ಪೆಟ್ರೋಲ್ ಎಂಜಿನ್ ಸೇರಿ ಹಲವು ಹೊಸ ಬದಲಾವಣೆ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಎಕ್ಸ್‌ಯುವಿ500

ಇದೇ ವರ್ಷಾಂತ್ಯದೊಳಗೆ ಬಿಡುಗಡೆಯಾಗಬೇಕಿದ್ದ ಹೊಸ ತಲೆಮಾರಿನ ಮಹೀಂದ್ರಾ ಎಕ್ಸ್‌ಯುವಿ500 ಕಾರು ಕರೋನಾ ವೈರಸ್ ಪರಿಣಾಮ ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಿಸಲಿದ್ದು, ಸದ್ಯ ಬಿಎಸ್-6 ಎಂಜಿನ್‌ನೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿದೆ.

ಹಲವು ಹೊಸ ಬದಲಾವಣೆ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಎಕ್ಸ್‌ಯುವಿ500

ಬಿಎಸ್-6 ಎಕ್ಸ್‌ಯುವಿ500 ಮಾದರಿಯು ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿದ್ದು, ನ್ಯೂ ಜನರೇಷನ್ ಮಾದರಿಯು ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ನ್ಯೂ ಜನರೇಷನ್ ಮಾದರಿಯಲ್ಲಿ ನವೀಕರಿಸಲಾದ ಮುಂಭಾಗದ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಹಿಂಭಾಗದಲ್ಲಿ ನವೀಕರಿಸಲಾದ ಬಂಪರ್ ಪ್ರಮುಖ ಆಕರ್ಷಣೆಯಾಗಲಿದೆ.

ಹಲವು ಹೊಸ ಬದಲಾವಣೆ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಎಕ್ಸ್‌ಯುವಿ500

ನ್ಯೂ ಜನರೇಷನ್ ಕಾರು ಮಾದರಿಯನ್ನು ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ತವಕದಲ್ಲಿದ್ದ ಮಹೀಂದ್ರಾ ಯೋಜನೆಗೆ ಕರೋನಾ ವೈರಸ್ ಬ್ರೇಕ್ ಹಾಕಿದ್ದು, 2021ರ ಆರಂಭದಲ್ಲಿ ಎಕ್ಸ್‌ಯುವಿ500 ಸೇರಿದಂತೆ ಸ್ಕಾರ್ಪಿಯೋ ಕೂಡಾ ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಲ್ಲಿದೆ.

ಹಲವು ಹೊಸ ಬದಲಾವಣೆ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಎಕ್ಸ್‌ಯುವಿ500

ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಕಾರು ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರಾಟಕ್ಕೆ ಲಭ್ಯವಿದೆ.

ಹಲವು ಹೊಸ ಬದಲಾವಣೆ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಎಕ್ಸ್‌ಯುವಿ500

2.2-ಲೀಟರ್ ಡೀಸೆಲ್ ಮಾದರಿಯು ಸದ್ಯ ಜಾರಿಗೆ ಬಂದಿರುವ ಬಿಎಸ್-6 ನಿಯಮದಂತೆ ಉನ್ನತೀಕರಣಗೊಂಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 152-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹಲವು ಹೊಸ ಬದಲಾವಣೆ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಎಕ್ಸ್‌ಯುವಿ500

ಆದರೆ ನ್ಯೂ ಜನರೇಷನ್ ಎಕ್ಸ್‌ಯುವಿ500 ಕಾರಿನಲ್ಲಿ ಪರಿಚಯಿಸಲಾಗುತ್ತಿರುವ 2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯು ಮ್ಯಾನುವಲ್ ಜೊತೆ ಆಟೋಮ್ಯಾಟಿಕ್ ಮಾದರಿಯಲ್ಲೂ ಖರೀದಿಗೆ ಲಭ್ಯವಿರಲಿದ್ದು, ಹೊಸದಾಗಿ ಅಭಿವೃದ್ದಿಗೊಳಿಸಲಾಗುತ್ತಿರುವ 2.0-ಲೀಟರ್ ಪೆಟ್ರೋಲ್ ಮಾದರಿಯು ಪ್ರಮುಖ ಆಕರ್ಷಣೆಯಾಗಲಿದೆ.

ಹಲವು ಹೊಸ ಬದಲಾವಣೆ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಎಕ್ಸ್‌ಯುವಿ500

2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದ್ದು, ಪೆಟ್ರೋಲ್ ಮಾದರಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಳ್ಳಲಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹಲವು ಹೊಸ ಬದಲಾವಣೆ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಎಕ್ಸ್‌ಯುವಿ500

ಎಕ್ಸ್‌ಯುವಿ500 ಕಾರು ಮಾದರಿಯು 7-ಸೀಟರ್ ಎಸ್‌ಯುವಿ ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.18 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 17.68 ಲಕ್ಷ ಬೆಲೆ ಹೊಂದಿದೆ. ನ್ಯೂ ಜನರೇಷನ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ತುಸು ದುಬಾರಿಯಾಗಿರಲಿದ್ದು, ಪೆಟ್ರೋಲ್ ಮಾದರಿಯು ಎಸ್‌ಯುವಿ ಪ್ರಿಯರನ್ನು ಸೆಳೆಯಲಿದೆ.

Most Read Articles

Kannada
English summary
2021 Mahindra XUV500 To Offer BS6 2.2 Litre Diesel and 2.0-Litre Petrol Engines. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X