ರಸ್ತೆ ನಿರ್ಮಾಣದ ಮೇಲೂ ಪ್ರಭಾವ ಬೀರಿದ ಕರೋನಾ ವೈರಸ್ ಮಹಾಮಾರಿ

ರೇಟಿಂಗ್ ಏಜೆನ್ಸಿ ಐಸಿಆರ್‌ಎ ಪ್ರಕಾರ 2020-21ರ ಹಣಕಾಸು ವರ್ಷದಲ್ಲಿ ದೇಶದಲ್ಲಿ 9,000 ಕಿ.ಮೀಗಿಂತ ಹೆಚ್ಚು ರಸ್ತೆಗಳನ್ನು ನಿರ್ಮಿಸಲಾಗುವುದು. ಕರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದಾಗಿ ರಸ್ತೆ ನಿರ್ಮಾಣ ಕಾರ್ಯವು ನಿಧಾನವಾಗಿದೆ ಎಂದು ಐಸಿಆರ್‌ಎ ಹೇಳಿದೆ.

ರಸ್ತೆ ನಿರ್ಮಾಣದ ಮೇಲೂ ಪ್ರಭಾವ ಬೀರಿದ ಕರೋನಾ ವೈರಸ್ ಮಹಾಮಾರಿ

ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ರಸ್ತೆ ನಿರ್ಮಾಣ ಕಾರ್ಯವು 10%ನಷ್ಟು ಕಡಿಮೆಯಾಗಲಿದೆ. 2019-20ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ 10,237 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿತ್ತು. ರಸ್ತೆ ನಿರ್ಮಾಣ ಕಾರ್ಯವು ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ವೇಗವಾಗಿತ್ತು ಎಂದು ಐಸಿಆರ್‌ಎ ಹೇಳಿದೆ. ಆದರೆ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್ ರಸ್ತೆ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಿದೆ.

ರಸ್ತೆ ನಿರ್ಮಾಣದ ಮೇಲೂ ಪ್ರಭಾವ ಬೀರಿದ ಕರೋನಾ ವೈರಸ್ ಮಹಾಮಾರಿ

ಲಾಕ್‌ಡೌನ್ ನಿಂದ ಕಚ್ಚಾ ವಸ್ತುಗಳ ಸರಬರಾಜಿಗೆ ಅಡ್ಡಿಯಾಯಿತು. ಜೊತೆಗೆ ಗುತ್ತಿಗೆದಾರರು ಅನೇಕ ಪ್ರದೇಶಗಳಲ್ಲಿ ಕೆಲಸವನ್ನು ನಿಲ್ಲಿಸಿದರು. ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸಾದ ಕಾರಣ ಕಾರ್ಮಿಕರ ಕೊರತೆಯೂ ಎದುರಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ರಸ್ತೆ ನಿರ್ಮಾಣದ ಮೇಲೂ ಪ್ರಭಾವ ಬೀರಿದ ಕರೋನಾ ವೈರಸ್ ಮಹಾಮಾರಿ

ಮಾರ್ಚ್ - ಜುಲೈ ತಿಂಗಳ ನಡುವೆ 4,052 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,926 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಜುಲೈ ತಿಂಗಳಿನಲ್ಲಿ ದಿನಕ್ಕೆ 25 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ. ಜೂನ್‌ ತಿಂಗಳಿನಲ್ಲಿ ಪ್ರತಿದಿನ 33 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ.

ರಸ್ತೆ ನಿರ್ಮಾಣದ ಮೇಲೂ ಪ್ರಭಾವ ಬೀರಿದ ಕರೋನಾ ವೈರಸ್ ಮಹಾಮಾರಿ

ಅನ್ ಲಾಕ್ ನಂತರ ಕೋವಿಡ್ -19 ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರ ಜೊತೆಗೆ ಇನ್ನೂ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಮುಂಗಾರು ಮಳೆಯು ಸಹ ಜುಲೈ ತಿಂಗಳಿನಲ್ಲಿ ರಸ್ತೆಗಳ ನಿರ್ಮಾಣ ಕಾರ್ಯವನ್ನು ಅಸ್ತವ್ಯಸ್ತಗೊಳಿಸಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ರಸ್ತೆ ನಿರ್ಮಾಣದ ಮೇಲೂ ಪ್ರಭಾವ ಬೀರಿದ ಕರೋನಾ ವೈರಸ್ ಮಹಾಮಾರಿ

ಇದೆಲ್ಲದರ ಪರಿಣಾಮವಾಗಿ 2021ರ ಆರ್ಥಿಕ ವರ್ಷದಲ್ಲಿ ಕೇವಲ 9,000-9,200 ಕಿ.ಮೀ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗಲಿದೆ. ಇಕ್ರಾ ಗ್ರೂಪ್‌ನ ಕಾರ್ಪೊರೇಟ್ ರೇಟಿಂಗ್ ಮುಖ್ಯಸ್ಥ ಶುಭಂ ಜೈನ್ ರವರ ಪ್ರಕಾರ 2021ರ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 2,611 ಕಿ.ಮೀ ಉದ್ದದ ರಸ್ತೆಗಳನ್ನು ನಿರ್ಮಿಸಲಾಗಿದೆ.

ರಸ್ತೆ ನಿರ್ಮಾಣದ ಮೇಲೂ ಪ್ರಭಾವ ಬೀರಿದ ಕರೋನಾ ವೈರಸ್ ಮಹಾಮಾರಿ

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿರವರು ಇತ್ತೀಚೆಗಷ್ಟೇ ಗ್ರೀನ್ ಪಾತ್ ಎಂಬ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದ್ದರು. ಈ ಮೊಬೈಲ್ ಆ್ಯಪ್ ನಲ್ಲಿ ಜಿಯೋ ಟ್ಯಾಗಿಂಗ್ ಹಾಗೂ ವೆಬ್ ಆಧಾರಿತ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಸಹಾಯದಿಂದ ಹೈವೇ ಹಾಗೂ ಎಕ್ಸ್‌ಪ್ರೆಸ್‌ವೇ ಬದಿಯಲ್ಲಿರುವ ಮರ ಹಾಗೂ ಸಸಿಗಳನ್ನು ಮೇಲ್ವಿಚಾರಣೆ ಮಾಡಬಹುದು.

Most Read Articles

Kannada
English summary
Road construction affected by corona virus, 10 percent less construction in current fiscal year. Read in Kannada.
Story first published: Friday, August 28, 2020, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X