ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನೊಂದಿಗೆ ಸರ್‍‍ಪ್ರೈಸ್ ನೀಡಿದ ಸೋನಿ..!

ಈಗ ಎಲ್ಲಿ ನೋಡಿದರೂ ಎಲೆಕ್ಟ್ರಿಕ್ ವಾಹನಗಳದ್ದೇ ಹವಾ. ಜನಪ್ರಿಯ ವಾಹನ ತಯಾರಕ ಕಂಪನಿಗಳಿಂದ ಹಿಡಿದು, ಸ್ಟಾರ್ಟ್ ಅಪ್ ಕಂಪನಿಗಳವರೆಗೆ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನೊಂದಿಗೆ ಸರ್‍‍ಪ್ರೈಸ್ ನೀಡಿದ ಸೋನಿ..!

ಸೋನಿ ಎಂದು ಕರೆಯಲಾಗುವ ಸೋನಿ ಕಾರ್ಪೋರೇಷನ್, ಜಪಾನ್ ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದೆ. ಈ ಕಂಪನಿಯ ಕೇಂದ್ರ ಕಚೇರಿಯು ಜಪಾನಿನ ರಾಜಧಾನಿ ಟೊಕಿಯೊದಲ್ಲಿದೆ. ಸೋನಿ ಕಂಪನಿಯು ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ.

ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನೊಂದಿಗೆ ಸರ್‍‍ಪ್ರೈಸ್ ನೀಡಿದ ಸೋನಿ..!

ಈ ವ್ಯವಹಾರಗಳಲ್ಲಿ ಎಲೆಕ್ಟ್ರಾನಿಕ್ಸ್, ಗೇಮಿಂಗ್, ಮನರಂಜನೆ ಹಾಗೂ ಹಣಕಾಸು ಸೇವೆಗಳು ಸೇರಿವೆ. ಈಗ ಸೋನಿ ಕಂಪನಿಯು ಆಟೋಮೊಬೈಲ್ ಉದ್ಯಮಕ್ಕೂ ಕಾಲಿಟ್ಟಿದೆ. ಸೋನಿ ಕಂಪನಿಯು ಈ ವರ್ಷದ ಬಹುದೊಡ್ಡ ಅಚ್ಚರಿಯನ್ನು ನೀಡಿದೆ.

ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನೊಂದಿಗೆ ಸರ್‍‍ಪ್ರೈಸ್ ನೀಡಿದ ಸೋನಿ..!

ಲಾಸ್‍‍ವೇಗಾಸ್‍‍ನಲ್ಲಿ ನಡೆದ 2020ರ ಕಂಸ್ಯೂಮರ್ ಎಲೆಕ್ಟ್ರಾನಿಕ್ ಶೋದಲ್ಲಿ ಸೋನಿ ಕಂಪನಿಯು ವಿಷನ್ ಎಸ್ ಎಂಬ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರ್ ಅನ್ನು ಪ್ರದರ್ಶಿಸಿದೆ. ಸೋನಿ ಕಂಪನಿಯು ಮನರಂಜನಾ ವಸ್ತುಗಳಿಂದ ಹಿಡಿದು ಕ್ಯಾಮರಾ ಸೆನ್ಸಾರ್‍‍ಗಳವರೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಿದೆ.

ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನೊಂದಿಗೆ ಸರ್‍‍ಪ್ರೈಸ್ ನೀಡಿದ ಸೋನಿ..!

ವಿಷನ್ ಎಸ್ ಕಾರು, 33 ವಿಧದ ಸೆನ್ಸಾರ್‍‍ಗಳನ್ನು ಕಾರಿನ ಒಳಗೆ ಹಾಗೂ ಹೊರಗೆ ಹೊಂದಿದೆ. ಇದರ ಜೊತೆಗೆ ಹಲವು ವೈಡ್‍‍ಸ್ಕ್ರೀನ್ ಡಿಸ್‍‍ಪ್ಲೇ, 360 ಆಡಿಯೊ, ಯಾವಾಗಲೂ ಕನೆಕ್ಟ್ ಆಗಿರಲು ಬ್ಲಾಕ್ ಬೆರ್ರಿ ಹಾಗೂ ಬಾಷ್ ಕಂಪನಿಯ ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿದೆ.

ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನೊಂದಿಗೆ ಸರ್‍‍ಪ್ರೈಸ್ ನೀಡಿದ ಸೋನಿ..!

ಈ ಕಾರಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಎಲೆಕ್ಟ್ರಿಕ್ ಪ್ಲಾಟ್‍‍ಫಾರಂ ಅಳವಡಿಸಲಾಗಿದೆ. ಈ ಪ್ಲಾಟ್‍‍ಫಾರಂ ಅನ್ನು ಆಟೋಮೋಟಿವ್ ಬಿಡಿಭಾಗಗಳನ್ನು ಪೂರೈಸುವ ಮ್ಯಾಗ್ನಾ ಕಂಪನಿಯು ಅಭಿವೃದ್ಧಿಪಡಿಸಿದೆ.

ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನೊಂದಿಗೆ ಸರ್‍‍ಪ್ರೈಸ್ ನೀಡಿದ ಸೋನಿ..!

