ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳು ಜಾಗತಿಕ ಮನ್ನಣೆಯನ್ನು ಪಡೆದುಕೊಂಡಿವೆ. ಟಾಟಾ ಮೋಟಾರ್ಸ್ ಅತಿ ಹೆಚ್ಚು ಸುರಕ್ಷತೆಯನ್ನು ನೀಡುವ ಕಾರುಗಳನ್ನು ಅಭಿವೃದ್ಧಿ ಪಡಿಸಿ ಬಿಡುಗಡೆಗೊಳಿಸುತ್ತದೆ. ಟಾಟಾ ಕಾರುಗಳ ಸುರಕ್ಷತೆಯ ಬಗ್ಗೆ ಯಾವುದೇ ಅನುಮಾನಗಳಿಲ್ಲ.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಹಾಗೂ ಆಲ್ಟ್ರೋಜ್ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಈ ಎರಡು ಕಾರುಗಳು ಗ್ಲೋಬಲ್ ಎನ್‍‍ಸಿ‍ಎ‍‍ಪಿ ನಡೆಸುವ ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿವೆ. ಇದು ಭಾರತೀಯರು ಹೆಮ್ಮೆ ಪಡುವ ಸಂಗತಿಯಾಗಿದೆ.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ಟಾಟಾ ಮೋಟಾರ್ಸ್ ಹೊರತುಪಡಿಸಿ ಬೇರೆ ಯಾವುದೇ ಭಾರತದ ಕಂಪನಿಯು 5 ಸ್ಟಾರ್ ರೇಟಿಂಗ್ ಪಡೆದಿರುವ 2 ಕಾರುಗಳನ್ನು ಹೊಂದಿಲ್ಲ. ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳ ಜೊತೆಗೆ ಟಾಟಾ ಮೋಟಾರ್ಸ್ ಈ ಹಿಂದೆ ಅತಿ ಚಿಕ್ಕ ಕಾರೊಂದನ್ನು ಬಿಡುಗಡೆಗೊಳಿಸಿತ್ತು.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ನ್ಯಾನೊ, ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಿದ ಅತಿ ಚಿಕ್ಕ ಕಾರ್ ಆಗಿದೆ. ಈ ರೀತಿಯ ಚಿಕ್ಕ ಕಾರ್ ಅನ್ನು ಬಿಡುಗಡೆಗೊಳಿಸುವುದು ರತನ್ ಟಾಟಾರವರ ಕನಸಾಗಿತ್ತು. ಭಾರತದಲ್ಲಿ ನ್ಯಾನೊ ಕಾರ್ ಅನ್ನು ಬಿಡುಗಡೆಗೊಳಿಸಿದಾಗ ಇಡೀ ವಿಶ್ವವೇ ರತನ್ ಟಾಟಾರವರನ್ನು ಆಶ್ಚರ್ಯದಿಂದ ನೋಡಿತ್ತು.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ನ್ಯಾನೊ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಕಡಿಮೆ ಬೆಲೆಯ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು. ಸುಮಾರು ಹತ್ತು ವರ್ಷಗಳ ಹಿಂದೆ ಈ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ರತನ್ ಟಾಟಾರವರು ಕಡಿಮೆ ಬೆಲೆಯ ಕಾರ್ ಅನ್ನು ಬಿಡುಗಡೆಗೊಳಿಸುವುದಾಗಿ ಭಾರತೀಯರಿಗೆ ಭರವಸೆ ನೀಡಿದ್ದರು.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ರತನ್ ಟಾಟಾರವರು ನೀಡಿದ ಭರವಸೆಯಂತೆ ನ್ಯಾನೊ ಕಾರ್ ಅನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಯಿತು. ಆದರೆ ಕೆಲವು ಅನಿರೀಕ್ಷಿತ ಕಾರಣಗಳಿಂದ ಟಾಟಾ ನ್ಯಾನೊ ಕಾರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ಟಾಟಾ ನ್ಯಾನೊ ಕಾರು ಯೋಜನೆಯು ವಿಫಲವಾಗಿತ್ತು.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ಟಾಟಾ ನ್ಯಾನೊ ಕಾರಿನ ಸುರಕ್ಷತೆಯ ಬಗ್ಗೆ ಜನರು ಭಯಪಟ್ಟ ಕಾರಣಕ್ಕೆ ಈ ಕಾರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ಕೆಲವು ಟಾಟಾ ನ್ಯಾನೊ ಕಾರುಗಳಿಗೆ ಬೆಂಕಿ ಬಿದ್ದ ಕಾರಣಕ್ಕೆ ಜನರೂ ಸಹ ಈ ಕಾರುಗಳನ್ನು ಖರೀದಿಸಲು ಮುಂದಾಗಲಿಲ್ಲ.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ಟಾಟಾ ಕಂಪನಿಯು ತನ್ನ ಉತ್ಪಾದನಾ ಘಟಕವನ್ನು ಪಶ್ಚಿಮ ಬಂಗಾಳದ ಸಿಂಗೂರಿನಿಂದ ಗುಜರಾತ್‍‍ಗೆ ವರ್ಗಾಯಿಸಿತು. ಇದರಿಂದ ಕಾರಿನ ಉತ್ಪಾದನೆಗಳು ನಿಧಾನವಾದವು. ಇದೂ ಸಹ ನ್ಯಾನೊ ಕಾರಿನ ಮಾರಾಟದ ಮೇಲೆ ಪರಿಣಾಮವನ್ನು ಬೀರಿತು.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ನ್ಯಾನೊ ಕಾರುಗಳ ಉತ್ಪಾದನೆಯನ್ನು ಮುಂದುವರೆಸುವುದಾಗಿ ಟಾಟಾ ಕಂಪನಿಯು ತಿಳಿಸಿತ್ತು. ರತನ್ ಟಾಟಾರವರ ಕನಸಿನ ಕಾರ್ ಆಗಿದ್ದ ಕಾರಣಕ್ಕೆ ಟಾಟಾ ಮೋಟಾರ್ಸ್ ಈ ಕಾರಿನ ಮೇಲೆ ಭಾವನಾತ್ಮಕ ಸಂಬಂಧವನ್ನು ಹೊಂದಿತ್ತು.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ಆದರೆ 2018ರಲ್ಲಿ ಟಾಟಾ ಮೋಟಾರ್ಸ್ ನ್ಯಾನೊ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು. ಟಾಟಾ ನ್ಯಾನೊ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ಕಾರ್ ಆಗಿದೆ. ರತನ್ ಟಾಟಾರವರಿಗೂ ಸಹ ನ್ಯಾನೊ ಹೆಮ್ಮೆಯ ಕಾರ್ ಆಗಿದೆ.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ಸರಳವಾಗಿ ಜೀವನ ನಡೆಸುವ ರತನ್ ಟಾಟಾರವರ ಜೀವನವು ಪ್ರತಿಯೊಬ್ಬ ಭಾರತೀಯರಿಗೂ ಮಾದರಿಯಾಗಿದೆ. ಹ್ಯುಮನ್ಸ್ ಆಫ್ ಬಾಂಬೆಗೆ ನೀಡಿರುವ ಸಂದರ್ಶನದಲ್ಲಿ ರತನ್ ಟಾಟಾರವರು ಟಾಟಾ ನ್ಯಾನೊ ಕಾರಿನ ಬಗ್ಗೆ ಮಾತನಾಡಿದ್ದಾರೆ.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ನ್ಯಾನೊ ಕಾರ್ ಅನ್ನು ತಯಾರಿಸಲು ಬಯಸಿದ್ದು ಏಕೆ ಎಂಬುದಕ್ಕೆ ಉತ್ತರಿಸಿರುವ ರತನ್ ಟಾಟಾರವರು ಫ್ಲೆಕ್ಸಿಬಲ್ ಆಗಿರುವ ಕಾರಣಕ್ಕೆ ಎಂದು ಉತ್ತರಿಸಿದ್ದಾರೆ. ರತನ್ ಟಾಟಾರವರು ಮುಂಬೈನಲ್ಲಿ ಓಡಾಡುವ ವೇಳೆಯಲ್ಲಿ ನಾಲ್ಕು ಜನರ ಕುಟುಂಬವೊಂದು ಬೈಕಿನಲ್ಲಿ ಹೋಗುತ್ತಿರುವುದನ್ನು ನೋಡಿದ್ದರು.

