ಬಹುಪಯೋಗಿ ಇನ್ಫೋಟೈನ್‌ಮೆಂಟ್‌ ಸಿಸ್ಟಂ ಬಿಡುಗಡೆಗೊಳಿಸಲಿದೆ ಪಯೋನೀರ್

ಕಾರು ಇನ್ಫೋಟೈನ್‌ಮೆಂಟ್‌ ಸಿಸ್ಟಂನ ಪ್ರಮುಖ ಕಂಪನಿಗಳಲ್ಲಿ ಒಂದಾದ ಪಯೋನೀರ್ ಶೀಘ್ರದಲ್ಲಿಯೇ ಮೂರು ಕಾರು ಎವಿ ರಿಸೀವರ್‌ಗಳನ್ನು ಅಲೆಕ್ಸಾ ಬಿಲ್ಟ್ ಇನ್ ನೊಂದಿಗೆ ಬಿಡುಗಡೆಗೊಳಿಸಲಿದೆ.

ಬಹುಪಯೋಗಿ ಇನ್ಫೋಟೈನ್‌ಮೆಂಟ್‌ ಸಿಸ್ಟಂ ಬಿಡುಗಡೆಗೊಳಿಸಲಿದೆ ಪಯೋನೀರ್

ಈ ಮಾದರಿಗಳನ್ನು 6.8 ಇಂಚಿನ ಡಿಎಂಹೆಚ್-ಝಡ್6350ಬಿಟಿ, 9 ಇಂಚಿನ ಡಿಎಂಹೆಚ್-ಝಡ್ ಎಸ್ 9350ಬಿಟಿ ಹಾಗೂ ಒಂಬತ್ತು ಇಂಚಿನ ಫ್ಲೋಟಿಂಗ್ ಡಿಸ್ ಪ್ಲೇ ಹೊಂದಿರುವ ಡಿಎಂಹೆಚ್-ಝಡ್ ಎಫ್ 9350ಬಿಟಿ ಎಂದು ವರ್ಗೀಕರಿಸಲಾಗುವುದು. ಈ ಉತ್ಪನ್ನಗಳ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಈ ಉತ್ಪನ್ನಗಳು ಹಲವಾರು ಅನುಕೂಲಗಳನ್ನು ಹೊಂದಿರುವುದು ಸುಳ್ಳಲ್ಲ.

ಬಹುಪಯೋಗಿ ಇನ್ಫೋಟೈನ್‌ಮೆಂಟ್‌ ಸಿಸ್ಟಂ ಬಿಡುಗಡೆಗೊಳಿಸಲಿದೆ ಪಯೋನೀರ್

ಈ ಇನ್ಫೋಟೈನ್‌ಮೆಂಟ್ ಸಿಸ್ಟಂ ಅಲೆಕ್ಸಾದ ಎಲ್ಲಾ ಫೀಚರ್ ಗಳನ್ನು ನೀಡಲಿದ್ದು, ಕಾರುಗಳ ಮಲ್ಟಿ ಫಂಕ್ಷನ್ ಗಳನ್ನು ಸುಲಭಗೊಳಿಸುತ್ತದೆ. ಈ ಸಿಸ್ಟಂ ವೈಯಕ್ತಿಕ ಅಲೆಕ್ಸಾ ಸಾಧನದಂತೆ ಕಾರ್ಯನಿರ್ವಹಿಸಲಿದೆ ಎಂದು ಕಂಪನಿ ಹೇಳಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಬಹುಪಯೋಗಿ ಇನ್ಫೋಟೈನ್‌ಮೆಂಟ್‌ ಸಿಸ್ಟಂ ಬಿಡುಗಡೆಗೊಳಿಸಲಿದೆ ಪಯೋನೀರ್

ವಾಯ್ಸ್ ಸರ್ವೀಸ್ ಅಮೆಜಾನ್ ಅಲೆಕ್ಸಾಕ್ಕಾಗಿ ತಯಾರಾದ ಕ್ಲೌಡ್ ಸೇವೆಯನ್ನು ಬಳಸುತ್ತದೆ. ಕಾರನ್ನು ಚಾಲನೆ ಮಾಡುವಾಗ ಅಲೆಕ್ಸಾವನ್ನು ಬಳಸುವುದರಿಂದ ಚಾಲಕನ ಗಮನವು ಬೇರೆಡೆಗೆ ಸೆಳೆಯುವುದಿಲ್ಲ. ಸಂಪೂರ್ಣವಾಗಿ ಸುರಕ್ಷಿತವಾಗಿರಲಿದೆ ಎಂದು ಕಂಪನಿ ಹೇಳಿದೆ.

ಬಹುಪಯೋಗಿ ಇನ್ಫೋಟೈನ್‌ಮೆಂಟ್‌ ಸಿಸ್ಟಂ ಬಿಡುಗಡೆಗೊಳಿಸಲಿದೆ ಪಯೋನೀರ್

ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಂ ಸಂಪೂರ್ಣವಾಗಿ ಟಚ್ ಫ್ರೀಯಾಗಿರಲಿದೆ. ಕಾರಿನ ಡ್ರೈವರ್ ನೀಡುವ ವಾಯ್ಸ್ ಕಮ್ಯಾಂಡ್ ಗಳ ಮೂಲಕ ಅಲೆಕ್ಸಾ ಕಾರ್ಯನಿರ್ವಹಿಸಲಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬಹುಪಯೋಗಿ ಇನ್ಫೋಟೈನ್‌ಮೆಂಟ್‌ ಸಿಸ್ಟಂ ಬಿಡುಗಡೆಗೊಳಿಸಲಿದೆ ಪಯೋನೀರ್

ಈ ಇನ್ಫೋಟೈನ್‌ಮೆಂಟ್ ಸಿಸ್ಟಂನಲ್ಲಿ ವಾಯ್ಸ್ ಕಮ್ಯಾಂಡ್ ಗಳ ಮೂಲಕ ಹಾಡುಗಳನ್ನು ಕೇಳಬಹುದು. ಜೊತೆಗೆ ಫೋನ್ ಕಾಲ್, ಆಡಿಯೊ ಬುಕ್, ನ್ಯೂಸ್, ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿ ಮುಂತಾದವುಗಳನ್ನು ಕೇಳಬಹುದು.

ಬಹುಪಯೋಗಿ ಇನ್ಫೋಟೈನ್‌ಮೆಂಟ್‌ ಸಿಸ್ಟಂ ಬಿಡುಗಡೆಗೊಳಿಸಲಿದೆ ಪಯೋನೀರ್

ಮನೆಯಲ್ಲಿರುವ ಸ್ಮಾರ್ಟ್ ಹೋಮ್ ಸಾಧನಗಳನ್ನು ಸಹ ಅಲೆಕ್ಸಾ ಸಹಾಯದಿಂದ ಕಂಟ್ರೋಲ್ ಮಾಡಬಹುದು. ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೆಚ್ಚು ಉಪಯುಕ್ತವಾಗಿಸುತ್ತಿದೆ ಎಂದು ಪಯೋನೀರ್ ಕಂಪನಿ ಹೇಳಿದೆ. ಅಲೆಕ್ಸಾ ಇನ್ಫೋಟೈನ್‌ಮೆಂಟ್ ಸಿಸ್ಟಂ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.

Most Read Articles

Kannada
English summary
Pioneer to introduce multi use Alexa infotainment system. Read in Kannada.
Story first published: Thursday, July 23, 2020, 14:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X