ಬಿಡುಗಡೆಯಾದ ಕೆಲ ಗಂಟೆಗಳಲ್ಲಿ ದಾಖಲೆ ಪ್ರಮಾಣದ ಮಾರಾಟ ಕಂಡ ಟಿಆರ್‌ಎಕ್ಸ್ ಪಿಕಪ್ ಟ್ರಕ್

ಪಿಕಪ್ ಟ್ರಕ್‌ಗಳಿಗೆ ಅಮೆರಿಕಾದಲ್ಲಿ ಹೆಚ್ಚಿನ ಬೇಡಿಕೆಯಿದೆ. ಅಮೆರಿಕಾದಲ್ಲಿನ ಹಲವು ಕಂಪನಿಗಳು ಪಿಕಪ್ ಟ್ರಕ್ ಗಳನ್ನು ಉತ್ಪಾದಿಸುತ್ತವೆ. ಅವುಗಳಲ್ಲಿ ಫೋರ್ಡ್ ಹಾಗು ರ‍್ಯಾಮ್ ಬಲಿಷ್ಠ ಶಕ್ತಿಶಾಲಿ ಪಿಕಪ್ ಟ್ರಕ್ ಗಳನ್ನು ತಯಾರಿಸುವ ಪ್ರಮುಖ ಕಂಪನಿಗಳಾಗಿವೆ.

ಬಿಡುಗಡೆಯಾದ ಕೆಲ ಗಂಟೆಗಳಲ್ಲಿ ದಾಖಲೆ ಪ್ರಮಾಣದ ಮಾರಾಟ ಕಂಡ ಟಿಆರ್‌ಎಕ್ಸ್ ಪಿಕಪ್ ಟ್ರಕ್

ಕೆಲವು ದಿನಗಳ ಹಿಂದೆ ರ‍್ಯಾಮ್ ಕಂಪನಿಯು ತನ್ನ ಅತಿ ಶಕ್ತಿಶಾಲಿ ಟಿಆರ್‌ಎಕ್ಸ್ ಪಿಕಪ್ ಟ್ರಕ್ ಅನ್ನು ಅಮೆರಿಕದಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟ್ರಕ್ ನ 702 ಯುನಿಟ್ ಗಳು ಮಾರಾಟವಾಗಿವೆ. ಬಿಡುಗಡೆಯಾದ ಕೇವಲ 3 ಗಂಟೆಗಳಲ್ಲಿ ಟಿಆರ್‌ಎಕ್ಸ್ ಟ್ರಕ್ 702 ಯುನಿಟ್ ಗಳನ್ನು ಮಾರಾಟ ಮಾಡಿರುವುದಾಗಿ ರ‍್ಯಾಮ್ ಕಂಪನಿಯು ತನ್ನ ಅಧಿಕೃತ ಹೇಳಿಕೆಯಲ್ಲಿ ಪ್ರಕಟಿಸಿದೆ.

ಬಿಡುಗಡೆಯಾದ ಕೆಲ ಗಂಟೆಗಳಲ್ಲಿ ದಾಖಲೆ ಪ್ರಮಾಣದ ಮಾರಾಟ ಕಂಡ ಟಿಆರ್‌ಎಕ್ಸ್ ಪಿಕಪ್ ಟ್ರಕ್

ರ‍್ಯಾಮ್ ಟಿಆರ್‌ಎಕ್ಸ್ ಪಿಕಪ್ ಟ್ರಕ್ ಅನ್ನು ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಟಿಆರ್‌ಎಕ್ಸ್ ಪಿಕಪ್ ಟ್ರಕ್ ಬೆಲೆ ಎಕ್ಸ್ ಶೋರೂಂ ದರದಂತೆ 90,000 ಡಾಲರ್ ಗಳಿಂದ 1,00,000 ಡಾಲರ್ ಗಲಾಗಿದೆ. ಹೆಚ್ಚು ಬೆಲೆಯನ್ನು ಹೊಂದಿದ್ದರೂ ಸಹ ಗ್ರಾಹಕರು ಈ ಹೊಸ ಟ್ರಕ್ ಖರೀದಿಗೆ ಮುಗಿಬಿದ್ದಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬಿಡುಗಡೆಯಾದ ಕೆಲ ಗಂಟೆಗಳಲ್ಲಿ ದಾಖಲೆ ಪ್ರಮಾಣದ ಮಾರಾಟ ಕಂಡ ಟಿಆರ್‌ಎಕ್ಸ್ ಪಿಕಪ್ ಟ್ರಕ್

