ಕರೋನಾ ಎಫೆಕ್ಟ್- ಇನ್ನಷ್ಟು ತಡವಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ

ಕರೋನಾ ವೈರಸ್‌ನಿಂದಾಗಿ ಆಟೋ ಉದ್ಯಮವು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಹಲವಾರು ಕಾರು ಮಾದರಿಗಳ ಬಿಡುಗಡೆಯು ಮುಂದೂಡಿಕೆಯಾಗಿರುವುದಲ್ಲದೆ ಕೆಲ ಕಾರು ಮಾದರಿಗಳ ಬಿಡುಗಡೆ ಯೋಜನೆಯನ್ನೇ ಕೈಬಿಡುವ ಪರಿಸ್ಥಿತಿ ಎದುರಾಗಿದೆ.

ಇನ್ನಷ್ಟು ತಡವಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ

ಸ್ಕೋಡಾ ಇಂಡಿಯಾ ಕಂಪನಿಯು ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಮಾಡಬೇಕಿದ್ದ ಹೊಸ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಬಿಡುಗಡೆ ಕೂಡಾ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿದ್ದು, ಕರೋನಾ ಸಂಕಷ್ಟದ ಸಂದರ್ಭದಲ್ಲಿ ಹೊಸ ಕಾರುಗಳ ಬಿಡುಗಡೆಯು ಆರ್ಥಿಕವಾಗಿ ನಷ್ಟ ಉಂಟುಮಾಡಲಿವೆ ಎನ್ನುವ ಭೀತಿ ಎದುರಾಗಿದೆ. ಹೀಗಾಗಿ ವೈರಸ್ ಬಿಕ್ಕಟ್ಟು ತುಸು ಸುಧಾರಣೆಗೊಂಡ ನಂತರವೇ ಹೊಸ ವಾಹನಗಳ ಬಿಡುಗಡೆಗಾಗಿ ಯೋಜನೆ ರೂಪಿಸಲಾಗುತ್ತಿದ್ದು, ಸ್ಕೋಡಾ ಹೊಸ ಕಾರು 2021ರ ಮಧ್ಯಂತರದಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ತಡವಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ

ಇನ್ನು ಸ್ಕೋಡಾ ಹೊಸ ಕಾರು ಕ್ಲಿಕ್ ಹೆಸರು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಹೊಸ ಕಾರಿಗಾಗಿ ಅಧಿಕೃತ ಹೆಸರನ್ನು ಈಗಾಗಲೇ ಅಂತಿಮಗೊಳಿಸಿ ಹಕ್ಕುಸ್ವಾಮ್ಯ ದಾಖಲಿಸಿದೆ. ಹಕ್ಕುಸ್ವಾಮ್ಯ ಪಡೆದಿರುವ ಪ್ರತಿಯಲ್ಲಿ ಕ್ಲಿಕ್(kliq) ಎಂದು ನಮೂದಿಸಲಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ.

ಇನ್ನಷ್ಟು ತಡವಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ

ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ನೇರ ಪೈಪೋಟಿಯನ್ನು ನೀಡಲಿರುವ ಹೊಸ ಕ್ಲಿಕ್ ಕಾರು ವಿಡಬ್ಲ್ಯೂ ಎಂಕ್ಯೂಬಿ ಎಒ ಇನ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಅಭಿವೃದ್ದಿಗೊಂಡಿದ್ದು, ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಇನ್ನಷ್ಟು ತಡವಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ

ಕ್ಲಿಕ್ ಕಾರು ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಕಾಮಿಕ್ ಎಸ್‍‍ಯುವಿಯ ಮಾದರಿಯಲ್ಲಿದ್ದು, ಹೊಸ ಎಸ್‍‍ಯುವಿಯು ಮುಂಭಾಗದಲ್ಲಿ ದೊಡ್ಡ ಗ್ರಿಲ್ ಮತ್ತು ಹೆಚ್ಚು ವಿನ್ಯಾಸಗೊಳಿಸಲಾದ ಬಂಪರ್ ಅನ್ನು ಹೊಂದಿದೆ.

