ಬಿಎಸ್ 4 ವಾಹನ ನೋಂದಣಿ ನಿಷೇಧಿಸಿದ ಸುಪ್ರೀಂ ಕೋರ್ಟ್

ಕಳೆದ ಕೆಲವು ದಿನಗಳಿಂದ ಬಿಎಸ್ 4 ವಾಹನಗಳ ಬಗ್ಗೆಯೇ ಚರ್ಚೆಯಾಗುತ್ತಿದೆ. ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ಕಾರಣಕ್ಕೆ ವಾಹನ ತಯಾರಕ ಕಂಪನಿಗಳಿಗೆ ತಮ್ಮ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ.

ಬಿಎಸ್ 4 ವಾಹನ ನೋಂದಣಿ ನಿಷೇಧಿಸಿದ ಸುಪ್ರೀಂ ಕೋರ್ಟ್

ಈ ಕಾರಣಕ್ಕೆ ಸುಪ್ರೀಂ ಕೋರ್ಟ್ ಬಿಎಸ್ 4 ವಾಹನಗಳ ಮಾರಾಟಕ್ಕೆ 10 ದಿನಗಳ ಗಡುವನ್ನು ವಿಸ್ತರಿಸಿತ್ತು. ಈಗ ಸುಪ್ರೀಂ ಕೋರ್ಟ್ ಬಿಎಸ್ 4 ವಾಹನಗಳ ನೋಂದಣಿಯನ್ನು ನಿಷೇಧಿಸಿದೆ. ನಿಗದಿತ ಗಡುವಿನಲ್ಲಿ ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಿರುವ ವಿತರಕರ ಸಂಘದ ಕ್ರಮಕ್ಕೆ ಸುಪ್ರೀಂ ಕೋರ್ಟ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಬಿಎಸ್ 4 ವಾಹನ ನೋಂದಣಿ ನಿಷೇಧಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿದೆ. ಬಿಎಸ್ 4 ವಾಹನಗಳನ್ನು ನೋಂದಾಯಿಸಲು ಅನುಮತಿ ನೀಡುವಂತೆ ಕೋರಿ ವಾಹನ ಮಾರಾಟಗಾರರ ಸಂಘವು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬಿಎಸ್ 4 ವಾಹನ ನೋಂದಣಿ ನಿಷೇಧಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ ಕೇವಲ 10%ನಷ್ಟು ಬಿಎಸ್ 4 ವಾಹನಗಳ ಮಾರಾಟಕ್ಕೆ ಅನುಮತಿ ನೀಡಿತ್ತು. ಆದರೆ ವಾಹನ ತಯಾರಕ ಕಂಪನಿಗಳು ಹಾಗೂ ಡೀಲರ್ ಗಳು ಇದಕ್ಕಿಂತ ಹೆಚ್ಚಿನ ವಾಹನಗಳನ್ನು ಮಾರಾಟ ಮಾಡಿದ್ದಾರೆ. ಈ ಕಾರಣಕ್ಕೆ ನ್ಯಾಯಾಲಯವು ವಿತರಕರ ಸಂಘಕ್ಕೆ ಛೀಮಾರಿ ಹಾಕಿದೆ.

ಬಿಎಸ್ 4 ವಾಹನ ನೋಂದಣಿ ನಿಷೇಧಿಸಿದ ಸುಪ್ರೀಂ ಕೋರ್ಟ್

ಕೆಲವು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ಗಡುವಿನ ನಂತರ ನೋಂದಾಯಿಸಲಾದ ಎಲ್ಲಾ ಬಿಎಸ್ 4 ವಾಹನಗಳ ನೋಂದಣಿಯನ್ನು ರದ್ದುಪಡಿಸುವಂತೆ ಆದೇಶಿಸಿತ್ತು. ಇದರಿಂದ ಈ ವಾಹನಗಳನ್ನು ಖರೀದಿಸಿದವರು ಸಂಕಷ್ಟಕ್ಕೆ ಸಿಲುಕಲಿದ್ದು, ಭಾರಿ ನಷ್ಟವನ್ನು ಅನುಭವಿಸಲಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬಿಎಸ್ 4 ವಾಹನ ನೋಂದಣಿ ನಿಷೇಧಿಸಿದ ಸುಪ್ರೀಂ ಕೋರ್ಟ್

ಹಿಂದಿನ ದಿನಾಂಕಗಳನ್ನು ನಮೂದಿಸಿ ವಾಹನಗಳನ್ನು ನೋಂದಾಯಿಸಲಾಗುತ್ತಿದೆ ಎಂಬ ಆರೋಪವನ್ನು ವಾಹನ ತಯಾರಕ ಕಂಪನಿಗಳು ಹಾಗೂ ವಿತರಕರು ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ಎಲ್ಲಾ ನೋಂದಣಿಗಳನ್ನು ರದ್ದುಗೊಳಿಸುವಂತೆ ಆದೇಶ ನೀಡಲಾಗಿದೆ. ವಾಹನ ವಿತರಕರ ಸಂಘವು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ.

ಬಿಎಸ್ 4 ವಾಹನ ನೋಂದಣಿ ನಿಷೇಧಿಸಿದ ಸುಪ್ರೀಂ ಕೋರ್ಟ್

ಭಾರತದ ದೊಡ್ಡ ಕಾರು ಹಾಗೂ ಬೈಕ್ ತಯಾರಕ ಕಂಪನಿಗಳು ದೊಡ್ಡ ಪ್ರಮಾಣದ ಬಿಎಸ್ 4 ವಾಹನಗಳನ್ನು ಹೊಂದಿದ್ದು, ಈ ವಾಹನಗಳ ಬೆಲೆ ಸಾವಿರಾರು ಕೋಟಿ ರೂಪಾಯಿಗಳಾಗುತ್ತದೆ. ತಮಗೆ ಉಂಟಾಗುವ ನಷ್ಟವನ್ನು ತಪ್ಪಿಸಲು ಕಂಪನಿಗಳು ಹಾಗೂ ವಾಹನ ವಿತರಕರ ಸಂಘವು ಸುಪ್ರೀಂ ಕೋರ್ಟ್‌ ಮೊರೆ ಹೋಗಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬಿಎಸ್ 4 ವಾಹನ ನೋಂದಣಿ ನಿಷೇಧಿಸಿದ ಸುಪ್ರೀಂ ಕೋರ್ಟ್

ಬಿಎಸ್ 4 ವಾಹನಗಳ ಮಾರಾಟಕ್ಕೆ ನಿರಂತರ ಪ್ರಯತ್ನಗಳು ಸಾಗುತ್ತಿವೆ. ಮುಂದಿನ ವಿಚಾರಣೆಯಂದು ಬಿಎಸ್ 4 ವಾಹನಗಳ ಮಾರಾಟಕ್ಕೆ ಅವಕಾಶ ಸಿಗಬಹುದೆಂದು ನಿರೀಕ್ಷಿಸಲಾಗುತ್ತಿದೆ. ಆದರೆ ಸುಪ್ರೀಂ ಕೋರ್ಟ್‌ ಬಿಎಸ್ 4 ವಾಹನಗಳ ಮಾರಾಟಕ್ಕೆ ಅವಕಾಶ ನೀಡುವ ಸಾಧ್ಯತೆಗಳಿಲ್ಲ.

Most Read Articles

Kannada
English summary
Supreme Court bars registration of BS4 vehicles, next hearing on August 13. Read in Kannada.
Story first published: Friday, July 31, 2020, 16:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X