಯಿಸುತ್ತದೆ.

ಹಳೆ ವಾಹನಗಳ ರಿಜಿಸ್ಟ್ರೇಷನ್ ನಂಬರ್ ಪಡೆಯಲಿವೆ ಹೊಸ ವಾಹನಗಳು

ಉತ್ತರ ಪ್ರದೇಶ ಸರ್ಕಾರವು ಇತ್ತೀಚಿಗಷ್ಟೇ ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೆ ತಂದಿದೆ. ಈ ವಾಹನ ನೀತಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಮೊದಲ ಒಂದು ಲಕ್ಷ ದ್ವಿಚಕ್ರ ವಾಹನಗಳಿಗೆ 100% ಹಾಗೂ ನಾಲ್ಕು ಚಕ್ರ ವಾಹನಗಳಿಗೆ 75%ನಷ್ಟು ರಸ್ತೆ ತೆರಿಗೆ ವಿನಾಯಿತಿ ನೀಡಲಾಗುವುದು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹಳೆ ವಾಹನಗಳ ರಿಜಿಸ್ಟ್ರೇಷನ್ ನಂಬರ್ ಪಡೆಯಲಿವೆ ಹೊಸ ವಾಹನಗಳು

ಕೇಂದ್ರ ಸರ್ಕಾರದ ಫೇಮ್ -1 ವಾಹನ ನೀತಿಯಡಿಯಲ್ಲಿ ಎಲೆಕ್ಟ್ರಿಕ್ ವಾಹನ ಹಾಗೂ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಸೌಕರ್ಯಗಳನ್ನು ನೀಡಲು ರೂ.795 ಕೋಟಿಗಳ ಪ್ಯಾಕೇಜ್ ನೀಡಲಾಗಿದೆ. ಫೇಮ್ -2 ನೀತಿಯಡಿ ರೂ.8,730 ಕೋಟಿಗಳ ಪ್ಯಾಕೇಜ್ ನೀಡಲಾಗಿದೆ. ಇದರಲ್ಲಿ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳು ರಸ್ತೆಗಿಳಿಯಲಿವೆ.

ಹಳೆ ವಾಹನಗಳ ರಿಜಿಸ್ಟ್ರೇಷನ್ ನಂಬರ್ ಪಡೆಯಲಿವೆ ಹೊಸ ವಾಹನಗಳು

ಇದರ ಜೊತೆಗೆ ಸಾರ್ವಜನಿಕ ಸಾರಿಗೆ ಹಾಗೂ ದ್ವಿಚಕ್ರ ವಾಹನಗಳಂತಹ ಸಣ್ಣ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಕೇಂದ್ರ ಸರ್ಕಾರ ಯೋಜಿಸಿದೆ. ಸರ್ಕಾರಿ ಬೆಂಬಲಿತ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ದೇಶಾದ್ಯಂತ 20,000 ಎಲೆಕ್ಟ್ರಿಕ್ ವಾಹನಗಳನ್ನು ಸರ್ಕಾರದ ಬಳಕೆಗಾಗಿ ನಿಯೋಜಿಸಲು ಟೆಂಡರ್ ಕರೆದಿದೆ.

Most Read Articles

Kannada
English summary
New vehicles to get registration number of old vehicles in Uttar Pradesh. Read in Kannada.
Story first published: Thursday, August 20, 2020, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X