ಸ್ಯಾಂಡಲ್‍‍ವುಡ್ ಪೈಲ್ವಾನ್‌ಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ್

ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ಇಬ್ಬರು ಉತ್ತಮ ಸ್ನೇಹಿತರು. ದಬಾಂಗ್ 3 ಚಿತ್ರದಲ್ಲಿ ನಟಿಸಿದ ಮೇಲಂತೂ ಇಬ್ಬರ ನಡುವೆ ಇವರು ಸ್ನೇಹ ಇನ್ನಷ್ಟು ಗಟ್ಟಿಗೊಂಡಿದೆ. ಇವರ ಇಬ್ಬರ ಗೆಳತನದ ಸಾಕ್ಷಿಯಾಗಿ ಸಲ್ಮಾನ್ ಖಾನ್ ಅವರು ಸುದೀಪ್‍‍ ಅವರಿಗೆ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದಾರೆ.

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ವಿಶೇಷವೆಂದರೆ ದಬಾಂಗ್ 3 ಚಿತ್ರದಲ್ಲಿ ಇವರಿಬ್ಬರೂ ಹೀರೋ ಹಾಗೂ ವಿಲನ್ ಆಗಿ ಅಭಿನಯಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸಲ್ಮಾನ್ ಖಾನ್ ಅವರು ದುಬಾರಿ ಬೆಲೆಯ ಬಿಎಂಡಬ್ಲ್ಯೂ ಎಂ5 ಕಾರ್ ಅನ್ನು ಗಿಫ್ಟ್ ನೀಡಿದ್ದಾರೆ. ವಿಶೇಷವೆಂದರೆ ಸಲ್ಮಾನ್ ಖಾನ್ ಅವರೇ ಈ ಕಾರನ್ನು ಸುದೀಪ್‌ ಮನೆಗೆ ಹೋಗಿ ನೀಡಿದ್ದಾರೆ. ಈ ವೇಳೆ ಅವರ ಸಹೋದರ ಸೋಹೈಲ್‌ ಖಾನ್ ಸಾಥ್‌ ನೀಡಿದ್ದಾರೆ.

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ಸುದೀಪ್ ಅವರು ಟ್ವಿಟ್ಟರಿನಲ್ಲಿ ಫೋಟೋ ಶೇರ್ ಮಾಡಿ ನೀವು ಒಳ್ಳೆಯದನ್ನು ಮಾಡಿದಾಗ ನಿಮಗೆ ಒಳ್ಳೆಯದೇ ಆಗುತ್ತದೆ. ಸಲ್ಮಾನ್ ಖಾನ್ ಅವರು ಮನೆಗೆ ಬಂದು ಸರ್ಪ್ರೈಸ್ ಕೊಡುವ ಮೂಲಕ ನನಗೆ ಈ ವಾಕ್ಯದ ಮೇಲೆ ನಂಬಿಕೆ ಬರುವಂತೆ ಮಾಡಿದ್ದಾರೆ.

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ನನ್ನ ಹಾಗೂ ನನ್ನ ಕುಟುಂಬಕ್ಕೆ ಇಷ್ಟು ಪ್ರೀತಿ ತೋರಿಸುತ್ತಿರುವುದಕ್ಕೆ ಧನ್ಯವಾದಗಳು ಸಲ್ಮಾನ್ ಸರ್. ನಿಮ್ಮೊಂದಿಗೆ ಕೆಲಸ ಮಾಡಿರುವುದು ನನ್ನ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಸಲ್ಮಾನ್​ ಖಾನ್​ ಬರ್ತ್​ ಡೇಯಲ್ಲಿ ಕಿಚ್ಚ ಸುದೀಪ್​ ಕುಟುಂಬವು ಭಾಗಿಯಾಗಿತ್ತು

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ಇತ್ತೀಚಿಗೆ ಸಲ್ಮಾನ್​ ಖಾನ್​ ಬೆಂಗಳೂರಿಗೆ ಬಂದಾಗ ಸುದೀಪ್ ಅವರ ಕುಟುಂಬವನ್ನು ಭೇಟಿಯಾಗಿದ್ದರು. ಈ ಹಿಂದೆ ಸಲ್ಮಾನ್ ಖಾನ್ ಅವರು ತಮ್ಮ ಪ್ರೀತಿಯ ಶ್ವಾನದ ಚಿತ್ರವನ್ನು ಪೇಟಿಂಗ್​ ಮಾಡಿಸಿದ್ದ ಅವರ ಮೆಚ್ಚಿನ ಜಾಕೆಟ್‌ ಅನ್ನು ಸುದೀಪ್‌ ಅವರಿಗೆ ಗಿಫ್ಟ್ ಆಗಿ ನೀಡಿದ್ದರು

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ಇತ್ತೀಚಿಗೆ ದಬಾಂಗ್ 3 ಚಿತ್ರದ ಪ್ರಮೋಶನ್‍ಗಾಗಿ ಸಲ್ಮಾನ್ ಖಾನ್ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಸುದೀಪ್ ನನ್ನ ಕಿರಿಯ ಸಹೋದರ ಸೋಹೆಲ್‍ ಇದ್ದಂತೆ. ನಮ್ಮ ಇಬ್ಬರ ಸಂಬಂಧ ಸಹೋದರರಂತೆ ಆಗಿದೆ ಎಂದು ಹೇಳಿದ್ದರು.

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ದುಬಾರಿ ಬೆಲೆಯ ಕಾರ್ ಗಿಫ್ಟ್..!

ಬಿಎಂಡಬ್ಲ್ಯು ಎಂ5 ಕಾರು ಕಳೆದ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ 1.55 ಕೋಟಿಯಾಗಿದೆ. ಇನ್ನೂ ಈ ಕಾರಿನ ಅನ್ ರೋಡ್ ಬೆಲೆಯು ಸುಮಾರು ರೂ.1.85 ಕೋಟಿಗಳಾಗಿದೆ.

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಏಕೈಕ ಬಿಎಂಡಬ್ಲ್ಯು ಎಂ ರೂಪಾಂತವಾಗಿದೆ. ಇದು ಕಂಪ್ಲೀಟ್ಲಿ ಬಿಲ್ಟ್ ಯುನಿಟ್ (ಸಿಬಿಯು) ಆಗಿದ್ದು, ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಮದು ಮಾಡಿಕೊಳ್ಳಲಾಗುತ್ತದೆ.

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ಬಿಎಂಡಬ್ಲ್ಯು ಎಂ 5 ಕಾರಿನಲ್ಲಿ ಬ್ಲ್ಯಾಕ್ ಕ್ರೋಮ್ ಟೈಲ್‍‍ಪೈಪ್‍‍ಗಳೊಂದಿಗೆ ಹೊಸ ಎಂ ಸ್ಪೋರ್ಟ್ ಎಕ್ಸ್ ಹಾಸ್ಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ವೈ-ಸ್ಪೋಕ್ ಡ್ಯುಯಲ್ ಕಲರ್ ವ್ಹೀಲ್‍‍ಗಳು, ಫೆಂಡರ್‍‍ಗಳ ಮೇಲೆ ಎಂ ಗಿಲ್ಸ್, ಹಿಂಭಾಗದಲ್ಲಿ ಸ್ಫಾಯ್ಲರ್ ಮತ್ತು ಸುತ್ತಲೂ ಕಾಂಪಿಟೀಷನ್ ಬ್ಯಾಡ್ಜಿಂಗ್ ಹೊಂದಿದೆ.

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ಈ ಕಾರಿನ ಇಂಟಿರಿಯರ್‍‍ನಲ್ಲಿ ಎಂ ಮಲ್ಟಿಫಂಕ್ಷನ್ ಸ್ಪೋರ್ಟ್ಸ್ ಸೀಟು‍‍ಗಳೊಂದಿಗೆ ಆಕರ್ಷಕವಾದ ಎಂ5 ಲೋಗೊ ಬ್ಲ್ಯಾಕ್ ಔಟ್ ಸೀಟ್ ಬೆಲ್ಟ್ , ಲೆಥರ್ ಅಪ್ಹೋಲ್ಸ್ಟರಿ, ಕ್ರೋಮ್ ಡೀಟೆಲಿಂಗ್‍‍ನೊಂದಿಗೆ ಸ್ಟೀಯರಿಂಗ್ ವ್ಹೀಲ್, ಸ್ಟೇನ್‍‍ಲೆಸ್ ಸ್ಟೀಲ್ ಫೂಟ್ ಪೆಡಲ್ ಮತ್ತು ಕೆಂಪು ಬಣ್ಣದ ಸ್ಟಾರ್ಟ್/ಸ್ಟಾಪ್ ಬಟನ್ ಅನ್ನು ಅಳವಡಿಸಲಾಗಿದೆ.

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ಈ ಬಿ‍ಎಂಡಬ್ಲ್ಯು ಕಾರು ಹಲವಾರು ಪ್ರಮುಖ ಫೀಚರ್ಸ್‍ಗಳನ್ನು ಹೊಂದಿದೆ. ಇದರಲ್ಲಿ ಇನ್-ಬಿಲ್ಟ್ 3ಡಿ ನ್ಯಾವಿಗೇಷನ್, ಹೆಡ್ಸ್-ಅಪ್ ಡಿಸ್‍‍ಪ್ಲೇ, ವೈರ್‍‍ಲೆಸ್ ಚಾರ್ಜಿಂಗ್ ಮತ್ತು ಆ್ಯಪಲ್ ಕಾರ್‍‍ಪ್ಲೇ, ಬಿ‍ಎಂಡಬ್ಲ್ಯು ಡಿಸ್‍‍ಪ್ಲೇ ಕೀ ಮತ್ತು ಗೆಸ್ಚರ್ ಕಂಟ್ರೋಲ್‍‍ನೊಂದಿಗೆ 10.25 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ 7.0 ಇಂಚಿನ ಇನ್ಸ್ ಟ್ರೋಮೆಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

2019ರ ಬಿಎಂ‍ಡಬ್ಲ್ಯು ಎಂ 5 ಕಾರು 4.4 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ 8 ಪೆಟ್ರೋಲ್ ಎಂಜಿನ್ 6,000 ಆರ್‍‍ಪಿಎಂನಲ್ಲಿ 625 ಬಿ‍ಎಚ್‍ಪಿ ಪವರ್( ಸ್ಟ್ಯಾಂಡರ್ಡ್ ಗಿಂತ 25 ಬಿ‍‍ಎಚ್‍‍ಪಿ ಹೆಚ್ಚು) ಮತ್ತು 1,800-5,800 ಆರ್‍‍ಪಿಎಂ ನಡುವೆ 750 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ಎಂಜಿನ್‍‍ನೊಂದಿಗೆ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋ‍‍ಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಕಾರು 3.3 ಸೆಕೆಂಡ್‍‍ಗಳಲ್ಲಿ ಪ್ರತಿಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಪ್ರತಿಗಂಟೆಗೆ 200 ಕಿ.ಮೀ ಅನ್ನು 10.8 ಸೆಕೆಂಡ್‍ಗಳಲ್ಲಿ ಚಲಿಸುತ್ತದೆ(ಇದರೆಡು ಸ್ಟ್ಯಾಂಡರ್ಡ್‍‍ಗಿಂತಲೂ 0.3 ಸೆಕೆಂಡ್‍‍ಗಳ ವೇಗ ಹೊಂದಿದೆ)

ಸ್ಯಾಂಡಲ್‍‍ವುಡ್ ಪೈಲ್ವಾನನಿಗೆ ದುಬಾರಿ ಗಿಫ್ಟ್ ಕೊಟ್ಟ ಬಾಲಿವುಡ್ ಸುಲ್ತಾನ

ಬಿಎಂಡಬ್ಲ್ಯು ಎಂ5 ಕಾಂಪಿಟೇಷನ್ 7 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಕಾರು ಹೆಚ್ಚು ಸುಧಾರಿತ ಎಂಜಿನ್ ಮೌಂಡ್ ಹೊಂದಿದೆ, ಶೇ.10 ಸಸ್ಪೆಂಶನ್ ಸೆಟ್‍ಅಪ್ ಮತ್ತು ಮುಂಭಾಗದ ಎಕ್ಸಲ್ ಹೈ-ಸ್ಪೀಡ್ ಸಾಮರ್ಥ್ಯವನ್ನು ಹೊಂದಿದೆ. ಎಂವಿ 5 ಕಾಂಪಿಟೇಷನ್ ಆ್ಯಂಟಿ-ರೋಲ್ ಬಾರ್‍‍ಗಳ ಮೂರು ಡ್ರೈವಿಂಗ್ ಮೋಡ್‍‍ಗಳನ್ನು ಹೊಂದಿದೆ.

More from DriveSpark

Article Published On: Wednesday, January 8, 2020, 13:54 [IST]
English summary
Salman Khan gifts Dabangg-3 co-actor Sudeep - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+