ಜನಪ್ರಿಯ ಸೆಡಾನ್ ಕಾರುಗಳ ಮೇಲೆ ಲೀಸ್ ಆಯ್ಕೆ ನೀಡಿದ ಸ್ಕೋಡಾ ಇಂಡಿಯಾ

ಕರೋನಾ ವೈರಸ್‌ನಿಂದಾಗಿ ಭಾರೀ ನಷ್ಟ ಅನುಭವಿಸುತ್ತಿದ್ದ ಆಟೋ ಕಂಪನಿಗಳು ಇದೀದ ಹೊಸ ವಾಹನಗಳ ಮಾರಾಟದಲ್ಲಿ ತುಸು ಸುಧಾರಣೆ ಕಂಡಿದ್ದು, ಹೊಸ ವಾಹನ ಮಾರಾಟ ಹೆಚ್ಚಳಕ್ಕಾಗಿ ಹಲವಾರು ಹೊಸ ಯೋಜನೆಗಳಿಗೆ ಚಾಲನೆ ನೀಡಿವೆ.

ಜನಪ್ರಿಯ ಸೆಡಾನ್ ಕಾರುಗಳ ಮೇಲೆ ಲೀಸ್ ಆಯ್ಕೆ ನೀಡಿದ ಸ್ಕೋಡಾ ಇಂಡಿಯಾ

ಹೊಸ ವಾಹನಗಳ ಮಾರಾಟ ಪ್ರಮಾಣವನ್ನು ಸುಧಾರಿಸಲು ಕಾರುಗಳ ಲೀಸ್ ಆಯ್ಕೆ ಕೂಡಾ ಸಾಕಷ್ಟು ಸಹಕಾರಿಯಾಗುತ್ತಿದ್ದು, ಹಲವು ಆಟೋ ಕಂಪನಿಗಳು ಕಾರುಗಳ ಲೀಸ್ ಆಯ್ಕೆಗೆ ಚಾಲನೆ ನೀಡಿವೆ. ಇದೀಗ ಸ್ಕೋಡಾ ಕಂಪನಿಯು ಕೂಡಾ ತನ್ನ ಸೆಡಾನ್ ಮಾದರಿಗಳ ಮೇಲೆ ಲೀಸ್ ಆಯ್ಕೆ ನೀಡುತ್ತಿದ್ದು, ಆಕರ್ಷಕ ಬೆಲೆಗಳಲ್ಲಿ ನಿಗದಿತ ಅವಧಿಗೆ ಮಾಲೀಕತ್ವ ನೀಡಲಿದೆ. ಸ್ಕೋಡಾ ಆರಂಭಿಸಿರುವ ಕ್ಲೆವರ್ ಲೀಸ್ ಯೋಜನೆಯು ದೇಶದ ಪ್ರಮುಖ 8 ನಗರಗಳಲ್ಲಿ ಲಭ್ಯವಿದ್ದು ಲೀಸ್ ಆಯ್ಕೆ ಕಾರು ಮಾದರಿಯ ಆಧಾರದ ನಿರ್ಧರವಾಗುತ್ತದೆ.

ಜನಪ್ರಿಯ ಸೆಡಾನ್ ಕಾರುಗಳ ಮೇಲೆ ಲೀಸ್ ಆಯ್ಕೆ ನೀಡಿದ ಸ್ಕೋಡಾ ಇಂಡಿಯಾ

ಸ್ಕೋಡಾ ಕ್ಲೆವರ್ ಲೀಸ್ ಆಯ್ಕೆಯು ಮೊದಲ ಹಂತವಾಗಿ ದೆಹಲಿ, ಮುಂಬೈ, ಬೆಂಗಳೂರು, ಹೈದ್ರಾಬಾದ್, ಪುಣೆ, ಚೆನ್ನೈ, ಅಹಮದಾಬಾದ್ ಮತ್ತು ಕ್ಕೋಲ್ಕತ್ತಾ ನಗರಗಳಲ್ಲಿ ಲೀಸ್ ಆಯ್ಕೆ ತೆರೆಯಲಾಗಿದ್ದು, ಹಂತ-ಹಂತವಾಗಿ ಇನ್ನುಳಿದ ನಗರಗಳಿಗೂ ವಿಸ್ತರಿಸಲಿದೆ.