ಇದು ವಿಶ್ವದ ಅತ್ಯಂತ ಶಕ್ತಿಶಾಲಿ ಪಿಕಪ್ ಟ್ರಕ್ ಎಂದು ರ‍್ಯಾಮ್ ಕಂಪನಿ ಹೇಳಿಕೊಂಡಿದೆ. ಈ ಟ್ರಕ್ ನಲ್ಲಿ ಡಾಡ್ಜ್ ಚಾಲೆಂಜರ್ 6.2 ಲೀಟರಿನ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 692 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಬಿಡುಗಡೆಯಾದ ಕೆಲ ಗಂಟೆಗಳಲ್ಲಿ ದಾಖಲೆ ಪ್ರಮಾಣದ ಮಾರಾಟ ಕಂಡ ಟಿಆರ್‌ಎಕ್ಸ್ ಪಿಕಪ್ ಟ್ರಕ್

ಟಿಆರ್‌ಎಕ್ಸ್ ಪಿಕಪ್ ಟ್ರಕ್ ಅನ್ನು ಸೀಮಿತ ಸಂಖ್ಯೆಯಲ್ಲಿ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ. ಟಿಆರ್‌ಎಕ್ಸ್ ಪಿಕಪ್ ಟ್ರಕ್ ಯಾವುದೇ ರೀತಿಯ ರಸ್ತೆಯಲ್ಲಿ ಸರಾಗವಾಗಿ ಚಲಿಸುತ್ತದೆ ಎಂದು ರ‍್ಯಾಮ್ ಕಂಪನಿ ಹೇಳಿಕೊಂಡಿದೆ. ರ‍್ಯಾಮ್ ಟ್ರಕ್ ನಲ್ಲಿರುವ ಬಲಶಾಲಿ ಎಂಜಿನ್ ಎಲ್ಲಾ ರೀತಿಯ ಪರಿಸರಗಳಿಗೆ ಸೂಕ್ತವಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬಿಡುಗಡೆಯಾದ ಕೆಲ ಗಂಟೆಗಳಲ್ಲಿ ದಾಖಲೆ ಪ್ರಮಾಣದ ಮಾರಾಟ ಕಂಡ ಟಿಆರ್‌ಎಕ್ಸ್ ಪಿಕಪ್ ಟ್ರಕ್

ಬಲಶಾಲಿ ಮಾತ್ರವಲ್ಲದೇ ಈ ಟ್ರಕ್ ವೇಗವಾಗಿ ಚಲಿಸುತ್ತದೆ. ಟ್ರಕ್ ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಟ್ರಕ್ ಎಲ್ಲಾ ರೀತಿಯ ರಸ್ತೆಯಲ್ಲಿ ಚಲಿಸಲು ಅನುಕೂಲವಾಗುವಂತೆ ಈ ಟ್ರಕ್ ನಲ್ಲಿ 35 ಇಂಚಿನ ಟಯರ್ ಅಳವಡಿಸಲಾಗಿದೆ.

ಬಿಡುಗಡೆಯಾದ ಕೆಲ ಗಂಟೆಗಳಲ್ಲಿ ದಾಖಲೆ ಪ್ರಮಾಣದ ಮಾರಾಟ ಕಂಡ ಟಿಆರ್‌ಎಕ್ಸ್ ಪಿಕಪ್ ಟ್ರಕ್

ಟಿಆರ್‌ಎಕ್ಸ್ ಪಿಕಪ್ ಟ್ರಕ್ 11.8-ಇಂಚಿನ ಗ್ರೌಂಡ್ ಕ್ಲಿಯರೆನ್ಸ್ ನೊಂದಿಗೆ ಉತ್ತಮ ಸಮತೋಲನವನ್ನು ಹೊಂದಿದೆ. ಟ್ರಕ್ ಉತ್ತಮ ಪರ್ಫಾಮೆನ್ಸ್ ಜೊತೆಗೆ ಪಿಕಪ್ ಗಳನ್ನು ಸಹ ನೀಡುತ್ತದೆ. ಟಿಆರ್‌ಎಕ್ಸ್ ಪಿಕಪ್ ಟ್ರಕ್ ಕೇವಲ 4.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

Most Read Articles

Kannada
English summary
Ram company sold 702 unit TRX pickup trucks in 3 hours. Read in Kannada.
Story first published: Saturday, August 22, 2020, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X