ಶೀಘ್ರದಲ್ಲೇ ಹೊಸ ಎಂಜಿನ್ ಪ್ರೇರಿತ ನಿಸ್ಸಾನ್ ಕಿಕ್ಸ್ ಬಿಡುಗಡೆಗೆ ಭರ್ಜರಿ ಸಿದ್ದತೆ
ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಹೊಸ ಬಿಎಸ್-6 ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಕಿಕ್ಸ್ ಎಸ್‌ಯುವಿ ಮಾದರಿಯಲ್ಲಿ ಈ ಬಾರಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸಿ ಬಿಡುಗಡೆ ಮಾಡುತ್ತಿದೆ.

ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಬಿಎಸ್-6 ನಿಯದ ಪ್ರಕಾರ ಹೊಸ ಕಾರಿನಲ್ಲಿ ಈ ಬಾರಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಡಲಾಗಿದ್ದು, ಪವರ್‌ಫುಲ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿರುವುದು ಪ್ರಮುಖ ಬದಲಾವಣೆಯಾಗಿದೆ. ಹೊಸ ಎಂಜಿನ್ ಪ್ರೇರಿತ ಕಿಕ್ಸ್ ಕಾರು ಮುಂದಿನ ಎರಡು ವಾರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, ಆನ್‌ಲೈನ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಇದೇ ತಿಂಗಳು 15ರಿಂದ ಆರಂಭಿಸಲಾಗುತ್ತಿದೆ.

ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಎಂಜಿನ್ ಆಯ್ಕೆ ಹೊರತುಪಡಿಸಿ ಕಾರಿನ ಹೊರ ವಿನ್ಯಾಸಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಬಿಎಸ್-4 ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದ ಕಿಕ್ಸ್ ಕಾರು ಇದೀಗ 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.
MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಬಿಎಸ್-6 ಮಾದರಿಯಲ್ಲಿ ಡೀಸೆಲ್ ಕಾರು ಮಾದರಿಯ ಮಾರಾಟಕ್ಕೆ ಗುಡ್‌ಬೈ ಹೇಳಲಾಗಿದ್ದು, ಹೊಸದಾಗಿ ಪರಿಚಯಿಸಲಾಗಿರುವ 1.3-ಲೀಟರ್ ಟರ್ಬೋ ಎಂಜಿನ್ ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ಅಧಿಕ ಬಿಎಚ್‌ಪಿ ಉತ್ಪಾದನೆ ಮಾಡುತ್ತದೆ.

ಸಾಮಾನ್ಯ ಮಾದರಿಯ 1.5-ಲೀಟರ್ ಪೆಟ್ರೋಲ್ ಮಾದರಿಯು 105-ಬಿಎಚ್‌ಪಿ, 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ, 1.3-ಲೀಟರ್ ಪೆಟ್ರೋಲ್ ಟರ್ಬೋ ಮಾದರಿಯು 154-ಬಿಎಚ್‌ಪಿ, 245-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದೆ.
MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಹೊಸ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್ಎಲ್, ಎಕ್ಸ್‌ವಿ, ಎಕ್ಸ್‌ವಿ ಪ್ರೀಮಿಯಂ, ಎಕ್ಸ್‌ವಿ ಪ್ರೀಮಿಯಂ ಆಪ್ಷನ್ ಎನ್ನುವ ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿದ್ದು, ಬಿಎಸ್-4 ಮಾದರಿಯಲ್ಲೇ ಬಹುತೇಕ ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಇನ್ನು ನಿಸ್ಸಾನ್ ಬಿಡುಗಡೆ ಮಾಡುತ್ತಿರುವ ಹೊಸ 1.3-ಲೀಟರ್ ಟರ್ಬೋ ಎಂಜಿನ್ ಅನ್ನು ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿಗಳು ಸಹಭಾಗಿತ್ವದ ಯೋಜನೆ ಅಡಿ ಅಭಿವೃದ್ದಿಗೊಳಿಸಿದ್ದು, ಹೊಸ ಎಂಜಿನ್ ಅನ್ನು ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ಡಸ್ಟರ್ ಕೂಡಾ ಪಡೆದುಕೊಳ್ಳಲಿದೆ.
MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಡಸ್ಟರ್ ಫೇಸ್‌ಲಿಫ್ಟ್ ಕಾರನ್ನು ಹೊಸ 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿದ್ದ ರೆನಾಲ್ಟ್ ಕಂಪನಿಯು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಅದೇ ಎಂಜಿನ್ ಇದೀಗ ಕಿಕ್ಸ್ ಬಿಎಸ್-6 ಕಾರಿನಲ್ಲೂ ಲಭ್ಯವಾಗುತ್ತಿದೆ.


Click it and Unblock the Notifications








