ಕರೋನಾ ವೈರಸ್ ಎಫೆಕ್ಟ್- ಇನ್ಮುಂದೆ ಮಾಸ್ಕ್ ಇಲ್ಲದೆ ಪೆಟ್ರೋಲ್ ಬಂಕ್‌ಗೆ ಬರಲೇಬೇಡಿ..

ಮಾಹಾಮಾರಿ ಕರೋನಾ ವೈರಸ್ ತಡೆಯುವುದಕ್ಕಾಗಿ ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸೋಂಕು ಹರಡದಂತೆ ಜಾರಿಗೆ ತರವಾಗಿರುವ ಲಾಕ್‌ಡೌನ್ ಅನ್ನು ಉಲ್ಲಂಘನೆ ಮಾಡಿ ಜೀವಕ್ಕೆ ಅಪಾಯ ತಂದುಕೊಳ್ಳುವವರ ಸಂಖ್ಯೆಗೇನು ಕಡಿಮೆಯಿಲ್ಲ.

ಇನ್ಮುಂದೆ ಮಾಸ್ಕ್ ಇಲ್ಲದೆ ಪೆಟ್ರೋಲ್ ಬಂಕ್‌ಗೆ ಬರಲೇಬೇಡಿ..

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸೋಂಕಿಗೆ ತುತ್ತಾಗದಿರುವಂತೆ ಎಷ್ಟೇ ಎಚ್ಚರಿಕೆ ನೀಡಿದರೂ ಕೂಡಾ ಕೆಲವರು ಮಾತ್ರ ನಿಯಮ ಉಲ್ಲಂಘಿಸಿ ಹೊರಗೆ ತಿರುವುದನ್ನು ನಿಲ್ಲಿಸುತ್ತಿಲ್ಲ. ಜೊತೆಗೆ ಹಲವಾರು ವಾಹನ ಸವಾರರು ಅನಗತ್ಯವಾಗಿ ವಾಹನಗಳ ಚಾಲನೆ ಮಾಡುತ್ತಿದ್ದು, ಯಾವುದೇ ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳದಿರುವುದು ಅಪಾಯವನ್ನು ತಾವೇ ಆಹ್ವಾನ ಮಾಡುತ್ತಿದ್ದಾರೆ. ಇದರಿಂದ ಸುರಕ್ಷಾ ಕ್ರಮಗಳನ್ನು ಪಾಲಿಸದ ವಾಹನ ಸವಾರರಿಗೆ ಅರುಣಾಚಲಪ್ರದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.

ಇನ್ಮುಂದೆ ಮಾಸ್ಕ್ ಇಲ್ಲದೆ ಪೆಟ್ರೋಲ್ ಬಂಕ್‌ಗೆ ಬರಲೇಬೇಡಿ..

ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಹಾಕುವ ವಾಹನ ಸವಾರರಿಗೆ ಮಾತ್ರವೇ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾರಾಟ ಮಾಡಲಾಗುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಇನ್ಮುಂದೆ ಮಾಸ್ಕ್ ಇಲ್ಲದೆ ಪೆಟ್ರೋಲ್ ಬಂಕ್‌ಗೆ ಬರಲೇಬೇಡಿ..

ಅರುಣಾಚಲಪ್ರದೇಶದಲ್ಲಿ ಮಾತ್ರವಲ್ಲದೆ ಓಡಿಸ್ಸಾದಲ್ಲೂ ಕೂಡಾ ಮಾಸ್ಕ್ ಧರಿಸದ ವಾಹನ ಸವಾರರಿಗೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡುವುದನ್ನು ನಿರ್ಬಂಧಿಸಲಾಗಿದ್ದು, ಸೋಂಕು ಹರಡದಿರುವಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

ಇನ್ಮುಂದೆ ಮಾಸ್ಕ್ ಇಲ್ಲದೆ ಪೆಟ್ರೋಲ್ ಬಂಕ್‌ಗೆ ಬರಲೇಬೇಡಿ..

ದೇಶಾದ್ಯಂತ ಈಗಾಗಲೇ 30 ಸಾವಿರ ಕರೋನಾ ವೈರಸ್ ಪಾಸಿಟಿವ್ ಕೇಸ್‌ಗಳು ದಾಖಲಾಗಿದ್ದು, ಬರೋಬ್ಬರಿ 940 ಜನ ಪ್ರಾಣಕಳೆದುಕೊಂಡಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಕರೋನಾ ನಿಯಂತ್ರಣದಲ್ಲಿದ್ದರೂ ಎಚ್ಚರಿಕೆ ವಹಿಸದೆ ಹೋದಲ್ಲಿ ಮತ್ತಷ್ಟು ಪ್ರಾಣಹಾನಿಯಾಗುವುದರಲ್ಲಿ ಎರಡು ಮಾತಿಲ್ಲ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಇನ್ಮುಂದೆ ಮಾಸ್ಕ್ ಇಲ್ಲದೆ ಪೆಟ್ರೋಲ್ ಬಂಕ್‌ಗೆ ಬರಲೇಬೇಡಿ..

ಇದಕ್ಕಾಗಿ ಪ್ರತಿಯೊಬ್ಬರು ಲಾಕ್‌ಡೌನ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವ ಮೂಲಕ ವೈರಸ್ ಹೊಡೆದೊಡಿಸಲು ನೆರವಾಗಬೇಕಿದ್ದು, ಅನಗತ್ಯವಾಗಿ ಹೊರಗೆ ತಿರುಗುವುದನ್ನು ಕಡಿಮೆ ಮಾಡುವ ಮೂಲಕ ಅಗತ್ಯ ಸುರಕ್ಷಾ ನಿಯಮಗಳನ್ನು ಪಾಲನೆ ಮಾಡಬೇಕಿದೆ.

ಇನ್ಮುಂದೆ ಮಾಸ್ಕ್ ಇಲ್ಲದೆ ಪೆಟ್ರೋಲ್ ಬಂಕ್‌ಗೆ ಬರಲೇಬೇಡಿ..

ಇದಕ್ಕಾಗಿಯೇ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದ್ದು, ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳೊಂದಿಗೆ ಲಾಠಿ ರುಚಿ ಸಹ ತೋರಿಸುತ್ತಿದ್ದಾರೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಇನ್ಮುಂದೆ ಮಾಸ್ಕ್ ಇಲ್ಲದೆ ಪೆಟ್ರೋಲ್ ಬಂಕ್‌ಗೆ ಬರಲೇಬೇಡಿ..

ಇದರ ಜೊತೆಗೆ ಸಾರ್ವಜನಿಕರಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಪೊಲೀಸ್ ಸಿಬ್ಬಂದಿಯು ಅನಾವಶ್ಯಕವಾಗಿ ಹೊರಗೆ ತಿರುಗುವವರ ವಿರುದ್ಧದ ಕೇಸ್ ದಾಖಲಿಸುತ್ತಿರುವುದಲ್ಲದೇ ವೈರಸ್ ಹರಡದಂತೆ ಏನೆಲ್ಲಾ ಮುನ್ನಚ್ಚೆರಿಕೆ ವಹಿಸಬೇಕೆಂಬುವುದನ್ನು ಅಚ್ಚುಕಟ್ಟಾಗಾಗಿ ಸಾರ್ವಜನಿಕರಿಗೆ ತಿಳಿಹೇಳುತ್ತಿದ್ದಾರೆ.

ಇನ್ಮುಂದೆ ಮಾಸ್ಕ್ ಇಲ್ಲದೆ ಪೆಟ್ರೋಲ್ ಬಂಕ್‌ಗೆ ಬರಲೇಬೇಡಿ..

ಈ ನಡುವೆ ರಾಜಧಾನಿ ದೆಹಲಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಪೊಲೀಸ್ ಇಲಾಖೆಯು ಲಾಕ್ ಡೌನ್ ಯಶಸ್ವಿಗೊಳಿಸಲು ಪ್ರತ್ಯೇಕ ಪ್ಯಾಟ್ರೋಲ್ ವಾಹನಗಳೊಂದಿಗೆ ಗಸ್ತು ನಿರ್ವಹಣೆ ಮಾಡುತ್ತಿದ್ದು, ವೈರಸ್ ಕುರಿತು ಜಾಗೃತಿಯೊಂದಿಗೆ ಲಾಕ್ ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಶುರುಮಾಡಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಇನ್ಮುಂದೆ ಮಾಸ್ಕ್ ಇಲ್ಲದೆ ಪೆಟ್ರೋಲ್ ಬಂಕ್‌ಗೆ ಬರಲೇಬೇಡಿ..

ವಲಯವಾರು ಕಾರ್ಯಾಚರಣೆ ನಡೆಸಿರುವ ದೆಹಲಿ ಪೊಲೀಸರು ಲಾಕ್ ಡೌನ್ ಉಲ್ಲಂಘಿಸಿ ತಿರುಗುವವರ ವಿರುದ್ಧ ಕಠಿಣ ಕ್ರಮ ಜರಗಿಸುತ್ತಿದ್ದು, ಈಗಾಗಲೇ ಸಾವಿರಾರು ವಾಹನಗಳನ್ನು ಜಪ್ತಿಗೊಳಿಸಲಾಗಿದೆ.

Most Read Articles

Kannada
English summary
No fuel without mask in Arunachal Pradesh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X