ವಾಹನಗಳ ಸ್ಕ್ರ್ಯಾಪ್ ನೀತಿ ಜಾರಿ ವಿಳಂಬ, ಖಡಕ್ ಸೂಚನೆ ನೀಡಿದ ಎನ್‌ಜಿಟಿ

ವಾಹನಗಳ ಸ್ಕ್ರ್ಯಾಪ್ ನೀತಿ ಜಾರಿಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.

ವಾಹನಗಳ ಸ್ಕ್ರ್ಯಾಪ್ ನೀತಿ ಜಾರಿ ವಿಳಂಬ, ಖಡಕ್ ಸೂಚನೆ ನೀಡಿದ ಎನ್‌ಜಿಟಿ

2021ರ ಜನವರಿ 6ರೊಳಗೆ ಸ್ಕ್ರ್ಯಾಪ್ ನೀತಿಯ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸದಿದ್ದರೆ, ಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿ ವಿರುದ್ಧ ಕ್ರಮಕೈಗೊಳ್ಳಲಾಗುವುದೆಂದು ಎನ್‌ಜಿಟಿ ಹೇಳಿದೆ. ಸ್ಕ್ರ್ಯಾಪ್ ನೀತಿಯ ಅನುಷ್ಠಾನವು ವಿಳಂಬವಾಗುತ್ತಿರುವ ಬಗ್ಗೆ ಜಂಟಿ ಕಾರ್ಯದರ್ಶಿ ಮಾಹಿತಿ ನೀಡಬೇಕು. ಈ ಬಗ್ಗೆ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಎನ್‌ಜಿಟಿ ಹೇಳಿದೆ. ಸಾರಿಗೆ ಇಲಾಖೆಯು 2018ರಿಂದಲೇ ವಾಹನಗಳ ಸ್ಕ್ರಾಪೇಜ್ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.

ವಾಹನಗಳ ಸ್ಕ್ರ್ಯಾಪ್ ನೀತಿ ಜಾರಿ ವಿಳಂಬ, ಖಡಕ್ ಸೂಚನೆ ನೀಡಿದ ಎನ್‌ಜಿಟಿ

ಸ್ಕ್ರ್ಯಾಪೇಜ್ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದೆಂದು ಸಾರಿಗೆ ಸಚಿವ ನಿತಿನ್ ಗಡ್ಕರಿರವರು ಅನೇಕ ಬಾರಿ ತಮ್ಮ ಭಾಷಣಗಳಲ್ಲಿ ಹೇಳಿದ್ದಾರೆ. ಆದರೆ ಸಾರಿಗೆ ಇಲಾಖೆಯು ಸ್ಕ್ರ್ಯಾಪ್ ನೀತಿಯನ್ನು ಜಾರಿಗೆ ತರಲು ಪ್ರಯತ್ನಗಳನ್ನು ನಡೆಸುತ್ತಲೇ ಇದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವಾಹನಗಳ ಸ್ಕ್ರ್ಯಾಪ್ ನೀತಿ ಜಾರಿ ವಿಳಂಬ, ಖಡಕ್ ಸೂಚನೆ ನೀಡಿದ ಎನ್‌ಜಿಟಿ

ದೇಶದಲ್ಲಿ ಹಳೆಯ ವಾಹನಗಳನ್ನು ನಾಶಮಾಡುವ ಸರ್ಕಾರದ ಯಾವುದೇ ನೀತಿಯಿಲ್ಲದಿರುವುದರಿಂದ ಹಳೆಯ ವಾಹನಗಳಿಂದ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಎನ್‌ಜಿಟಿ ಹೇಳಿದೆ. ಹಳೆಯ ವಾಹನಗಳಿಗೆ ಆದಷ್ಟು ಬೇಗ ನಿಯಮಗಳನ್ನು ನಿಗದಿಪಡಿಸಬೇಕೆಂದು ಎನ್‌ಜಿಟಿ ಹೇಳಿದೆ.

ವಾಹನಗಳ ಸ್ಕ್ರ್ಯಾಪ್ ನೀತಿ ಜಾರಿ ವಿಳಂಬ, ಖಡಕ್ ಸೂಚನೆ ನೀಡಿದ ಎನ್‌ಜಿಟಿ

ಸದ್ಯಕ್ಕೆ ಸಣ್ಣ ಕಾರ್ಖಾನೆಗಳಲ್ಲಿ ಅಸಂಘಟಿತ ರೂಪದಲ್ಲಿ ವಾಹನಗಳನ್ನು ನಾಶಪಡಿಸಲಾಗುತ್ತಿದೆ. ಇದರಿಂದಾಗಿ ಆ ಕಾರ್ಖಾನೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯ ಉಂಟಾಗುತ್ತಿದೆ. ಈ ಕಾರ್ಖಾನೆಗಳಲ್ಲಿ ಸರಿಯಾದ ನೀತಿಗಳನ್ನು ಪಾಲಿಸಲಾಗುತ್ತಿಲ್ಲ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವಾಹನಗಳ ಸ್ಕ್ರ್ಯಾಪ್ ನೀತಿ ಜಾರಿ ವಿಳಂಬ, ಖಡಕ್ ಸೂಚನೆ ನೀಡಿದ ಎನ್‌ಜಿಟಿ

ದೇಶಾದ್ಯಂತ 2025ರ ವೇಳೆಗೆ ಸುಮಾರು 2 ಕೋಟಿಯಷ್ಟು ಹಳೆಯ ವಾಹನಗಳಿರಲಿವೆ ಎಂದು ಹೇಳಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯ ವಾಹನಗಳನ್ನು ವ್ಯವಸ್ಥಿತ ರೀತಿಯಲ್ಲಿ ಸ್ಕ್ರ್ಯಾಪ್ ಮಾಡಲು ರಾಷ್ಟ್ರೀಯ ಸ್ಕ್ರ್ಯಾಪ್ ನೀತಿಯ ಅಗತ್ಯವಿದೆ. ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಅಗತ್ಯ ಮಾರ್ಗಸೂಚಿಗಳನ್ನು ರೂಪಿಸುವಂತೆ ಎನ್‌ಜಿಟಿ ಸಾರಿಗೆ ಸಚಿವಾಲಯಕ್ಕೆ ಆದೇಶ ನೀಡಿದೆ.

ವಾಹನಗಳ ಸ್ಕ್ರ್ಯಾಪ್ ನೀತಿ ಜಾರಿ ವಿಳಂಬ, ಖಡಕ್ ಸೂಚನೆ ನೀಡಿದ ಎನ್‌ಜಿಟಿ

ದೇಶದ ಪ್ರಮುಖ ವಾಹನ ಸಂಘಗಳಾದ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಫಾಡಾ) ಹಾಗೂ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ (ಸಿಯಾಮ್) ಶೀಘ್ರವಾಗಿ ಪರಿಣಾಮಕಾರಿ ವಾಹನ ಸ್ಕ್ರ್ಯಾಪ್ ನೀತಿಯನ್ನು ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

Most Read Articles

Kannada
English summary
NGT directs transport ministry to implement vehicle scrappage policy. Read in Kannada.
Story first published: Tuesday, July 28, 2020, 18:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X