ಏಪ್ರಿಲ್ 20ರಿಂದ ಆರಂಭವಾಗಲಿದೆ ಟೋಲ್ ಶುಲ್ಕ ಸಂಗ್ರಹ

ಲಾಕ್‌ಡೌನ್ಅವಧಿಯಲ್ಲಿ ವಾಹನಗಳು ರಸ್ತೆಗಿಳಿಯದಂತೆ ಸೂಚಿಸಲಾಗಿದೆ. ಈ ಕಾರಣಕ್ಕೆ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳು ಕಂಡು ಬರುತ್ತಿಲ್ಲ. ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳು ಹಾಗೂ ತುರ್ತು ವಾಹನಗಳು ಮಾತ್ರ ಸಂಚರಿಸುತ್ತಿವೆ. ಈ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಶುಲ್ಕ ಸಂಗ್ರಹವನ್ನು ಸ್ಥಗಿತಗೊಳಿಸಲಾಗಿತ್ತು.

ಏಪ್ರಿಲ್ 20ರಿಂದ ಆರಂಭವಾಗಲಿದೆ ಟೋಲ್ ಶುಲ್ಕ ಸಂಗ್ರಹ

ಟೋಲ್‌ಗಳಲ್ಲಿನ ಶುಲ್ಕ ಸಂಗ್ರಹವು ಶೀಘ್ರದಲ್ಲೇ ಮತ್ತೆ ಪ್ರಾರಂಭವಾಗಲಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್‌ಗಳಲ್ಲಿ ಏಪ್ರಿಲ್ 20ರಿಂದ ಟೋಲ್ ಸಂಗ್ರಹವನ್ನು ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಒಳಗಾಗಿದೆ.

ಏಪ್ರಿಲ್ 20ರಿಂದ ಆರಂಭವಾಗಲಿದೆ ಟೋಲ್ ಶುಲ್ಕ ಸಂಗ್ರಹ

ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ನಂತರ ಮಾರ್ಚ್ 25ರಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಲಾಗಿತ್ತು. ತುರ್ತು ವಾಹನಗಳ ಓಡಾಟಕ್ಕೆ ಯಾವುದೇ ಅಡ್ಡಿಯಾಗದಿರಲಿ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿತ್ತು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಏಪ್ರಿಲ್ 20ರಿಂದ ಆರಂಭವಾಗಲಿದೆ ಟೋಲ್ ಶುಲ್ಕ ಸಂಗ್ರಹ

ಟ್ರಕ್‌ಗಳ ಹಾಗೂ ಇತರ ಲಗೇಜ್ ವಾಹನಗಳ ಸಂಚಾರಕ್ಕೆ ಗೃಹ ಸಚಿವಾಲಯವು ಅನುಮತಿ ನೀಡಿದರೆ ಟೋಲ್ ಸಂಗ್ರಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೆದ್ದಾರಿ ಸಚಿವಾಲಯವು ಎನ್‌ಹೆಚ್‌ಎಐಗೆ ಪತ್ರ ಬರೆದಿದೆ.

ಏಪ್ರಿಲ್ 20ರಿಂದ ಆರಂಭವಾಗಲಿದೆ ಟೋಲ್ ಶುಲ್ಕ ಸಂಗ್ರಹ

ಏಪ್ರಿಲ್ 20ರಿಂದ ಟೋಲ್ ಸಂಗ್ರಹವನ್ನು ಪುನರಾರಂಭಿಸಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ. ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ) ಸರ್ಕಾರದ ಈ ಕ್ರಮವನ್ನು ವಿರೋಧಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಏಪ್ರಿಲ್ 20ರಿಂದ ಆರಂಭವಾಗಲಿದೆ ಟೋಲ್ ಶುಲ್ಕ ಸಂಗ್ರಹ

ಎಐಎಂಟಿಸಿ ದೇಶದಲ್ಲಿ 95 ಲಕ್ಷ ಟ್ರಕ್‌ಗಳನ್ನು ಪ್ರತಿನಿಧಿಸುತ್ತದೆ. ಸರ್ಕಾರದ ಕ್ರಮವನ್ನು ಭಯಾನಕ ಎಂದು ಬಣ್ಣಿಸಿದೆ. ಎಲ್ಲಾ ರೀತಿಯ ಅಪಾಯಗಳು ಹಾಗೂ ನಷ್ಟಗಳ ಹೊರತಾಗಿಯೂ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಸರ್ಕಾರವು ಬಯಸಿದೆ.

ಏಪ್ರಿಲ್ 20ರಿಂದ ಆರಂಭವಾಗಲಿದೆ ಟೋಲ್ ಶುಲ್ಕ ಸಂಗ್ರಹ

ಟ್ರಕ್ ಉದ್ಯಮವು ಸದ್ಯಕ್ಕೆ ನಷ್ಟವನ್ನು ಅನುಭವಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾದರೆ, ಟ್ರಕ್‌ಗಳ ನಿರ್ವಹಣಾ ವೆಚ್ಚವು 20%ನಷ್ಟು ಹೆಚ್ಚಾಗುತ್ತದೆ. ಇದರಿಂದಾಗಿ ಟ್ರಕ್ ಚಾಲಕರು ಟ್ರಕ್ ಚಾಲನೆ ಮಾಡಲು ಹಿಂದೇಟು ಹಾಕುತ್ತಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಏಪ್ರಿಲ್ 20ರಿಂದ ಆರಂಭವಾಗಲಿದೆ ಟೋಲ್ ಶುಲ್ಕ ಸಂಗ್ರಹ

ದೇಶದಲ್ಲಿರುವ 90%ನಷ್ಟು ಟ್ರಕ್‌ಗಳು ಚಾಲಕರಿಲ್ಲದೇ ನಿಂತಲ್ಲೇ ನಿಂತಿವೆ. ಜೊತೆಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೆಚ್ಚಿನ ಟ್ರಕ್‌ಗಳು ಹೆದ್ದಾರಿಗಳಲ್ಲಿ ಸಿಲುಕಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ, ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರವು ಸರಿಯಾದುದಲ್ಲ.

Article Published On: Saturday, April 18, 2020, 17:48 [IST]
English summary
NHAI will resume Toll collection from 20 April. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+