ಸ್ಥಗಿತಗೊಂಡಿದ್ದರೂ ರತನ್ ಟಾಟಾ ಪಾಲಿಗೆ ಇದು ಹೆಮ್ಮೆಯ ಕಾರು..!

ಈ ರೀತಿಯ ಕುಟುಂಬಗಳು ಬೈಕಿನಲ್ಲಿ ಓಡಾಡಲು ಕಷ್ಟ ಪಡುತ್ತಿರುವ ಕಾರಣಕ್ಕೆ ಅಂತಹ ಕುಟುಂಬಗಳಿಗೆ ನೆರವಾಗಲು ನ್ಯಾನೊ ಕಾರ್ ಅನ್ನು ಅಭಿವೃದ್ಧಿಪಡಿಸಿದ್ದಾಗಿ ಹೇಳಿದ್ದಾರೆ. ನ್ಯಾನೊ ಕಾರು ವಿಫಲವಾದರೂ ಆ ಕಾರು ಹಲವು ಭಾರತೀಯ ಕುಟುಂಬಗಳ ಕಾರು ಕೊಳ್ಳುವ ಕನಸನ್ನು ನಿಜವಾಗಿಸಿದ್ದು ಸುಳ್ಳಲ್ಲ.

Most Read Articles

Kannada
English summary
Ratan Tata speaks about Tata Nano car. Read in Kannada.
Story first published: Thursday, March 5, 2020, 12:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X