ನಿಸ್ಸಾನ್ ಹೊಚ್ಚ ಹೊಸ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯ ಫಸ್ಟ್ ಡ್ರೈವ್ ರಿವ್ಯೂ
ನಿಸ್ಸಾನ್ ಇಂಡಿಯಾ ಕಂಪನಿಯು ಭಾರೀ ನೀರಿಕ್ಷೆಯೊಂದಿಗೆ ತನ್ನ ಹೊಚ್ಚ ಹೊಸ ಮ್ಯಾಗ್ನೈಟ್ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಬಿಡುಗಡೆಗೆ ಸಜ್ಜಾಗಿದ್ದು, ಹೊಸ ಕಾರು ಮುಂದಿನ ತಿಂಗಳು ಡಿಸೆಂಬರ್ 2ಕ್ಕೆ ಅಧಿಕೃತ ಬಿಡುಗಡೆಯಾಗಲಿದೆ. ಹೊಸ ಮ್ಯಾಗ್ನೈಟ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಪ್ರತಿ ಸ್ಪರ್ಧಿಕಾರು ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎಂಬ ನಾಲ್ಕು ವೆರಿಯೆಂಟ್‌ಗಳೊಂದಿಗೆ ಬೆಲೆಯಲ್ಲೂ ಗಮನಸೆಳೆಯಲಿದೆ.
ಹೊಸ ಕಾರು ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಂತಲೂ ಕಡಿಮೆ ಬೆಲೆ ಹೊಂದಿದ್ದು, ಸೆಗ್ಮೆಂಟ್ ಇನ್ ಬೆಸ್ಟ್ ಫೀಚರ್ಸ್‌ಗಳೊಂದಿಗೆ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ. ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿರುವ ಮ್ಯಾಗ್ನೈಟ್ ಕಾರು ವೆರಿಯೆಂಟ್‌ಗಳಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ಗಳಿವೆ.

ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗುತ್ತಿದ್ದು, 1.0-ಲೀಟರ್ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 7 ಸ್ಟೆಪ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯು ವಿಶಾಲವಾಗಿದ್ದು ಉತ್ತಮ ಹ್ಯಾಂಡ್ಲರ್ ಕೂಡ ಆಗಿದೆ. ಆದರೆ ಈ ಎಸ್‌ಯುವಿಯಲ್ಲಿ ಸನ್‌ರೂಫ್ ಕೊರತೆ, ಸಾಫ್ಟ್ ಟಚ್ ವಸ್ತುಗಳ ಕಡಿಮೆ ಬಳಕೆ ಹಾಗೂ ಬೂಟ್ ಡೋರ್‌ಗಳನ್ನು ಸಂಪೂರ್ಣವಾಗಿ ಮುಚ್ಚಲು ಕಷ್ಟಪಡುವ ಸಮಸ್ಯೆಗಳನ್ನು ಹೊಂದಿರುವುದನ್ನು ಹೊರತುಪಡಿಸಿದರೆ ಈ ಸೆಗ್ಮೆಂಟ್‌ನಲ್ಲಿರುವ ಅತ್ಯುತ್ತಮ ಕಂಪ್ಯಾಕ್ಟ್ ಎಸ್‌ಯುವಿಯೆಂದು ಹೇಳಬಹುದು.

ನಿಸ್ಸಾನ್ ಮ್ಯಾಗ್ನೈಟ್‌ನ ಎಸ್‌ಯುವಿಯ ಮೂಲ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 5.50 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 9.50 ಲಕ್ಷ ನಿರೀಕ್ಷೆಗಳಿವೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಮ್ಯಾಗ್ನೈಟ್ ಎಸ್‌ಯುವಿಯು ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರಾ ಎಕ್ಸ್‌ಯುವಿ 300 ಹಾಗೂ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications