ಇನ್ನಷ್ಟು ಹತ್ತಿರವಾಯ್ತು ಹೆಲಿಕಾಪ್ಟರ್ ಪ್ರಯಾಣ

ಪವನ್ ಹನ್ಸ್ ಲಿಮಿಟೆಡ್, ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಉತ್ತರಾಖಂಡದಲ್ಲಿ ಕೈಗೆಟುಕುವ ಬೆಲೆಯಲ್ಲಿ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದೆ. ಈ ಹೆಲಿಕಾಪ್ಟರ್ ಸೇವೆಯು ಡೆಹ್ರಾಡೂನ್, ನ್ಯೂ ಟೆಹ್ರಿ, ಶ್ರೀನಗರ ಹಾಗೂ ಗೌಚರ್ ನಡುವೆ ಸಂಪರ್ಕ ಕಲ್ಪಿಸುತ್ತದೆ.

ಇನ್ನಷ್ಟು ಹತ್ತಿರವಾಯ್ತು ಹೆಲಿಕಾಪ್ಟರ್ ಪ್ರಯಾಣ

ಈ ಹೆಲಿಕಾಪ್ಟರ್ ವಾರದಲ್ಲಿ 3 ದಿನ ಸೇವೆಯನ್ನು ನೀಡಲಿದೆ. ಈ ಹೆಲಿಕಾಪ್ಟರ್‌ ಪ್ರಯಾಣದ ಬುಕ್ಕಿಂಗ್ ಶುಲ್ಕ ರೂ.2,900ಗಳಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹಾಗೂ ಕೇಂದ್ರ ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿರವರು ಈ ಅಂತರರಾಜ್ಯ ಹೆಲಿಕಾಪ್ಟರ್ ಸೇವೆಗೆ ಚಾಲನೆ ನೀಡಿ ಈ ಸೇವೆಯು ರಾಜ್ಯಗಳ ನಡುವಿನ ಪರಸ್ಪರ ಸಂಬಂಧವನ್ನು ಹೆಚ್ಚಿಸುವುದರ ಜೊತೆಗೆ ರಾಜ್ಯಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಇನ್ನಷ್ಟು ಹತ್ತಿರವಾಯ್ತು ಹೆಲಿಕಾಪ್ಟರ್ ಪ್ರಯಾಣ

ಇನ್ನು ಈ ಹೊಸ ಸೇವೆಯ ಬಗ್ಗೆ ಹೇಳುವುದಾದರೆ, ಪವನ್ ಹನ್ಸ್ ವಾರಕ್ಕೊಮ್ಮೆ ಮೂರು ಬಾರಿ ಈ ಹೆಲಿಕಾಪ್ಟರ್ ಸೇವೆಗಳನ್ನು ನೀಡಲಿದ್ದು, ಪ್ರಯಾಣಿಕರಿಗೆ ಶುಲ್ಕ ವಿಧಿಸುವುದನ್ನು ಖಚಿತಪಡಿಸುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಇನ್ನಷ್ಟು ಹತ್ತಿರವಾಯ್ತು ಹೆಲಿಕಾಪ್ಟರ್ ಪ್ರಯಾಣ

ಈ ಭಾಗದಲ್ಲಿ ಹೆಲಿಕಾಪ್ಟರ್ ಸೇವೆಗಳ ಆರಂಭದೊಂದಿಗೆ ರಾಜ್ಯಗಳ ನಡುವಿನ ವಾಯು ಸಂಪರ್ಕವು ಸುಧಾರಿಸುವುದರ ಜೊತೆಗೆ ರಾಜ್ಯಗಳ ನಡುವಿನ ಪ್ರಯಾಣದ ಅವಧಿಯೂ ಸಹ ಕಡಿಮೆಯಾಗಲಿದೆ. ಈ ಹೆಲಿಕಾಪ್ಟರ್ ಸೇವೆಯು ಗುಡ್ಡಗಾಡು ಪ್ರದೇಶಗಳಲ್ಲಿನ ಸಂಪರ್ಕವನ್ನು ಸುಧಾರಿಸಲಿದೆ.

ಇನ್ನಷ್ಟು ಹತ್ತಿರವಾಯ್ತು ಹೆಲಿಕಾಪ್ಟರ್ ಪ್ರಯಾಣ

ಈ ಮೊದಲು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸುವುದಕ್ಕೆ 2ರಿಂದ 3 ಗಂಟೆಗಳು ಬೇಕಾಗಿದ್ದವು. ಈಗ ಈ ಪ್ರದೇಶಗಳಿಗೆ ಕೇವಲ 30 ನಿಮಿಷಗಳಲ್ಲಿ ತಲುಪಬಹುದು. ಚಾರ್ ಧಾಮ್‌ಗೆ ಪ್ರಯಾಣಿಸುವ ಭಕ್ತರಿಗೂ ಸಹ ಈ ಹೆಲಿಕಾಪ್ಟರ್ ಸೇವೆಯನ್ನು ನೀಡಲಾಗುವುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಇನ್ನಷ್ಟು ಹತ್ತಿರವಾಯ್ತು ಹೆಲಿಕಾಪ್ಟರ್ ಪ್ರಯಾಣ

ಡೆಹ್ರಾಡೂನ್‌ನಿಂದ ರಾಮ್‌ನಗರ, ಪಂತ್‌ನಗರ, ನೈನಿತಾಲ್, ಅಲ್ಮೋರಾ, ಪಿಥೋರಗಢ ಹಾಗೂ ಡೆಹ್ರಾಡೂನ್‌ನಿಂದ ಮಸ್ಸೂರಿಗೆ ಸಂಪರ್ಕ ಕಲ್ಪಿಸುವ ಇನ್ನೂ ಎರಡು ಹೆಲಿಕಾಪ್ಟರ್ ಸೇವೆಗಳು ಶೀಘ್ರದಲ್ಲೇ ಆರಂಭವಾಗಲಿವೆ. ಉಡಾನ್ -2 ಯೋಜನೆಯಡಿ ಹೊಸ ವಾಯು ಮಾರ್ಗಗಳಲ್ಲಿ ಸೇವೆಗಳನ್ನು ನೀಡಲು ನಾಗರಿಕ ವಿಮಾನಯಾನ ಇಲಾಖೆಯು ಪವನ್ ಹನ್ಸ್ ಲಿಮಿಟೆಡ್‌ಗೆ ಅನುಮತಿ ನೀಡಿದೆ.

ಇನ್ನಷ್ಟು ಹತ್ತಿರವಾಯ್ತು ಹೆಲಿಕಾಪ್ಟರ್ ಪ್ರಯಾಣ

ನಾಗರಿಕ ವಿಮಾನಯಾನ ಇಲಾಖೆಯ ಪ್ರಕಾರ, ಉಡಾನ್ ಯೋಜನೆಯಡಿ ಇದುವರೆಗೂ 50 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಸದ್ಯಕ್ಕೆ 19 ರಾಜ್ಯಗಳಲ್ಲಿ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಡಾನ್ ಯೋಜನೆಗೆ ಚಾಲನೆ ನೀಡಲಾಗಿದೆ.

ಗಮನಿಸಿ: ಈ ಫೋಟೋಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Article Published On: Friday, July 31, 2020, 19:22 [IST]
English summary
Pawan Hans launches helicopter service at affordable price. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+