ಈ ಪ್ಲಾಟ್‍‍ಫಾರಂ ಎಸ್‍‍ಯುವಿಗಳಂತಹ ವಾಹನಗಳಿಗೆ ಪವರ್ ನೀಡುತ್ತದೆಯೆಂದು ಸೋನಿ ಕಂಪನಿಯು ಹೇಳಿದೆ. ಕಾರಿನ ಹೊರಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಹೆಡ್‍‍ಲೈಟ್‍‍ಗಳ ಸುತ್ತಲೂ ಕೆಲವು ಬಲಿಷ್ಟವಾದ ಪೋರ್ಷೆ ವೈಬ್‌ಗಳಿವೆ.

ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನೊಂದಿಗೆ ಸರ್‍‍ಪ್ರೈಸ್ ನೀಡಿದ ಸೋನಿ..!

ಸೈಡ್ ಪ್ರೊಫೈಲ್‌ನಲ್ಲಿ ಈ ಕಾರು ಸ್ವಲ್ಪಮಟ್ಟಿಗೆ ಲುಸಿಡ್ ಮೋಟಾರ್ಸ್ ಏರ್ ಅನ್ನು ಹೋಲುತ್ತದೆ. ಕಾರಿನ ಒಳಗೆ, ವಿಷನ್-ಎಸ್ ಡ್ಯಾಶ್‌ಬೋರ್ಡ್ ಸ್ಪ್ಯಾನಿಂಗ್ ಸ್ಕ್ರೀನ್ ಅನ್ನು ನೀಡಲಾಗಿದೆ. ಈ ರೀತಿಯ ಸ್ಕ್ರೀನ್‍‍ಗಳನ್ನು ಚೀನಾದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಕಂಪನಿಯಾದ ಬೈಟನ್ ತನ್ನ ಕಾರುಗಳಲ್ಲಿರುವ, ಹೆಡ್‌ರೆಸ್ಟ್‌ಗಳಲ್ಲಿ ಹಿಂದಿನ ಆಸನ ಪ್ರಯಾಣಿಕರಿಗಾಗಿ ನೀಡುತ್ತದೆ.

ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನೊಂದಿಗೆ ಸರ್‍‍ಪ್ರೈಸ್ ನೀಡಿದ ಸೋನಿ..!

ಈ ಮೂಲಮಾದರಿಯು ನಮ್ಮ ಭವಿಷ್ಯದ ಮೊಬಿಲಿಟಿ ಹೇಗಿರಲಿದೆ ಎಂಬುದನ್ನು ತೋರಿಸುತ್ತದೆ ಎಂದು ಸೋನಿ ಕಂಪನಿಯ ಸಿ‍ಇ‍ಒ ಕೆಂಚಿರೊ ಯೊಶಿದಾರವರು ಹೇಳಿದರು. ಕಂಪನಿಯು ಸಿ‍ಇ‍ಎಸ್ ಸಮ್ಮೇಳನದ ಕೊನೆಯಲ್ಲಿ ಈ ಎಲೆಕ್ಟ್ರಿಕ್ ಕಾರಿನ ಮಾಹಿತಿಯನ್ನು ಬಹಿರಂಗಪಡಿಸಿತು.

ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನೊಂದಿಗೆ ಸರ್‍‍ಪ್ರೈಸ್ ನೀಡಿದ ಸೋನಿ..!

ಈ ಸಮ್ಮೇಳನದಲ್ಲಿ ಕಂಪನಿಯು ತನ್ನ ಹೊಸ ಪ್ಲೇ ಸ್ಟೇಷನ್ 5ನ ಲೋಗೊವನ್ನು ಸಹ ಅನಾವರಣಗೊಳಿಸಿತು. ಸೋನಿ ಕಂಪನಿಯು ಈ ಕಾರಿನ ಬಗ್ಗೆ ಹೇಳಲು ಕೆಲವು ನಿಮಿಷಗಳನ್ನು ಮಾತ್ರ ತೆಗೆದುಕೊಂಡಿತು.

ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನೊಂದಿಗೆ ಸರ್‍‍ಪ್ರೈಸ್ ನೀಡಿದ ಸೋನಿ..!

ಇದರಿಂದಾಗಿ ಈ ಕಾರ್ ಅನ್ನು ಸೋನಿ ಕಂಪನಿ ತಯಾರಿಸಲಿದೆಯೇ ಅಥವಾ ಮ್ಯಾಗ್ನಾ ಕಂಪನಿ ತಯಾರಿಸಲಿದೆಯೇ? ಇದು ಕೇವಲ ರೆಫೆರೆನ್ಸ್ ಕಾರೇ? ಮ್ಯಾಗ್ನಾ ಕಂಪನಿಯು ತನ್ನ ಪ್ಲಾಟ್‍‍ಫಾರಂ ಅನ್ನು ಬಳಸಿಕೊಂಡು ಬೇರೆ ಕಂಪನಿಗಳಿಗೆ ಈ ಕಾರ್ ಅನ್ನು ತಯಾರಿಸಲು ಅನುಮತಿ ನೀಡುವುದೇ? ಮುಂತಾದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದಂತಾಯಿತು.

Article Published On: Wednesday, January 8, 2020, 17:57 [IST]
English summary
Sony surprises with an electric concept car - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+