ಕರೋನಾ ವೈರಸ್ ಎಫೆಕ್ಟ್: ಮುಂದೂಡಿಕೆಯಾದ ನ್ಯೂಯಾರ್ಕ್ ಆಟೋ ಶೋ
ಕೋವಿಡ್ 19 ಕಾರಣಕ್ಕೆ ಪ್ರಪಂಚದ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈಗಾಗಲೇ ಹಲವಾರು ಕ್ರೀಡಾಕೂಟಗಳನ್ನು, ಮೋಟಾರ್‌ಸ್ಪೋರ್ಟ್‌ಗಳನ್ನು ರದ್ದುಗೊಳಿಸಲಾಗಿದೆ. ಕರೋನಾ ವೈರಸ್ ಜಾಗತಿಕ ಆಟೋಮೊಬೈಲ್ ಉದ್ಯಮದ ಮೇಲೂ ಪರಿಣಾಮ ಬೀರಿದೆ.

ಈ ವರ್ಷ ನಡೆಯಬೇಕಿದ್ದ ಅನೇಕ ದೊಡ್ಡ ಆಟೋ ಶೋಗಳನ್ನು ರದ್ದುಪಡಿಸಲಾಗಿದೆ. ಜಿನೀವಾ ಆಟೋ ಶೋವನ್ನು ರದ್ದುಪಡಿಸಿದ ನಂತರ, ನ್ಯೂಯಾರ್ಕ್‌ನಲ್ಲಿ ನಡೆಯಬೇಕಿದ್ದ ಅಂತರರಾಷ್ಟ್ರೀಯ ಆಟೋ ಶೋವನ್ನು ಮುಂದೂಡಲಾಗಿದೆ. ನ್ಯೂಯಾರ್ಕ್ ಆಟೋ ಶೋವನ್ನು 2020ರ ಆಗಸ್ಟ್‌ಗೆ ಮುಂದೂಡಲಾಗಿದೆ.

ನ್ಯೂಯಾರ್ಕ್ ಆಟೋ ಶೋವನ್ನು 2020ರ ಏಪ್ರಿಲ್ 10ರಿಂದ 19ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಕರೋನಾ ವೈರಸ್ ಕಾರಣಕ್ಕೆ ಮುಂದೂಡಲಾಗಿರುವ ಕಾರಣಕ್ಕೆ ಈ ಮೋಟಾರ್ ಶೋ ಆಗಸ್ಟ್ 28ರಿಂದ ಸೆಪ್ಟೆಂಬರ್ 6ರವರೆಗೆ ನಡೆಯಲಿದೆ. ಆಗಸ್ಟ್ 26, 27ರಂದು ಈ ಆಟೋ ಶೋವನ್ನು ಮಾಧ್ಯಮಗಳಿಗೆ ತೆರೆಯಲಾಗುವುದು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ನ್ಯೂಯಾರ್ಕ್‌ನಲ್ಲಿರುವ ಜಾವಿಟ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಆಟೋ ಶೋ ನಡೆಯಲಿದೆ. ವರದಿಗಳ ಪ್ರಕಾರ, ಈ ಆಟೋ ಶೋದಿಂದ ನ್ಯೂಯಾರ್ಕ್ ನಗರವು 330 ಮಿಲಿಯನ್ ಡಾಲರ್ ಲಾಭ ಗಳಿಸಲಿದೆ. ಇದರಿಂದ ಬರುವ ಆದಾಯವು ಅಲ್ಲಿನ ಆರ್ಥಿಕತೆಯನ್ನು ಹೆಚ್ಚಿಸಲಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾತನಾಡಿರುವ ನ್ಯೂಯಾರ್ಕ್ ಆಟೋ ಶೋದ ಸಂಘಟಕರಾದ ಮಾರ್ಕ್ ಶಿನ್ಬರ್ಗ್ ಈ ಆಟೋ ಶೋ 120 ವರ್ಷಗಳಿಂದ ನಡೆಯುತ್ತಿದೆ. ಆಟೋ ಶೋ ನಡೆಸಲು ಉದ್ದೇಶಿಸಿರುವ ದಿನವನ್ನು ಮುಂದೂಡುವುದು ಕಷ್ಟದ ಕೆಲಸವಾಗಿದ್ದರೂ, ಪ್ರೇಕ್ಷಕರು ಹಾಗೂ ಪ್ರದರ್ಶಕರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಸೋಂಕಿನ ಕಾರಣಕ್ಕೆ ಈ ಆಟೋ ಶೋವನ್ನು 2020ರ ಆಗಸ್ಟ್‌ಗೆ ಮುಂದೂಡಲಾಗಿದೆ ಎಂದು ಅವರು ಹೇಳಿದರು. ಕರೋನಾ ವೈರಸ್ ಕಾರಣಕ್ಕೆ ಚೀನಾದಲ್ಲಿ ನಡೆಯಬೇಕಿದ್ದ ಫಾರ್ಮುಲಾ 1 (ಎಫ್ 1) ರೇಸ್ ಹಾಗೂ ಕತಾರ್‌ನಲ್ಲಿ ನಡೆಯಲಿದ್ದ ಮೋಟೋ ಜಿಪಿ ಬೈಕ್ ರೇಸ್‌ಗಳನ್ನು ಸಹ ಮುಂದೂಡಲಾಗಿದೆ.

ಯುರೋಪಿನ ಅನೇಕ ದೇಶಗಳಲ್ಲಿ 1000 ಜನರು ಒಟ್ಟಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಅಮೆರಿಕಾ ದೇಶವು ಸದ್ಯಕ್ಕೆ ಕರೋನಾ ವೈರಸ್‌ನಿಂದ ಹೆಚ್ಚು ತೊಂದರೆಗೀಡಾಗಿದೆ. ಅಂಕಿಅಂಶಗಳ ಪ್ರಕಾರ, ಕರೋನಾ ವೈರಸ್‌ನಿಂದ ಅಮೆರಿಕದಲ್ಲಿ ಇದುವರೆಗೂ 50 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.


Click it and Unblock the Notifications