ಪಿಎಂ ಕೇರ್‌ಗೆ ರೂ.8 ಕೋಟಿ ನೀಡಿದ ಓಲಾ

ಕರೋನಾ ವೈರಸ್‌ನಿಂದಾಗಿ ಜನ ಜೀವನ ತತ್ತರಿಸಿದೆ. ಅನೇಕ ಉದ್ಯಮಿಗಳು, ಆಟೋಮೊಬೈಲ್ ಕಂಪನಿಗಳು, ಸೆಲೆಬ್ರಿಟಿಗಳು ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ.

ಪಿಎಂ ಕೇರ್‌ಗೆ ರೂ.8 ಕೋಟಿ ನೀಡಿದ ಓಲಾ

ಈಗ ಭಾರತದ ಅತಿದೊಡ್ಡ ಕ್ಯಾಬ್ ಸೇವಾ ಕಂಪನಿಯಾದ ಓಲಾ, ಕರೋನಾ ವೈರಸ್ ವಿರುದ್ಧ ಹೋರಾಡಲು ಬಹು ದೊಡ್ಡ ಹೆಜ್ಜೆಯನ್ನಿಟ್ಟಿದೆ. ಓಲಾ ಕಂಪನಿಯು ಇತ್ತೀಚೆಗಷ್ಟೇ ತನ್ನ ಚಾಲಕರಿಗೆ ನೆರವಿನ ಹಸ್ತ ಚಾಚಿತ್ತು.

ಪಿಎಂ ಕೇರ್‌ಗೆ ರೂ.8 ಕೋಟಿ ನೀಡಿದ ಓಲಾ

ಈಗ ಓಲಾ ಕಂಪನಿಯು ಸರ್ಕಾರದ ಜೊತೆಗೆ ಕೈಜೋಡಿಸಿದೆ. ಕೋವಿಡ್ -19 ಸೋಂಕಿನ ವಿರುದ್ಧ ಹೋರಾಡಲು ಕ್ಯಾಬ್ ಸೇವಾ ಕಂಪನಿಯಾದ ಓಲಾ ಪಿಎಂ ಕೇರ್ಸ್‌ಗೆ ರೂ. 5 ಕೋಟಿ ನೀಡಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಪಿಎಂ ಕೇರ್‌ಗೆ ರೂ.8 ಕೋಟಿ ನೀಡಿದ ಓಲಾ

ಇದರ ಜೊತೆಗೆ ಓಲಾ ಕಂಪನಿಯು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.3 ಕೋಟಿಗಳನ್ನು ನೀಡಿದೆ. ಓಲಾ ಗ್ರೂಪ್‌ನ ಸಹ ಸಂಸ್ಥಾಪಕ ಹಾಗೂ ಸಿಇಒ ಆದ ಭಾವೀಶ್ ಅಗರ್‌ವಾಲ್‌ರವರು ಈ ಪರಿಸ್ಥಿತಿಯನ್ನು ಬಿಕ್ಕಟ್ಟಿನ ಸಮಯವೆಂದು ಬಣ್ಣಿಸಿದ್ದಾರೆ.

ಪಿಎಂ ಕೇರ್‌ಗೆ ರೂ.8 ಕೋಟಿ ನೀಡಿದ ಓಲಾ

ಆರೋಗ್ಯ ಇಲಾಖೆಯವರಿಂದ ಹಿಡಿದು ಅಗತ್ಯ ಪೂರೈಕೆದಾರರವರೆಗೆ ನೂರಾರು ಅಧಿಕಾರಿಗಳು, ಕಾನೂನು ಇಲಾಖೆ ಸಿಬ್ಬಂದಿ ಹಾಗೂ ಅನೇಕ ನಾಗರಿಕ ಸೇವಾ ಕಾರ್ಯಕರ್ತರು ಒದಗಿಸಿತ್ತಿರುವ ಸೇವೆಗಳಿಗೆ ನಾವು ಆಭಾರಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಪಿಎಂ ಕೇರ್‌ಗೆ ರೂ.8 ಕೋಟಿ ನೀಡಿದ ಓಲಾ

ದೇಶದ ಜನರಿಗೆ ಸಹಾಯ ಮಾಡುತ್ತಿರುವ ಇವರೆಲ್ಲಾ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಓಲಾ ಕಂಪನಿಯು ಈ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರವನ್ನು ಬೆಂಬಲಿಸಲಿದೆ ಹಾಗೂ ನಮ್ಮ ಸಮುದಾಯಗಳಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ಸಿದ್ಧವಿದೆ ಎಂದು ಅವರು ಹೇಳಿದರು.

ಪಿಎಂ ಕೇರ್‌ಗೆ ರೂ.8 ಕೋಟಿ ನೀಡಿದ ಓಲಾ

ಓಲಾ ಕಂಪನಿಯ ಸಮಾಜ ಕಲ್ಯಾಣ ಇಲಾಖೆಯಾದ ಓಲಾ ಫೌಂಡೇಶನ್ ಇತ್ತೀಚೆಗೆ ಡ್ರೈವ್ ದಿ ಡ್ರೈವರ್ ಫಂಡ್ ಎಂಬ ಯೋಜನೆಯನ್ನು ಆರಂಭಿಸಿದೆ. ಈ ಫಂಡ್‌ನಲ್ಲಿರುವ ಹಣವನ್ನು ಓಲಾ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಬ್‌, ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ಬಳಸಲಾಗುವುದು.

Most Read Articles

Kannada
English summary
Ola cabs donate Rs8 crores towards relief funds to fight Covid 19 pandemic. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X