ದೆಹಲಿ ಎನ್‌ಸಿಆರ್‌ನಲ್ಲಿ ನಿರ್ಮಾಣವಾಗುತ್ತಿದೆ ಮೂರನೇ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ
ದೆಹಲಿ ಬಳಿ ಮತ್ತೊಂದು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ನೋಯ್ಡಾದ ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಕಾರ್ಯಾಚರಣೆಯನ್ನು ಆರಂಭಿಸಲಿದೆ.

ಈ ಹೊಸ ವಿಮಾನ ನಿಲ್ದಾಣವು 2023ರ ಡಿಸೆಂಬರ್ ಅಥವಾ 2024ರ ಜನವರಿಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ವಿಮಾನ ನಿಲ್ದಾಣ ಯೋಜನೆಗೆ ಉತ್ತರ ಪ್ರದೇಶ ಸರ್ಕಾರವು ಅನುಮೋದನೆಯನ್ನು ನೀಡಿದೆ. ಗೌತಮ್ ಬುದ್ಧ ನಗರ ಜಿಲ್ಲೆಯ ಯಮುನಾ ಎಕ್ಸ್‌ಪ್ರೆಸ್ ವೇ ಬಳಿಯಿರುವ ಪ್ರದೇಶದಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ.

ಈ ವಿಮಾನ ನಿಲ್ದಾಣದ ಕಾಮಗಾರಿಯ ಸಲುವಾಗಿ ಸುಮಾರು ಮೂರು ಸಾವಿರ ಕುಟುಂಬಗಳು ತಮ್ಮ ನೆಲೆಯನ್ನು ಕಳೆದುಕೊಳ್ಳಬೇಕಾಗಿದೆ. ಅವರ ಪುನರ್ವಸತಿ ಕಾರ್ಯವು 2021ರ ಮೇ ತಿಂಗಳಿನೊಳಗೆ ಪೂರ್ಣಗೊಳ್ಳಲಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ನಿಯಾಲ್) ಸಿಇಒ ಅರುಣ್ ವೀರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಯೋಜನೆಯನ್ನು ಸ್ವಿಟ್ಜರ್ಲೆಂಡ್ ಮೂಲದ ಜುರಿಚ್ ಏರ್ ಪೋರ್ಟ್ ಇಂಟರ್ ನ್ಯಾಷನಲ್ ಎಜಿ ನಿರ್ಮಿಸಲಿದ್ದು, ಉತ್ತರ ಪ್ರದೇಶ ಸರ್ಕಾರವು ಎನ್ಐಎಎಲ್ ಯೋಜನೆಯ ಮೇಲ್ವಿಚಾರಣೆ ನಡೆಸಲಿದೆ.

ಈ ವಿಮಾನ ನಿಲ್ದಾಣಕ್ಕೆ ವಿನಾಯಿತಿ ಒಪ್ಪಂದಕ್ಕೆ ಅಕ್ಟೋಬರ್ 7ರಂದು ಸಹಿ ಹಾಕಲಾಗಿದೆ. ಮುಂದಿನ 60 ದಿನಗಳಲ್ಲಿ ಯೋಜನೆಯ ಮಾಸ್ಟರ್ ಪ್ಲ್ಯಾನ್ ಸಲ್ಲಿಸಬೇಕಾಗಿತ್ತು. ಡಿಸೆಂಬರ್ 4ರಂದು ನಾಗರಿಕ ವಿಮಾನಯಾನ ಇಲಾಖೆಗೆ ಮಾಸ್ಟರ್ ಪ್ಲ್ಯಾನ್ ಸಲ್ಲಿಸಲಾಯಿತು ಎಂದು ಅರುಣ್ ವೀರ್ ಸಿಂಗ್ ಹೇಳಿದ್ದಾರೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನಾಗರಿಕ ವಿಮಾನಯಾನ ಇಲಾಖೆಯಿಂದ ಹಿಂತಿರುಗಿದ ನಂತರ ಮಾಸ್ಟರ್ ಪ್ಲ್ಯಾನ್ ಅನ್ನು ಎನ್ಐಎಎಲ್ ಮಂಡಳಿಯ ಅನುಮೋದನೆಗೆ ಕಳುಹಿಸಲಾಗುವುದು. ನಂತರ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ ಎಂದು ಅವರು ಹೇಳಿದರು.

ಈ ಯೋಜನೆಯು ಗಡುವಿನ ಪ್ರಕಾರ ನಡೆದಲ್ಲಿ, 2023ರ ವೇಳೆಗೆ ವಿಮಾನ ನಿಲ್ದಾಣವು ಸಿದ್ಧವಾಗಲಿದೆ. ಇಲ್ಲಿಂದ ಮೊದಲ ವಿಮಾನವು 2023ರ ಡಿಸೆಂಬರ್ ಅಥವಾ 2024ರ ಜನವರಿಯಲ್ಲಿ ಹಾರಾಟ ನಡೆಸಲಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಾಲ್ಕು ಹಂತಗಳಲ್ಲಿ ನಿರ್ಮಿಸಲಾಗುವುದು. ಈ ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕರ ಸಾಮರ್ಥ್ಯ 12 ಮಿಲಿಯನ್ ಆಗಲಿದ್ದು, 2050ರ ವೇಳೆಗೆ ಈ ಸಾಮರ್ಥ್ಯವನ್ನು ವರ್ಷಕ್ಕೆ 7 ಕೋಟಿ ಪ್ರಯಾಣಿಕರಿಗೆ ಹೆಚ್ಚಿಸಲಾಗುವುದು.

ಈ ವಿಮಾನ ನಿಲ್ದಾಣವು ವಿಶ್ವದ 5ನೇ ಅತಿದೊಡ್ಡ ವಿಮಾನ ನಿಲ್ದಾಣವಾಗಲಿದೆ. ಗ್ರೇಟರ್ ನೋಯ್ಡಾದ ಜುವರ್‌ನಲ್ಲಿ ಸುಮಾರು 5000 ಹೆಕ್ಟೇರ್ ಪ್ರದೇಶದಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇದು ದೆಹಲಿ ಹಾಗೂ ಗಾಜಿಯಾಬಾದ್ ನಂತರ ಎನ್‌ಸಿಆರ್‌ನಲ್ಲಿರುವ ಮೂರನೇ ವಿಮಾನ ನಿಲ್ದಾಣವಾಗಲಿದೆ. ಈ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ರೂ.30 ಸಾವಿರ ಕೋಟಿ ವೆಚ್ಚವಾಗಲಿದೆ. ಮೊದಲ ಹಂತದಲ್ಲಿ ಕೇವಲ ಎರಡು ರನ್‌ವೇಗಳನ್ನು ನಿರ್ಮಿಸಲಾಗುವುದು.

ಮುಂಬರುವ ದಿನಗಳಲ್ಲಿ ಇದನ್ನು 8 ರನ್‌ವೇಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ. ಈ ಯೋಜನೆಯನ್ನು ದೀರ್ಘಕಾಲದವರೆಗೆ ತಡೆಹಿಡಿಯಲಾಗಿತ್ತು. ಈಗ ಉತ್ತರ ಪ್ರದೇಶ ಸರ್ಕಾರವು ಯೋಜನೆಗೆ ಚಾಲನೆ ನೀಡಿದ್ದು, ಯಾವಾಗ ಪೂರ್ಣಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications