ಭರ್ಜರಿ ಮಾರಾಟ ದಾಖಲಿಸಿದ ಸೊನಾಲಿಕಾ ಟ್ರ್ಯಾಕ್ಟರ್ಸ್
ಸೊನಾಲಿಕಾ ಟ್ರ್ಯಾಕ್ಟರ್ಸ್ ಮೇ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಮೇ ತಿಂಗಳಿನಲ್ಲಿ ಒಟ್ಟು 9,177 ಟ್ರಾಕ್ಟರುಗಳು ಮಾರಾಟವಾಗಿವೆ ಎಂದು ಕಂಪನಿಯು ತನ್ನ ವರದಿಯಲ್ಲಿ ತಿಳಿಸಿದೆ. 2019ರ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳ ಟ್ರಾಕ್ಟರುಗಳ ಮಾರಾಟದಲ್ಲಿ 18.6%ನಷ್ಟು ಹೆಚ್ಚಳ ಉಂಟಾಗಿದೆ.

2019ರ ಮೇ ತಿಂಗಳಿನಲ್ಲಿ ಕಂಪನಿಯು ದೇಶಿಯ ಹಾಗೂ ರಫ್ತು ಮಾರುಕಟ್ಟೆಗಳಲ್ಲಿ ಒಟ್ಟು 7,737 ಟ್ರಾಕ್ಟರುಗಳನ್ನು ಮಾರಾಟ ಮಾಡಿತ್ತು. ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಭತ್ತದ ಬಿತ್ತನೆ ಆರಂಭವಾಗಿದೆ. ಇದರಿಂದಾಗಿ ಟ್ರಾಕ್ಟರುಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.

ಟ್ರಾಕ್ಟರುಗಳ ಜೊತೆಗೆ ಇತರ ಕೃಷಿ ಉಪಕರಣಗಳಿಗೂ ಬೇಡಿಕೆ ಹೆಚ್ಚಾಗಿದೆ. ಕಂಪನಿಯು ಮೇ ತಿಂಗಳಿನಲ್ಲಿ 1,537 ಟ್ರಾಕ್ಟರುಗಳನ್ನು ರಫ್ತು ಮಾಡಿದೆ. ಲಾಕ್‌ಡೌನ್ ಸಡಿಲಿಕೆಯ ನಂತರ, ಕಂಪನಿಯು ಮೇ ತಿಂಗಳಿನಲ್ಲಿ 85%ನಷ್ಟು ನಿರ್ಮಾಣ ಕಾರ್ಯಗಳನ್ನು ಪುನರಾರಂಭಿಸಿತ್ತು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಜೂನ್ ತಿಂಗಳಿನಲ್ಲಿ 100%ನಷ್ಟು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಕಂಪನಿಯು ಗ್ರೀನ್ ಹಾಗೂ ಆರೆಂಜ್ ಝೋನ್‌ಗಳಲ್ಲಿರುವ ತನ್ನ ಶೋ ರೂಂಗಳನ್ನು ತೆರೆಯುತ್ತಿದೆ. ಟ್ರಾಕ್ಟರ್ ಹಾಗೂ ಕೃಷಿ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಕೂಡ ಮೇ ತಿಂಗಳಲ್ಲಿ ಟ್ರ್ಯಾಕ್ಟರ್‌ಗಳ ಮಾರಾಟದಲ್ಲಿ 2%ನಷ್ಟು ಹೆಚ್ಚಳ ಕಂಡಿದೆ.

ಮಹೀಂದ್ರಾ ಕಂಪನಿಯು ಈ ವರ್ಷದ ಮೇ ತಿಂಗಳಿನಲ್ಲಿ ಒಟ್ಟು 24,017 ಟ್ರಾಕ್ಟರುಗಳನ್ನು ಮಾರಾಟ ಮಾಡಿದೆ. 2019ರ ಮೇ ತಿಂಗಳಿನಲ್ಲಿ 23,539 ಟ್ರಾಕ್ಟರುಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಅಂಶಗಳನ್ನು ನೋಡಿದರೆ, ಲಾಕ್‌ಡೌನ್ ನಂತರವೂ ಕೃಷಿ ಕ್ಷೇತ್ರದ ವಾಹನಗಳ ಮಾರಾಟವು ಸುಧಾರಿಸಿರುವುದನ್ನು ಕಾಣಬಹುದು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್‌ನಿಂದಾಗಿ ಕಾರು ತಯಾರಕ ಕಂಪನಿಗಳ ಮಾರಾಟದಲ್ಲಿ 80-90%ನಷ್ಟು ಕುಸಿತಗೊಂಡಿದ್ದರೆ, ಟ್ರಾಕ್ಟರುಗಳ ಮಾರಾಟದಲ್ಲಿ ಏರಿಕೆಯಾಗಿದೆ. ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್‌ಗಳ ರಫ್ತು ಪ್ರಮಾಣವು ಕಡಿಮೆಯಾಗಿದ್ದರೂ ಮುಂಬರುವ ದಿನಗಳಲ್ಲಿ ಚೇತರಿಸಿಕೊಂಡು ಮಾರಾಟ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಈ ವರ್ಷದ ಮೇ ತಿಂಗಳಿನಲ್ಲಿ 324 ಟ್ರಾಕ್ಟರುಗಳನ್ನು ವಿದೇಶಕ್ಕೆ ರಫ್ತು ಮಾಡಿದೆ. 2019ರ ಮೇ ತಿಂಗಳಿನಲ್ಲಿ ಕಂಪನಿಯು 1165 ಟ್ರಾಕ್ಟರುಗಳನ್ನು ವಿದೇಶಕ್ಕೆ ರಫ್ತು ಮಾಡಿತ್ತು. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ರಫ್ತು ಪ್ರಮಾಣವು 72%ನಷ್ಟು ಕಡಿಮೆಯಾಗಿದೆ.


Click it and Unblock the Notifications