ಎಂಟು ವಿವಿಧ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ನಿಸ್ಸಾನ್ ಮ್ಯಾಗ್ನೈಟ್

ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸುವ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಎಂಟು ವಿವಿಧ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ನಿಸ್ಸಾನ್ ಮ್ಯಾಗ್ನೈಟ್

ಸ್ಪೋರ್ಟಿ ಲುಕ್‌ನೊಂದಿಗೆ ಕಟಿಂಗ್ ಎಡ್ಜ್ ಡಿಸೈನ್ ಹೊಂದಿರುವ ಹೊಸ ಮ್ಯಾಗ್ನೈಟ್ ಕಾರು ಒಟ್ಟು ಎಂಟು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಐದು ಸಿಂಗಲ್ ಟೋನ್ ಮತ್ತು ಮೂರು ಡ್ಯುಯಲ್ ಟೋನ್ ಬಣ್ಣಗಳನ್ನು ಹೊಂದಿರಲಿದೆ. ಸಿಂಗಲ್ ಟೋನ್‌ನಲ್ಲಿ ಬ್ಲೇಡ್ ಸಿಲ್ವರ್, ಫ್ಲೈರ್ ಗಾರ್ನೆಟ್ ರೆಡ್, ಆನಾಕ್ಸಿ ಬ್ಲ್ಯಾಕ್, ಸ್ಯಾಂಡ್ ಸ್ಟೋನ್ ಬ್ರೌನ್ ಮತ್ತು ಸ್ಟ್ರಾಮ್ ವೈಟ್ ಬಣ್ಣಗಳನ್ನು ಹೊಂದಿದ್ದರೆ ಡ್ಯುಯಲ್ ಟೋನ್‌ನಲ್ಲಿ ಪರ್ಲ್ ವೈಟ್/ಆನಾಕ್ಸಿ ಬ್ಲ್ಯಾಕ್, ಫ್ಲೈರ್ ಗಾರ್ನೆಟ್ ರೆಡ್/ಆನಾಕ್ಸಿ ಬ್ಲ್ಯಾಕ್ ಮತ್ತು ವಿವಿಡ್ ಬ್ಲ್ಯೂ/ಸ್ಟ್ರಾಮ್ ವೈಟ್ ಬಣ್ಣಗಳ ಆಯ್ಕೆ ಹೊಂದಿದೆ.

ಎಂಟು ವಿವಿಧ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ನಿಸ್ಸಾನ್ ಮ್ಯಾಗ್ನೈಟ್

ಹಾಗೆಯೇ ಹೊಸ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಆಕರ್ಷಕವಾದ ಗ್ರಿಲ್, ಕ್ರೋಮ್ ಸ್ಟ್ರೀಪ್, ಸ್ಲಿಕ್ ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ ವಿನ್ಯಾಸದ ಎಲ್ಇಡಿ ಡಿಆರ್‌ಎಲ್‌ಗಳು, ಫ್ರಂಟ್ ಬಂಪರ್, ಫಾಗ್ ಲ್ಯಾಂಪ್, ಸೆಂಟ್ರಲ್ ಏರ್ ಇನ್‌ಟೆಕ್ ಸೌಲಭ್ಯಗಳಿವೆ.

ಎಂಟು ವಿವಿಧ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ನಿಸ್ಸಾನ್ ಮ್ಯಾಗ್ನೈಟ್

ಹೊಸ ಕಾರಿನ ಸೈಡ್ ಪ್ರೋಫೈಲ್ ಕೂಡಾ ಆಕರ್ಷಕವಾಗಿದ್ದು, 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಟೈಲ್‌ಲೈಟ್ ಸೌಲಭ್ಯದೊಂದಿಗೆ ಕಾರಿನ ಡೋರ್ ತಳಭಾಗದಲ್ಲಿ ಮತ್ತು ರಿಯರ್ ಬಂಪರ್ ಬಳಿ ಸಿಲ್ವರ್ ಕೊಟಿಂಗ್ ಹೊಂದಿರುವ ಆಕ್ಸೆಂಟ್ ನೀಡಲಾಗಿದೆ.

ಎಂಟು ವಿವಿಧ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ನಿಸ್ಸಾನ್ ಮ್ಯಾಗ್ನೈಟ್

ಮ್ಯಾಗ್ನೈಟ್ ಕಾರಿನಲ್ಲಿ ಕಪ್ಪು ಬಣ್ಣದ ವೀಲ್ಹ್ ಆರ್ಚ್, ವೀಲ್ಹ್ ಆರ್ಚ್‌ಗೆ ಹೊಂದಿಕೊಂಡಿರುವ ಬ್ಲ್ಯಾಕ್ ಕ್ಲಾಡಿಂಗ್, ಬೂಟ್ ಲಿಡ್, ಕಾರಿನ ಹಿಂಭಾಗದ ಮಧ್ಯದಲ್ಲಿ ನಿಸ್ಸಾನ್ ಲೊಗೊ ಜೊತೆಗೆ ಮ್ಯಾಗ್ನೈಟ್ ಲೊಗೊ ನೀಡಲಾಗಿದ್ದು, ಕಾರಿನ ಹೊರ ನೋಟಕ್ಕೆ ಮತ್ತಷ್ಟು ಆಕರ್ಷಣೆ ನೀಡಲಿವೆ.

ಎಂಟು ವಿವಿಧ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ನಿಸ್ಸಾನ್ ಮ್ಯಾಗ್ನೈಟ್

ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಾರಿನಲ್ಲಿ ಹೊರಭಾಗದಂತೆ ಒಳಭಾಗದಲ್ಲೂ ಆಕರ್ಷಕ ವಿನ್ಯಾಸವನ್ನು ನೀಡಿದ್ದು, ಸಂಪೂರ್ಣವಾಗಿ ಕಪ್ಪು ಬಣ್ಣದ ಕ್ಯಾಬಿನ್ ಪ್ರೀಮಿಯಂ ಅನುಭವ ನೀಡುತ್ತದೆ. ಆಸನಗಳಲ್ಲಿ ಮಾತ್ರ ಗ್ರೇ ಬಣ್ಣವನ್ನು ಬಣ್ಣವನ್ನು ಬಳಕೆ ಮಾಡಲಾಗಿದ್ದು, ಫ್ಲ್ಯಾಟ್ ಬಾಟಮ್ ಸ್ಪೀರಿಂಗ್ ವೀಲ್ಹ್, ಮೌಂಟೆಡ್ ಕಂಟ್ರೋಲ್ಸ್, 7-ಇಂಚಿನ ಫುಲ್ ಡಿಜಿಟಲ್ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಕ್ಲಸ್ಟರ್, ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ ಹೊಂದಿದೆ.

ಎಂಟು ವಿವಿಧ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ನಿಸ್ಸಾನ್ ಮ್ಯಾಗ್ನೈಟ್

ಹಿಂಬದಿಯಲ್ಲಿ ಆರಾಮದಾಯಕ ಆಸನಗಳೊಂದಿಗೆ ಸೆಂಟರ್ ಆರ್ಮ್ ರೆಸ್ಟ್, ರಿಯರ್ ಎಸಿ ವೆಂಟ್ಸ್, 60:40 ಅನುಪಾತದಲ್ಲಿ ಮಡಿಕೆ ಮಾಡಬಹುದಾದ ಆಸನಗಳು, 334-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ನೀಡಲಾಗಿದ್ದು, ಹೆಚ್ಚುವರಿ ಬೂಟ್ ಸ್ಪೆಸ್ ಅವಶ್ಯವಿದ್ದಲ್ಲಿ ಹಿಂಬದಿಯ ಆಸನಗಳನ್ನು ಮಡಿಕೆ ಮಾಡಿಕೊಳ್ಳಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಂಟು ವಿವಿಧ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ನಿಸ್ಸಾನ್ ಮ್ಯಾಗ್ನೈಟ್

ಎಂಜಿನ್ ಮತ್ತು ಪರ್ಫಾಮೆನ್ಸ್

ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಎಂಜಿನ್ ಹಾಗೂ ಟ್ರಾನ್ಸ್ ಮಿಷನ್ ಆಯ್ಕೆಗಳ ಬಗ್ಗೆ ಅಧಿಕೃತವಾದ ಮಾಹಿತಿ ನೀಡಿಲ್ಲವಾದರೂ ಕಂಪನಿಯು ಹೊಸ ಕಾರಿನಲ್ಲಿ 1.0-ಲೀಟರ್ ಸಾಮರ್ಥ್ಯದ ಮೂರು ಸಿಲಿಂಡರಿನ ಪೆಟ್ರೋಲ್ ಎಂಜಿನ್ ಅಳವಡಿಸುವುದು ಬಹುತೇಕ ಖಚಿತವಾಗಿದೆ. ಈ ಎಂಜಿನ್ ಅನ್ನು ರೆನಾಲ್ಟ್ ಟ್ರೈಬರ್‌ನಿಂದ ಎರವಲು ಪಡೆದುಕೊಂಡಿರುವ ಕಂಪನಿಯ ಎಕ್ಸ್‌ಟ್ರಾನಿಕ್ ಸಿವಿಟಿ ಗೇರ್‌ಬಾಕ್ಸ್ ಮತ್ತು ಬೆಸ್ ವೆರಿಯೆಂಟ್‌ಗಳಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ.

ಎಂಟು ವಿವಿಧ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ನಿಸ್ಸಾನ್ ಮ್ಯಾಗ್ನೈಟ್

ಮ್ಯಾಗ್ನೈಟ್ ಕಾರಿನಲ್ಲಿ ನಿಸ್ಸಾನ್ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.50 ಲಕ್ಷದಿಂದ ರೂ.11 ಲಕ್ಷ ಬೆಲೆ ಅಂತರದಲ್ಲಿ ಮಾರಾಟ ಮಾಡುವ ನೀರಿಕ್ಷೆಯಲ್ಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಎಂಟು ವಿವಿಧ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ನಿಸ್ಸಾನ್ ಮ್ಯಾಗ್ನೈಟ್

ಹೊಸ ಕಾರಿನ ಮೂಲಕ ಕಾರು ಮಾರಾಟದಲ್ಲಿ ಮತ್ತೊಂದು ಹಂತದ ಯಶಸ್ವಿ ನೀರಿಕ್ಷೆಯಲ್ಲಿರುವ ನಿಸ್ಸಾನ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಾದ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Friday, October 23, 2020, 8:45 [IST]
English summary
Nissan Magnite To Be Offered In Eight Colour Options. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+