ಸಂಕಷ್ಟದಲ್ಲಿ ಜನರ ಕೈಹಿಡಿದ ಓಲಾ ಕಂಪನಿಯ ಯೋಜನೆ
ಕರೋನಾ ವೈರಸ್ ಸೋಂಕಿನಿಂದ ಭಾರತ ಮಾತ್ರವಲ್ಲದೇ ಇಡೀ ಜಗತ್ತಿನ ಜನ ತತ್ತರಿಸಿದ್ದಾರೆ. ಇದುವರೆಗೂ 1.5 ಕೋಟಿಗೂ ಹೆಚ್ಚು ಜನರು ಈ ವೈರಸ್ ಸೋಂಕಿಗೆ ಒಳಗಾಗಿದ್ದರೆ, 6.38 ಲಕ್ಷಕ್ಕೂ ಹೆಚ್ಚು ಜನರು ಈ ಮಹಾಮಾರಿ ವೈರಸ್ ನಿಂದ ಸಾವನ್ನಪ್ಪಿದ್ದಾರೆ.

ಈ ಅಪಾಯಕಾರಿ ವೈರಸ್ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ಈ ಹೋರಾಟದಲ್ಲಿ ಆಟೋಮೊಬೈಲ್ ಕಂಪನಿಗಳು ಸಹ ಸರ್ಕಾರದ ಜೊತೆಗೆ ಕೈಜೋಡಿಸಿದ್ದು, ಜನರ ಸಹಾಯಕ್ಕೆ ನಿಂತಿವೆ. ಆಟೋಮೊಬೈಲ್ ಕಂಪನಿಗಳು ಸರ್ಕಾರಗಳಿಗೆ ದೇಣಿಗೆ ನೀಡುವುದರ ಜೊತೆಗೆ, ಜನರಿಗೂ ಸಹ ತಮ್ಮ ಕೈಲಾದ ಸಹಾಯವನ್ನು ನೀಡುತ್ತಿವೆ.

ಇದೇ ರೀತಿ ಖ್ಯಾತ ಕ್ಯಾಬ್ ಸೇವಾ ಕಂಪನಿಯಾದ ಓಲಾ ಸಹ ಸರ್ಕಾರಕ್ಕೆ ಮಾತ್ರವಲ್ಲದೆ ಜನರಿಗೂ ಸಹಾಯ ಹಸ್ತ ಚಾಚಿದೆ. ಇದರ ಜೊತೆಗೆ ಕಂಪನಿಯು ತನ್ನ ಚಾಲಕ-ಪಾಲುದಾರರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕರೋನಾ ವೈರಸ್ ನಿಂದ ಉಂಟಾಗಿರುವ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಓಲಾ ಕಂಪನಿಯು ಡ್ರೈವ್ ದಿ ಡ್ರೈವರ್ ಎಂಬ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ಓಲಾ ಫೌಂಡೇಶನ್, ಕಂಪನಿಯ ಚಾಲಕ-ಪಾಲುದಾರರು ಹಾಗೂ ಅವರ ಕುಟುಂಬಗಳಿಗೆ ಧನಸಹಾಯ ನೀಡುತ್ತಿದೆ.

ಈಗ ಕಂಪನಿಯು ಈ ನಿಧಿಯ ಬಗೆಗಿನ ವಿವರಗಳನ್ನು ಬಿಡುಗಡೆಗೊಳಿಸಿದೆ. ಈ ಯೋಜನೆಯನ್ನು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಆರಂಭಿಸಲಾಯಿತು.ಕಂಪನಿಯು ನೀಡಿದ ಮಾಹಿತಿಯ ಪ್ರಕಾರ, ಈ ನಿಧಿಯ ಮೂಲಕ ಒಟ್ಟು 55,918 ಕುಟುಂಬಗಳಿಗೆ ಸಹಾಯ ಮಾಡಲಾಗಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಈ ನಿಧಿಯ ಸಹಾಯದಿಂದ 25 ನಗರಗಳಲ್ಲಿ 843 ಮೆಡಿಕಲ್ ಎಮರ್ಜೆನ್ಸಿ ಸೆಂಟರ್ ಗಳನ್ನು ತೆರೆಯಲಾಗಿದೆ. ಓಲಾ ಗ್ರೂಪ್ ಪರವಾಗಿ ಈ ನಿಧಿಯಲ್ಲಿ ಹಣವನ್ನು ಸಂಗ್ರಹಿಸಲಾಗಿದೆ.

ಈ ಹಣವನ್ನು ಓಲಾ ಗ್ರೂಪ್ ಸಿಇಒ ಭಾವೀಶ್ ಅಗರ್ ವಾಲ್, ಓಲಾ ಕಂಪನಿಯ ನೌಕರರು, ಓಲಾ ಹೂಡಿಕೆದಾರರು ಸಂಗ್ರಹಿಸಿದ್ದಾರೆ. ಈ ನಿಧಿಯನ್ನು ಬಳಸಲು ದೇಶಾದ್ಯಂತ 200ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಓಲಾ ಕಂಪನಿಯು ತಿಳಿಸಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ಸ್ಥಳಗಳಲ್ಲಿಯೇ ಕಂಪನಿಯು ತನ್ನ ಚಾಲಕ-ಪಾಲುದಾರರಿಗೆ ಅಗತ್ಯ ಪಡಿತರವನ್ನು ಒದಗಿಸಿದೆ. ಇವುಗಳಲ್ಲಿ ಅಕ್ಕಿ, ಹಿಟ್ಟು ಹಾಗೂ ಇನ್ನಿತರ ಅಗತ್ಯ ವಸ್ತುಗಳು ಸೇರಿವೆ. ನಾಲ್ಕು ಸದಸ್ಯರ ಕುಟುಂಬಕ್ಕೆ ಎರಡು ವಾರಗಳವರೆಗೆ ಆಗುವಷ್ಟು ಪಡಿತರವನ್ನು ಕಂಪನಿಯು ಒದಗಿಸಿತ್ತು.


Click it and Unblock the Notifications