ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ಆಟೋ ಉದ್ಯಮವು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಹೊಸ ವಾಹನಗಳ ಮಾರಾಟವು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಕೆ ಆಗುತ್ತಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಸಾಕಷ್ಟು ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ.

ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ಹೌದು, ಹೊಸ ವಾಹನ ಖರೀದಿಗಾಗಿ ಬಹುತೇಕ ಗ್ರಾಹಕರು ನೇರವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮ ಗ್ರಾಹಕರನ್ನು ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಖರೀದಿ ಪ್ರಕ್ರಿಯೆಯತ್ತ ಸೆಳೆಯಲು ಆಟೋ ಕಂಪನಿಗಳು ಮಾಡಿದ ಹೊಸ ಪ್ರಯತ್ನವು ಇಂದು ಸಾಕಷ್ಟು ಪ್ರಯೋಜಕಾರಿಯಾಗಿದೆ. ವೈರಸ್ ಹರಡುವಿಕೆಯ ಸಂದರ್ಭದಲ್ಲಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್‌ಲೈನ್ ಮಾರಾಟ ಮಳಿಗೆಗಳು ಸಾಕಷ್ಟು ಸಹಕಾರಿಯಾಗಿದ್ದು, ಬಳಕೆದಾರರ ಸಂಖ್ಯೆಯಲ್ಲೂ ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ಕೋವಿಡ್ 19 ಹರಡುವಿಕೆಗೂ ಮೊದಲೇ ಹಲವಾರು ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್ ತೆರೆದಿದ್ದರೂ ಬಳಕೆದಾರರ ಸಂಖ್ಯೆಯು ತೀರಾ ವಿರಳವಾಗಿತ್ತು. ಆದರೆ ಕರೋನಾ ವೈರಸ್ ಹೆಚ್ಚಳವಾಗುತ್ತಿದ್ದಂತೆ ಸಾಮಾಜಿಕ ಅಂತರ ಅಗತ್ಯವಾಯಿತೋ ಆಗಿನಿಂದ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಬಳಕೆಯು ಹೆಚ್ಚಳವಾಯ್ತು.

ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ದೇಶದ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿಯು ಕೂಡಾ 2017ರಲ್ಲೇ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದ್ದರೂ ಇದೇ ಮೊದಲ ಬಾರಿಗೆ ಆನ್‌ಲೈನ್ ಬುಕ್ಕಿಂಗ್ ಪ್ರಕ್ರಿಯೆ ಹೆಚ್ಚಳಗೊಂಡಿದ್ದು, ಕೋವಿಡ್ ನಂತರವೇ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಸುಮಾರು 2 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ.

ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ಮಾರುತಿ ಸುಜುಕಿ ನಂತರ ಹ್ಯುಂಡೈ ಕಂಪನಿಯು ಕಿಕ್ ಟು ಬೈ, ಟಾಟಾ ಮೋಟಾರ್ಸ್‌ನಿಂದ ಕ್ಲಿಕ್ ಟು ಡ್ರೈವ್, ಹೋಂಡಾದಿಂದ ಹೋಂಡಾ ಫ್ರಮ್ ಹೋಂ, ಮಹೀಂದ್ರಾದಿಂದ ವೊನ್ ಆನ್‌ಲೈನ್ ಪ್ಲ್ಯಾಟ್ ಸೇರಿದಂತೆ ವಿವಿಧ ಆಟೋ ಕಂಪನಿಗಳು ಗ್ರಾಹಕರಿಗೆ ಅತಿ ಸರಳವಾಗಿ ಮನೆಯಲ್ಲೇ ಕುಳಿತು ವಾಹನ ಖರೀದಿ ಮಾಡುವ ಅವಕಾಶ ಒದಗಿಸಿದ್ದು, ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ನಿಂದಾಗಿ ಹಲವಾರು ಕಾರು ಕಂಪನಿಗಳ ಮಾರಾಟದಲ್ಲೂ ಹೆಚ್ಚಳವಾಗಿದೆ.

ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ವರ್ಚುವಲ್ ಶೋರೂಂ ಮೂಲಕ ವಾಹನ ಕುರಿತಾದ ಮಾಹಿತಿಯನ್ನು ಅತಿ ಸುಲಭವಾಗಿ ಪಡೆಯಬಹುದಾಗಿದ್ದು, ಆನ್‌ಲೈನ್ ಮೂಲಕವೇ ವಾಹನಗಳಲ್ಲಿನ ತಾಂತ್ರಿಕ ಅಂಶಗಳ ಆಯ್ಕೆಯ ಮೂಲಕ ನಾವು ಖರೀದಿ ಮಾಡುವ ವಾಹನವು ಹೀಗೆ ಇರಬೇಕು ಎಂಬುವುದನ್ನು ನಿರ್ಧರಿಸಬಹುದು.

ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ಆನ್‌ಲೈನ್ ಮೂಲಕ ಟೆಸ್ಟ್ ಡ್ರೈವ್‌ಗೆ ಬುಕ್ಕಿಂಗ್ ಮಾಡಿದ ನಂತರ ನೀವು ಸೂಚಿಸುವ ಸ್ಥಳಗಳಿಗೆ ಟೆಸ್ಟ್ ಡ್ರೈವ್ ವಾಹನ ತಲುಪಲಿದ್ದು, ಈ ವೇಳೆ ಸುರಕ್ಷಾ ಮಾರ್ಗಸೂಚಿಯಂತೆ ನಂಜು ನೀರೋಧಕ ಸಿಂಪರಣೆ ಮಾಡಿಯೇ ವಾಹನ ಹಸ್ತಾಂತರ ಮಾಡಲಾಗುತ್ತದೆ.

ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ಟೆಸ್ಟ್ ಡ್ರೈವ್ ವೇಳೆ ನಿಮಗೆ ವಾಹನವು ಇಷ್ಟವಾದಲ್ಲಿ ಮುಂದಿನ ಪ್ರಕ್ರಿಯೆಗಳಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕವೇ ಖರೀದಿ ಪ್ರಕ್ರಿಯೆ ನಡೆಸಬಹುದಾಗಿದ್ದು ಖರೀದಿ ಪ್ರಕ್ರಿಯೆಗೆ ಬೇಕಾದ ಪತ್ರ ವ್ಯವಹಾರಗಳನ್ನು ಸಹ ಅತಿ ಕಡಿಮೆ ಆಯ್ಕೆಗಳೊಂದಿಗೆ ಡಿಜಿಟಲ್ ಮೂಲಕವೇ ಸ್ವಿಕರಿಸಲಾಗುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ಜೊತೆಗೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿಯೇ ಗ್ರಾಹಕರಿಗೆ ಹಲವಾರು ಸಾಲ ಸೌಲಭ್ಯಗಳ ಆಯ್ಕೆಗಳನ್ನು ಒದಗಿಸುವ ಆಟೋ ಕಂಪನಿಗಳು ಗ್ರಾಹಕರೊಂದಿಗೆ ನೇರ ಸಂಪರ್ಕ ತಪ್ಪಿಸಲು ಮಹತ್ವದ ಕ್ರಮ ಕೈಗೊಂಡಿದ್ದು, ಕೊನೆಗೂ ಖರೀದಿ ಪ್ರಕ್ರಿಯೆ ಮುಗಿದ ನಂತರ ಹೊಸ ವಾಹನವನ್ನು ಮನೆ ಬಾಗಿಲಿಗೆ ವಿತರಣೆ ಮಾಡಲಾಗುತ್ತದೆ.

ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ಹೊಸ ವಾಹನ ಖರೀದಿ ಪ್ರಕ್ರಿಯೆ ಮಾತ್ರ ಗ್ರಾಹಕರ ಸೇವೆಗಳನ್ನು ಸಹ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕವೇ ಬಗೆಹರಿಸುವ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದು, ಕಳೆದ ವರ್ಷಕ್ಕಿಂತಲೂ ಶೇ.80 ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಬಳಕೆದಾರರು ಹೆಚ್ಚಳವಾಗಿದ್ದಾರೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಬಳಕೆಯ ಮತ್ತೊಂದು ಲಾಭವೆಂದರೆ ಖರೀದಿ ಪ್ರಕ್ರಿಯೆಯಲ್ಲಿ ಪಾಯಿಂಟ್ಸ್ ಆಧಾರದ ಮೇಲೆ ಹಲವಾರು ಆಫರ್‌ಗಳನ್ನು ಕೂಡಾ ಪಡೆದುಕೊಳ್ಳಬಹುದಾಗಿದ್ದು, ವೈರಸ್ ಭೀತಿಯಿಂದಾಗಿ ಸುರಕ್ಷಿತ ವಾಹನ ಖರೀದಿಗೆ ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಯಾಗಿದೆ.

ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಳಗೊಂಡ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ

ಹೊಸ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಹೊಸ ವಾಹನಗಳ ಖರೀದಿ ಪ್ರಕ್ರಿಯೆಯು ಅತಿ ಸುಲಭವಾಗಿರುವುದರಿಂದಲೂ ಗ್ರಾಹಕರು ಕೂಡಾ ಆಟೋ ಕಂಪನಿಗಳ ಹೊಸ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.

Most Read Articles

Kannada
English summary
Online Car Bookings Improved In 2020. Read in Kannada.
Story first published: Saturday, December 5, 2020, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X