ಇನ್ನಷ್ಟು ತಡವಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ

ಹೊಸ ಕಾರಿನಲ್ಲಿ ಡ್ಯುಯಲ್ ಹೆಡ್‍‍ಲ್ಯಾಂಪ್‍, ಏರ್ ಇನ್‍‍ಟೆಕ್ ಮತ್ತು ಮುಂಭಾಗದ ಬಂಪರ್‌ನಲ್ಲಿ ಸ್ಕಫ್ ಪ್ಲೇಟ್‍ಗಳೊಂದಿಗೆ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಎಸ್‍‍ಯುವಿಯ ಎರಡು ಬದಿಗಳಲ್ಲೂ ಮತ್ತು ಹಿಂಭಾಗದ ಪೊಫೈಲ್‌ನಲ್ಲೂ ಸ್ಪೋರ್ಟಿ ಥೀಮ್ ಅನ್ನು ಹೊಂದಿವೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಇನ್ನಷ್ಟು ತಡವಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ

ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‍‍ಯುವಿಯ ಸೈಡ್ ಪ್ರೊಫೈಲ್‍‍ನಲ್ಲೂ ಶಾರ್ಪ್ ಲೈನ್‍‍ಗಳಿದ್ದು, ಇದರ ಹಿಂಭಾಗದಲ್ಲಿರುವ ಎಲ್ಇಡಿ ಟೈಲ್‍‍ಲೈಟ್‍ಗಳು ಮತ್ತು ರೂಫ್ ಮೌಂಟೆಡ್ ಸ್ಪಾಯ್ಲರ್ ಸೌಲಭ್ಯವು ಹೊಸ ಕಾರಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ಅನ್ನು ನೀಡುತ್ತವೆ.

ಇನ್ನಷ್ಟು ತಡವಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ

ಹಾಗೆಯೇ ಹೊಸ ಎಸ್‍‍ಯುವಿಯ ಇಂಟಿರಿಯರ್ ಕೂಡಾ ಆಕರ್ಷಕವಾಗಿದ್ದು, ಇಂಟಿರಿಯರ್‍‍‍ನಲ್ಲಿ ಮಲ್ಟಿ ಲೆಯರ್ಡ್ ಡ್ಯಾಶ್‍‍‍ಬೋರ್ಡ್ ಮತ್ತು ವಿವಿಧ ಬಣ್ಣಗಳನ್ನು ಹೊಂದಿರುವ ಆ್ಯಂಬಿಯೆಂಟ್ ಲೈಟಿಂಗ್ಸ್ ಮತ್ತು ಆರಾಮದಾಯಕ ಆಸನ ಸೌಲಭ್ಯ ಪಡೆದಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಇನ್ನಷ್ಟು ತಡವಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ

ಇಂಟಿರಿಯರ್ ಮಧ್ಯದಲ್ಲಿ ಸೆಂಟರ್ ಕನ್ಸೊಲ್, ಫ್ಲಾಟ್ ಬಾಟಮ್ ಸ್ಟಿರಿಂಗ್ ವ್ಹೀಲ್ ಮತ್ತು 12-ಇಂಚಿನ ಟಚ್‍‍ಸ್ಕ್ರೀನ್ ಡಿಸ್‍‍ಪ್ಲೇ ಅಳವಡಿಸಲಾಗಿದೆ. ವರ್ಚುವಲ್ ಕಾಕ್‍‍ಪಿಟ್, ಕಾನ್ಫಿಗೆರ್ ಮಾಡಬಹುದಾದ ಟಿ‍ಎ‍ಫ್‍‍ಟಿ ಇನ್‌ಸ್ಟ್ರುಮೆಂಟ್ ಪ್ಯಾನೆಲ್ ಅನ್ನು ಸಹ ಹೊಂದಿದೆ.

ಇನ್ನಷ್ಟು ತಡವಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಹೊಸ ಕಾರಿನಲ್ಲಿ ಹೊಸದಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 1.-0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಮಾತ್ರವೇ ಪರಿಚಯಿಸುವ ಸಾಧ್ಯತೆಗಳಿದ್ದು, ಸಾಮಾನ್ಯ ಆವೃತ್ತಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟರ್ಬೋ ಮಾದರಿಯು 7-ಸ್ಪೀಡ್ ಡ್ಯಯುಲ್ ಕ್ಲಚ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಳ್ಳಲಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಇನ್ನಷ್ಟು ತಡವಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟ ಉತ್ತಮ ಸಂಚಲನಕ್ಕೆ ಕಾರಣವಾಗಲಿರುವ ಹೊಸ ಕಿಕ್ಲ್ ಕಾರು ಮುಂದಿನ ನವೆಂಬರ್ ಹೊತ್ತಿಗೆ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
Read more on ಸ್ಕೋಡಾ skoda
English summary
Skoda Vision In Production Spec SUV Launch Delayed To 2021 Details. Read in Kannnada.
Story first published: Monday, May 25, 2020, 16:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X