2021ಕ್ಕೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ನ್ಯೂ ಜನರೇಷನ್ ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಿದೆ. ಇದೀಗ ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಸ್ಕಾರ್ಪಿಯೋ ಎಸ್‍ಯುವಿಯ ಹೊಸ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

2021ಕ್ಕೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ ಬಹಳ ದೀರ್ಘಕಾಲದಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಭಾರತೀಯ ಮಾರುಕಟ್ಟೆಯ ಜನಪ್ರಿಯ ಎಸ್‍ಯುವಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕೂಡ ಒಂದಾಗಿದೆ. ಮಹೀಂದ್ರಾ ಕಂಪನಿಯ ಸರಣಿಯ ಕಾರು ಮಾರಾಟದಲ್ಲಿ ಸ್ಕಾರ್ಪಿಯೋ ಎಸ್‍‍ಯುವಿಯ ಕೊಡುಗೆಯು ದೊಡ್ಡದು. 2002ರಲ್ಲಿ ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೋ ಬಿಡುಗಡೆಗೊಳಿಸಿದ ನಂತರ ಎರಡು ಬಾರಿ ನವೀಕರಣಗೊಳಿಸಿದೆ.

2021ಕ್ಕೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಕಂಪನಿಯು ಸ್ಕಾರ್ಪಿಯೋ ಎಸ್‍‍ಯುವಿಯನ್ನು 2006ರಲ್ಲಿ ಮತ್ತು 2014ರಲ್ಲಿ ನವೀಕರಣಗೊಳಿಸಿತ್ತು. ಇನ್ನು ಹೊಸ ತಲೆಮಾರಿನ ಸ್ಕಾರ್ಪಿಯೋ ಎಸ್‍ಯುವಿ 2021ರ ಏಪ್ರಿಲ್ - ಜೂನ್ ತಿಂಗಳ ನಡುವೆ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಕೆಲವು ವರದಿಗಳ ಪ್ರಕಾರ, ಮಹೀಂದ್ರಾಕಂಪನಿಯು ‘ಸ್ಕಾರ್ಪಿಯೋ ಸ್ಟಿಂಗ್' ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದ್ದಾರೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

2021ಕ್ಕೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಇದರಿಂದ ಬಹುಶಃ ನ್ಯೂ ಜನರೇಷನ್ ಸ್ಕಾರ್ಪಿಯೋ ಎಸ್‍ಯುವಿಗೆ ‘ಸ್ಕಾರ್ಪಿಯೋ ಸ್ಟಿಂಗ್ ಎಂಬ ಹೆಸರನ್ನು ಇಡಬಹುದು. ಸ್ಕಾರ್ಪಿಯೋ ಸ್ಟಿಂಗ್ ಎಂಬ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ, ಇನ್ನು ನ್ಯೂ ಜನರೇಷನ್ ಸ್ಕಾರ್ಪಿಯೋ ಎಸ್‍ಯುವಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

2021ಕ್ಕೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ನ್ಯೂ ಜನರೇಷನ್ ಸ್ಕಾರ್ಪಿಯೋ ಭಾರತದಲ್ಲಿ ಈಗಾಗಲೇ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಹೊಸ ಸ್ಕಾರ್ಪಿಯೋ ಎಸ್‍ಯುವಿಗೆ ಇನ್ನಷ್ಟು ಶಕ್ತಿ ತುಂಬಲು ಮಹೀಂದ್ರಾ ಹೊಚ್ಚ ಹೊಸ 2.0-ಲೀಟರ್ ಟರ್ಬೊ-ಡೀಸೆಲ್ ಎಂಜಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಗಳು ಪ್ರಕಟವಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2021ಕ್ಕೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಹೊಸ ಸ್ಕಾರ್ಪಿಯೋದಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ. ಇದರೊಂದಿಗೆ 4ಡಬ್ಲ್ಯೂಡಿ ಸಿಸ್ಟಂ ಅನ್ನು ಹೊಂದಿರಲಿದೆ. ಈ ಹೂಸ ಸ್ಕಾರ್ಪಿಯೋ ಎಸ್‍ಯುವಿಯು ಹೆಚ್ಚು ನವೀಕರಿಸಿದ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ.

2021ಕ್ಕೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಈ ಎಸ್‍ಯುವಿಯು ಕಟ್ಟುನಿಟ್ಟಾದ ಪಾದಚಾರಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳನ್ನು ಪೂರೈಸಲು ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತಿದ್ದಾರೆ. ಹೊಸ ಸ್ಕಾರ್ಪಿಯೋ ಎಸ್‍ಯುವಿಯ ಮುಂಭಾಗದಲ್ಲಿ ಹೆಡ್ ಲ್ಯಾಂಪ್ ಪಕ್ಕ ಸುತ್ತುವರೆದಿರುವ ಸ್ಲೇಟೆಡ್ ಪ್ರಮುಖ ಗ್ರಿಲ್ ಅಂಶಗಳನ್ನು ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

2021ಕ್ಕೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಆದರೆ ಇದು ಕೇವಲ ಸ್ಪಾಟ್ ಟೆಸ್ಟ್ ನಲ್ಲಿ ಅಳವಡಿಸಿರಬಹುದು. ಉತ್ಪಾದನೆಯ ಹಂತದಲ್ಲಿ ಈ ಅಂಶಗಳನ್ನು ಒಳಗೊಂಡಿರುವುದರಿಲ್ಲ ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ಎಸ್‍ಯುವಿಯ ಹಿಂಭಾದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‌ಗೇಟ್ ಮತ್ತು ಸೈಡ್ ಹಿಂಗ್ಡ್ ಬೂಟ್ ಓಪನರ್ ಅನ್ನು ಹೊಂದಿರುವಂತೆ ನಮಗೆ ಸ್ಪಾಟ್ ಟೆಸ್ಟ್ ಚಿತ್ರದಲ್ಲಿ ಕಾಣುತ್ತದೆ.

2021ಕ್ಕೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಇನ್ನು ಈ ಎಸ್‍ಯುವಿಯ ಒಳಭಾಗದ ಕ್ಯಾಬಿನ್ ನಲ್ಲಿ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ನವೀಕರಿಸಿದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಹೆಚ್ಚು ದುಬಾರಿ ಸೆಂಟರ್ ಕನ್ಸೋಲ್, ಮತ್ತು ಮರಾಜೋ ಎಸ್‍ಯುವಿಯಲ್ಲಿರುವಂತೆ ಹೊಸ ಕಂಟ್ರೋಲ್ ಗಳು ಮತ್ತು ಡಯಲ್‌ಗಳನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
All-New Mahindra Scorpio To Launch Between April-June 2021.Read In Kannada.
Story first published: Wednesday, November 18, 2020, 19:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X