ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಬಿಎಸ್-6 ರೆನಾಲ್ಟ್ ಡಸ್ಟರ್

ಎಪ್ರಿಲ್ 1ರಿಂದ ಜಾರಿಗೆ ಕಡ್ಡಾಯವಾಗಿ ಬರುತ್ತಿರುವ ಬಿಎಸ್-6 ನಿಯಮ ಅನುಗುಣವಾಗಿ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ಮಾದರಿಯ ಎಂಜಿನ್‌ಗಳನ್ನು ಪರಿಚಯಿಸುತ್ತಿದ್ದು, ರೆನಾಲ್ಟ್ ಕೂಡಾ ತನ್ನ ಪ್ರಮುಖ ಕಾರುಗಳ ಎಂಜಿನ್ ಆಯ್ಕೆಯಲ್ಲಿ ಬದಲಾವಣೆಗೊಳಿಸಿದೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಬಿಎಸ್-6 ರೆನಾಲ್ಟ್ ಡಸ್ಟರ್

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದ್ದ ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಪ್ರೇರಿತ ಡಸ್ಟರ್ ಎಸ್‌ಯುವಿ ಆವೃತ್ತಿಯು ಇದೀಗ ಬಿಡುಗಡೆಗೆ ಸಜ್ಜಾಗಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರು ಮುಂದಿನ ತಿಂಗಳು ಏಪ್ರಿಲ್ ಮೊದಲ ವಾರದಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ. ಹೊಸ ಡಸ್ಟರ್ ಆವೃತ್ತಿಯು 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಫೋರ್ ಸಿಲಿಂಡರ್ ಮೂಲಕ 156-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ನೀಡಲಿದೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಬಿಎಸ್-6 ರೆನಾಲ್ಟ್ ಡಸ್ಟರ್

ಹೊಸದಾಗಿ ಅಭಿವೃದ್ದಿಗೊಳಿಸಲಾದ 1.3-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಫೋರ್ ಸಿಲಿಂಡರ್ ಜೋಡಣೆ ಮಾಡಿರುವುದು ಡಸ್ಟರ್ ಕಾರಿಗೆ ಮತ್ತಷ್ಟು ಬಲತುಂಬಲಿದ್ದು, ಮಧ್ಯಮ ಕ್ರಮಾಂಕದ ಕಾರುಗಳಲ್ಲೇ ಇದು ಬಲಿಷ್ಠ ಎಂಜಿನ್ ಮಾದರಿಯಾಗಿರಲಿದೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಬಿಎಸ್-6 ರೆನಾಲ್ಟ್ ಡಸ್ಟರ್

ಸದ್ಯ ಮಾರುಕಟ್ಟೆಯಲ್ಲಿರುವ ಡಸ್ಟರ್ ಆವೃತ್ತಿಯು 1.5-ಲೀಟರ್ ಪೆಟ್ರೋಲ್ ಹೊಂದಿದ್ದು, ಪ್ರಸ್ತುತ ಪೆಟ್ರೋಲ್ ಎಂಜಿನ್‌ಗಿಂತಲೂ ಅಧಿಕ ಪರ್ಫಾಮೆನ್ಸ್ ಹೊಂದಿರುವ 1.3-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು ತುಸು ದುಬಾರಿ ಬೆಲೆ ಹೊಂದಿರಲಿದೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಬಿಎಸ್-6 ರೆನಾಲ್ಟ್ ಡಸ್ಟರ್

ಇನ್ನು ಜಾರಿಗೆ ಬರಲಿರುವ ಹೊಸ ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಲವು ಡೀಸೆಲ್ ಎಂಜಿನ್ ಕಾರು ಮಾದರಿಗಳು ಮಾರಾಟದಿಂದ ಸ್ಥಗಿತಗೊಳ್ಳುತ್ತಿದ್ದು, ಇದರಲ್ಲಿ ರೆನಾಲ್ಟ್ ನಿರ್ಮಾಣ ಕಾರು ಮಾದರಿಗಳು ಸಹ ಪ್ರಮುಖವಾಗಿವೆ. ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಗೆ ತಗ್ಗಿಸುವ ಉದ್ದೇಶದಿಂದ ಆಟೋ ಉದ್ಯಮದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರೆನಾಲ್ಟ್ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು 2020ರ ಮಾರ್ಚ್ ಅಂತ್ಯಕ್ಕೆ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತಿವೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಬಿಎಸ್-6 ರೆನಾಲ್ಟ್ ಡಸ್ಟರ್

ಡೀಸೆಲ್ ಎಂಜಿನ್ ವಾಹನಗಳು ಮಾಲಿನ್ಯ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಜಾರಿಗೆ ಬರಲಿರುವ ಬಿಎಸ್-6 (ಭಾರತ್ ಸ್ಟೇಜ್) ನಿಯಮವು ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಉತ್ಪಾದನೆಗೆ ಬ್ರೇಕ್ ಹಾಕಲಿದೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಬಿಎಸ್-6 ರೆನಾಲ್ಟ್ ಡಸ್ಟರ್

ರೆನಾಲ್ಟ್, ಮಾರುತಿ ಸುಜುಕಿ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಕೈಬಿಟ್ಟು ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳ ಉತ್ಪಾದನೆಯತ್ತ ಹೆಚ್ಚಿನ ಗಮನಹರಿಸಲು ಮುಂದಾಗಿವೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಬಿಎಸ್-6 ರೆನಾಲ್ಟ್ ಡಸ್ಟರ್

ಇದೀಗ ರೆನಾಲ್ಟ್ ಕೂಡಾ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿಯೇ ಹೇಳಿಕೊಂಡಿರುವುದಲ್ಲದೇ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪೆಟ್ರೋಲ್ ಎಂಜಿನ್ ಪ್ರೇರಿತ ಡಸ್ಟರ್ ಆವೃತ್ತಿಯನ್ನು ಪ್ರದರ್ಶನಗೊಳಿಸಿ ಮಾರಾಟಕ್ಕೆ ಸಜ್ಜುಗೊಳ್ಳುತ್ತಿದೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಬಿಎಸ್-6 ರೆನಾಲ್ಟ್ ಡಸ್ಟರ್

ಇದಲ್ಲದೇ ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿರುವ ನೆಕ್ಸ್ಟ್ ಜನರೇಷನ್ ಡಸ್ಟರ್ ಆವೃತ್ತಿಗಳಲ್ಲೂ ಡೀಸೆಲ್ ಎಂಜಿನ್ ಆಯ್ಕೆಗಳನ್ನು ತಗ್ಗಿಸಿ ಪೆಟ್ರೋಲ್ ಆವೃತ್ತಿಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆಯೆಂತೆ. ಒಂದು ವೇಳೆ ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತಿಕರಿಸಿದರೂ ಸಹ ಕಾರಿನ ಬೆಲೆಗಳು ಕನಿಷ್ಠ ರೂ. 80 ಸಾವಿರದಿಂದ ರೂ.1.50 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಬಿಎಸ್-6 ರೆನಾಲ್ಟ್ ಡಸ್ಟರ್

ಇದರಿಂದಾಗಿ ಅಗ್ಗದ ಕಾರು ಉನ್ಪತ್ನಗಳನ್ನು ಮಾರಾಟಮಾಡುವ ಕಾರು ಸಂಸ್ಥೆಗಳಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಲಿದ್ದು, ಕಾರುಗಳ ಬೆಲೆಗಳನ್ನು ಒಂದೇ ಬಾರಿಗೆ ರೂ.80 ಸಾವಿರದಿಂದ ರೂ. 1.50 ಲಕ್ಷ ಹೆಚ್ಚಳ ಮಾಡಿದ್ದಲ್ಲಿ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಬಿಎಸ್-6 ರೆನಾಲ್ಟ್ ಡಸ್ಟರ್

ಇದಕ್ಕಾಗಿಯೇ ರೆನಾಲ್ಟ್ ಸಂಸ್ಥೆಯು 1.5-ಲೀಟರ್ ಸಾಮರ್ಥದ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈ ಕೈಬಿಟ್ಟು, ಹೊಸದಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.6-ಲೀಟರ್ ಇನ್-ಲೈನ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯನ್ನೇ ಉನ್ನತೀಕರಿಸಿ ಬಿಡುಗಡೆ ಮಾಡುವ ಯೋಜನೆ ಹೊಂದಲಾಗಿದೆ.

Most Read Articles

Kannada
English summary
Renault Duster Turbo Petrol Launch Next Month. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X