ಜನಪ್ರಿಯ ಸೆಡಾನ್ ಕಾರುಗಳ ಮೇಲೆ ಲೀಸ್ ಆಯ್ಕೆ ನೀಡಿದ ಸ್ಕೋಡಾ ಇಂಡಿಯಾ

ಕಾರ್ಪೊರೇಟ್ ಗ್ರಾಹಕರ ಬೇಡಿಕೆ ಅನುಸಾರವಾಗಿ ಸೆಡಾನ್ ಮಾದರಿಗಳ ಮೇಲೆ ಲೀಸ್ ಆಯ್ಕೆ ನೀಡಲಾಗುತ್ತಿದ್ದು, ಕ್ಲೆವರ್ ಲೀಸ್‌ನಲ್ಲಿ ಸೂಪರ್ಬ್ ಮತ್ತು ರ‍್ಯಾಪಿಡ್ ಕಾರುಗಳನ್ನು ಮಾತ್ರ ಆಯ್ಕೆ ಮಾಡಬಹುದಾಗಿದೆ.

ಜನಪ್ರಿಯ ಸೆಡಾನ್ ಕಾರುಗಳ ಮೇಲೆ ಲೀಸ್ ಆಯ್ಕೆ ನೀಡಿದ ಸ್ಕೋಡಾ ಇಂಡಿಯಾ

ಸ್ಕೋಡಾ ಲೀಸ್ ಕಾರುಗಳು ಕಾರು ಮಾದರಿ ಮತ್ತು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದರ ನಿಗದಿಯಾಗಲಿದ್ದು, ರ‍್ಯಾಪಿಡ್ ಟಿಎಸ್ಐ ಆರಂಭಿಕ ಮಾದರಿಗೆ ರೂ.22,580 ಪ್ರತಿ ತಿಂಗಳು ಪಾವತಿ ಮಾಡಬೇಕಾಗುತ್ತದೆ. ಸೂಪರ್ಬ್ ಸೆಡಾನ್ ಹೈ ಎಂಡ್ ಮಾದರಿಯು ಅಧಿಕ ಬೆಲೆಯೊಂದಿಗೆ ಲೀಸ್ ಆಯ್ಕೆ ಪಡೆದುಕೊಂಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಕನಿಷ್ಠ 24 ತಿಂಗಳಿನಿಂದ ಗರಿಷ್ಠ 60 ತಿಂಗಳುಗಳ ಕಾಲ ಲೀಸ್ ಪಡೆದುಕೊಳ್ಳಬಹುದಾಗಿದೆ.

ಜನಪ್ರಿಯ ಸೆಡಾನ್ ಕಾರುಗಳ ಮೇಲೆ ಲೀಸ್ ಆಯ್ಕೆ ನೀಡಿದ ಸ್ಕೋಡಾ ಇಂಡಿಯಾ

ಸ್ಕೋಡಾ ಕ್ಲೆವರ್ ಲೀಸ್ ಆಯ್ಕೆಯು ಓರಿಕ್ಸ್ ಕಂಪನಿಯೊಂದಿಗೆ ಆರಂಭಿಸಲಾಗಿದ್ದು, ಲೀಸ್ ಆಯ್ಕೆಗಾಗಿ ಯಾವುದೇ ಡೌನ್‌ ಪೇಮೆಂಟ್ ಪಾವತಿಸಬೇಕಾದ ಅವಶ್ಯಕತೆಯಿರುವುದಿಲ್ಲ.

ಜನಪ್ರಿಯ ಸೆಡಾನ್ ಕಾರುಗಳ ಮೇಲೆ ಲೀಸ್ ಆಯ್ಕೆ ನೀಡಿದ ಸ್ಕೋಡಾ ಇಂಡಿಯಾ

ಜೊತೆಗೆ ಲೀಸ್ ಪಡೆದುಕೊಳ್ಳುವ ಕಾರಿನ ನೋಂದಣಿ, ರಸ್ತೆ ತೆರಿಗೆ, ವಿಮೆ, ನಿರ್ವಹಣಾ ವೆಚ್ಚಗಳು ಲೀಸ್ ದರದಲ್ಲೇ ಒಳಗೊಂಡಿದ್ದು, ಲೀಸ್ ಪಡೆಯು ಗ್ರಾಹಕರಿಗೆ ಹೊಸ ಕಾರು ಮಾದರಿಯನ್ನೇ ನೀಡಲಾಗುತ್ತದೆ. ಆದರೆ ಲೀಸ್ ಅವಧಿಯು ಕನಿಷ್ಠ 24 ತಿಂಗಳು ಪಡೆಯಲೇಬೇಕಿದ್ದು, ಒಂದು ವೇಳೆ ಮಧ್ಯಂತರದಲ್ಲಿ ಲೀಸ್ ಮೊಟಕುಗೊಳಿಸುವುದಾದರೇ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಜನಪ್ರಿಯ ಸೆಡಾನ್ ಕಾರುಗಳ ಮೇಲೆ ಲೀಸ್ ಆಯ್ಕೆ ನೀಡಿದ ಸ್ಕೋಡಾ ಇಂಡಿಯಾ

ಲೀಸ್ ಪಡೆದ ಕಾರುಗಳ ದರವನ್ನು ಪ್ರತಿ ತಿಂಗಳು ಪಾವತಿಸಬೇಕಿದ್ದು, ಲೀಸ್ ಹೊಂದಿರುವ ಕಾರುಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಸಲುವಾಗಿ ಸಮಗ್ರ ವಿಮಾ ಪಾಲಿಸಿಯನ್ನು(ಬಂಪರ್ ಟು ಬಂಪರ್) ಮಾಡಲಾಗಿರುತ್ತದೆ.

ಜನಪ್ರಿಯ ಸೆಡಾನ್ ಕಾರುಗಳ ಮೇಲೆ ಲೀಸ್ ಆಯ್ಕೆ ನೀಡಿದ ಸ್ಕೋಡಾ ಇಂಡಿಯಾ

ಇದರಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಲೀಸ್ ಕಾರುಗಳಿಗೆ ವಾರ್ಷಿಕವಾಗಿ ಇಂತಿಷ್ಟು ಕಿ.ಮೀ ನಿಗದಿಪಡಿಸಲಾಗಿದ್ದು, ನಿಗದಿಪಡಿಸಿದ ಕಿ.ಮೀ ಗಿಂತಲೂ ಹೆಚ್ಚು ಸಂಚರಿಸಿದ್ದಲ್ಲಿ ಪ್ರತಿ ಕಿಲೋ ಮೀಟರ್‌ಗೆಇಂತಿಷ್ಟು ದರದಲ್ಲಿ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಜನಪ್ರಿಯ ಸೆಡಾನ್ ಕಾರುಗಳ ಮೇಲೆ ಲೀಸ್ ಆಯ್ಕೆ ನೀಡಿದ ಸ್ಕೋಡಾ ಇಂಡಿಯಾ

ಆರ್ಥಿಕ ಸಂಕಷ್ಟಗಳ ಸಂದರ್ಭದಲ್ಲಿ ಲೀಸ್ ಕಾರುಗಳು ಸಾಕಷ್ಟು ಅನುಕೂಲ ಎನ್ನಬಹುದಾಗಿದ್ದು, ಅವಶ್ಯವಿದ್ದಾಗ ಕಾರು ಮಾಲೀಕತ್ವ ಪಡೆದುಕೊಂಡು ಬೇಡವಾದಾಗ ಹಿಂದಿರುಗಿಸಬಹುದು. ಇದರಿಂದ ಪ್ರತಿ ತಿಂಗಳು ಲೀಸ್ ದರ ಹೊರತುಪಡಿಸಿ ಕಾರಿನ ನೋಂದಣಿ, ತೆರಿಗೆ, ಮಿಮೆ, ನಿರ್ವಹಣಾ ವೆಚ್ಚಗಳ ಜೊತೆಗೆ ಇಎಂಐ ಕಿರಿಕಿರಿ ಇರುವುದಿಲ್ಲ. ಹೀಗಾಗಿ ಆಸಕ್ತ ಗ್ರಾಹಕರು ಸ್ಕೋಡಾ ಇಂಡಿಯಾ ವೆಬ್‌ತಾಣದಲ್ಲಿ ಮತ್ತಷ್ಟು ಮಾಹಿತಿಗಳನ್ನು ಪಡೆದುಕೊಳ್ಳಬಹುದು.

Most Read Articles

Kannada
Read more on ಸ್ಕೋಡಾ skoda
English summary
Skoda India Announced New Car Leasing Program For Rapid TSI And Superb Models. Read in Kannada.
Story first published: Tuesday, November 10, 2020, 20:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X