ಲಂಡನ್‍ನಲ್ಲಿ ಕ್ಯಾಬ್ ಸೇವೆಯನ್ನು ಆರಂಭಿಸಿದ ಬೆಂಗಳೂರು ಮೂಲದ ಓಲಾ
ಬೆಂಗಳೂರು ಮೂಲದ ಓಲಾ ಕ್ಯಾಬ್ ಸೇವೆಯು ಲಂಡನ್‍ನಲ್ಲಿ ಆರಂಭಿಸಿದೆ. ಓಲಾ ಕಂಪನಿಯು ಲಂಡನ್‍ನಲ್ಲಿ ಸೇವೆ ಆರಂಭಿಸುವುದರ ಬಗ್ಗೆ ಅಧಿಕೃತವಾಗಿ ತಿಳಿಸಿದೆ. ಈಗಾಗಲೇ 25 ಸಾವಿರಕ್ಕೂ ಹೆಚ್ಚು ಚಾಲಕರು ಓಲಾ ಕಂಪನಿಯ ಜೊತೆ ನೋಂದಣಿ ಮಾಡಿಕೊಂಡಿದ್ದಾರೆ.

ಓಲಾ ಭಾರತೀಯ ಟ್ಯಾಕ್ಸಿ ಅಗ್ರಿಗೇಟರ್ ಆಗಿದ್ದು ಅದು ತನ್ನ ಬಳಕೆದಾರರಿಗೆ ರೈಡ್ ಹೇಲಿಂಗ್ ಮತ್ತು ರೈಡ್ ಶೇರಿಂಗ್ ಸೇವೆಗಳನ್ನು ನೀಡುತ್ತಿದೆ. ಓಲಾ ನೇರವಾಗಿ ಜಾಗತಿಕ ಅಗ್ರಿಗೇಟರ್ ಆದ ಉಬರ್‍ಗೆ ನೇರವಾಗಿ ಪೈಪೋಟಿಯನ್ನು ನೀಡುತ್ತದೆ. ಭಾರತದಲ್ಲಿ ಟ್ಯಾಕ್ಸಿ ಸೇವೆಯಲ್ಲಿ ಓಲಾ ತಮ್ಮ ಪ್ರಾಬಲ್ಯವನ್ನು ಸಾಧಿಸಿದೆ. ಇದೀಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮೆರೆಯಲು ಸಜ್ಜಾಗಿದೆ.

ಲಂಡನ್ ವಿಶ್ವದ ಅತ್ಯಾಧುನಿಕ ಮತ್ತು ಅತಿದೊಡ್ಡ ನಗರಗಳಲ್ಲಿ ಒಂದಾಗಿದೆ. ಇಂತಹ ನಗರದಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ಟ್ಯಾಕ್ಸಿಯಲ್ಲಿ ಸವಾರಿ ಮಾಡುತ್ತಾರೆ. ಇದರಿಂದ ಓಲಾ ಈ ನಗರದಲ್ಲಿ ತಮ್ಮ ಸೇವೆ ಸರ್ವಿಸ್ ಅನ್ನು ಆರಂಭಿಸುವುದು ಲಾಭದಾಯಕ ಎಂದು ಭಾವಿಸಿದೆ.

ಓಲಾ ಸಧ್ಯಕ್ಕೆ ಲಂಡನ್‍ನಲ್ಲಿ ಕಂಫರ್ಟ್, ಕಂಫರ್ಟ್ ಎಕ್ಸ್‌ಎಲ್ ಮತ್ತು ಎಕ್ಸೆಕ್ ರೈಡ್ ಎಂಬ ವಿಭಾಗಗಳ ಸೇವೆಯನ್ನು ನೀಡುತ್ತಿದೆ. ಈಗಾಗಲೇ 25,000 ಕ್ಕೂ ಹೆಚ್ಚು ಚಾಲಕರು ನೋಂದಾಯಿಸಿಕೊಂಡಿದ್ದಾರೆ. ಓಲಾ ತನ್ನ ಸೇವೆಯನ್ನು ಲಂಡನ್‍ನಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿದೆ.

ಓಲಾ ತನ್ನ ಚಾಲಕರಿಗೆ ತರಬೇತಿಯನ್ನು ನೀಡಲು ಡ್ರೈವ್‍ಟೆಕ್, ಕನ್ಸಲ್ಟಿಂಗ್ ಮರ್ಸರ್ ಹಾಗೂ ಪಿಯರ್ಸ್‍ನ್‍ರೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಓಲಾ ಉತ್ತಮ ಸೇವೆಯನ್ನು ನೀಡಲು ಅತ್ಯುನ್ನತ ಚಾಲಕನ್ನು ನಿಯೋಜಿಸಿದೆ.

ಪ್ರತಿಯೊಬ್ಬ ಚಾಲಕನು ಆಯ್ಕೆಯಾಗಲು ವರ್ಸಂಟ್ ಸ್ಪೋಕನ್ ಇಂಗ್ಲೀಷ್ ಟೆಸ್ಟ್ ನಲ್ಲಿ ಉತ್ತೀರ್ಣರಾಗಬೇಕಾಗಿತ್ತು. ಇದರಿಂದಾಗಿ ಪ್ರತಿಯೊಬ್ಬ ಚಾಲಕನು ಉತ್ತಮ ಸಂವಹನ ಕಲೆಯನ್ನು ಹೊಂದಿರುತ್ತಾರೆ.

ಓಲಾ ತನ್ನ ಚಾಲಕರಿಗೆ ತಾನು ಕಾರ್ಯನಿರ್ವಹಿಸುವ ಎಲ್ಲಾ ಮಾರುಕಟ್ಟೆಗಳಲ್ಲಿ ಉತ್ತಮ ಕಮಿಷನ್ ದರವನ್ನು ನೀಡುವ ಉದ್ದೇಶವನ್ನು ಹೊಂದಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಇದಲ್ಲದೇ ಓಲಾ ಕ್ಯಾಬ್ ಚಾಲಕರಿಗೆ ಹಲವಾರು ಆಫರ್‍ಗಳನ್ನು ಘೋಷಿಸಿದ್ದಾರೆ.

ಓಲಾ ಕ್ಯಾಬ್‍ನ ಸೇವೆಯು ದಿನದ 24 ಗಂಟೆಗಳಲ್ಲಿಯು ಲಭ್ಯವಿರುತ್ತದೆ. ಪ್ರಯಾಣಿಕರಿಗಾಗಿ ಹೇಲ್ಪ್ ಲೈನ್ ಸೇವೆ ಕೂಡ ಹೊಂದಿದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಮತ್ತು ಹೆಚ್ಚಿನ ಸುರಕ್ಷತೆಯೊಂದಿಗೆ ಇತರ ಅನುಕೂಲತೆಯನ್ನು ಒದಗಿಸಲಿದೆ.

ಲಂಡನ್ ಉಬರ್‍ನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇದೀಗ ಓಲಾ ಲಂಡನ್‍ಗೆ ಲಗ್ಗೆ ಇಡುವ ಮೂಲಕ ಉಬರ್‍ಗೆ ನೇರವಾಗಿ ಪೈಪೋಟಿ ನೀಡಲು ಸಜ್ಜಾಗಿದೆ. ಇದಕ್ಕಾಗಿ ಓಲಾ 25 ಸಾವಿರಕ್ಕೂ ಹೆಚ್ಚು ಚಾಲಕರ ನೋಂದಾವಣೆಯನ್ನು ಮಾಡಿಕೊಂಡಿದೆ.


Click it and Unblock the Notifications