2020ರ ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾದ ಟಾಟಾ ಮೋಟಾರ್ಸ್

ಭಾರತದ ಜನಪ್ರಿಯ ಕ್ರಿಕೆಟ್ ಆವೃತ್ತಿಯಲ್ಲಿ ಒಂದಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)‌ 2020ರ ಆವೃತ್ತಿಗೆ ಟಾಟಾ ಮೋಟಾರ್ಸ್ ಕಂಪನಿಯು ಬ್ರಾಂಡ್ ಅಂಬಾಸಿಡರ್ ಆಗಿ ಸತತ ಮೂರನೇ ವರ್ಷವು ಮುಂದುವರಿದಿದ್ದು, 2020ರ ಆವೃತ್ತಿಗೆ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯನ್ನು ಆಯ್ಕೆ ಮಾಡಿದೆ.

ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾದ ಟಾಟಾ

2018ರಿಂದಲೂ ವಿವಿಧ ಕಾರು ಮಾದರಿಯೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾಗುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು 2018ರಲ್ಲಿ ನೆಕ್ಸಾನ್ ಮಾದರಿಯನ್ನು ಮತ್ತು 2019ರ ಇಂಡಿಯನ್ ಪ್ರೀಮಿಯರ್ ಲೀಗ್‌ ವೇಳೆ ಹ್ಯಾರಿಯರ್ ಕಾರು ಮಾದರಿಯನ್ನು ಬ್ರಾಂಡ್ ಅಂಬಾಸಿಡರ್ ಮಾದರಿಯಾಗಿ ಆಯ್ಕೆ ಮಾಡಿತ್ತು. ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಆಲ್‌ಟ್ರೊಜ್ ಮಾದರಿಯನ್ನು ಹೊಸ ಬ್ರಾಂಡ್ ಅಂಬಾಸಿಡರ್ ಮಾದರಿಯನ್ನಾಗಿ ಆಯ್ಕೆ ಮಾಡಿದ್ದು, 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಇದೇ ತಿಂಗಳು 19ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ.

ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾದ ಟಾಟಾ

2020ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರತಿ ಮ್ಯಾಚ್‌ನಲ್ಲೂ ಆಲ್‌ಟ್ರೊಜ್ ಕಾರುನ್ನು ಪ್ರದರ್ಶನಗೊಳಿಸಲಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರನ್ನು ಆಕರ್ಷಣೆ ಮಾಡಲಿದ್ದು, ಈ ವೇಳೆ ಆಟಗಾರರು ಮತ್ತು ವಿಕ್ಷಕರಿಗೆ ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡುತ್ತಿದೆ.

ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾದ ಟಾಟಾ

ಆಲ್ಟ್ರೋಜ್ ಸ್ಟ್ರೈಕರ್ ಪ್ರಶಸ್ತಿಗಳನ್ನು ಬಾಚಿಕೊಳ್ಳಲು ಕ್ರಿಕೆಟ್ ಆಟಗಾರರಿಗೆ ಮಾತ್ರವಲ್ಲದೆ ವಿಕ್ಷಕರಿಗೂ ಅವಕಾಶ ನೀಡುವ ಟಾಟಾ ಮೋಟಾರ್ಸ್ ಕಂಪನಿಯು ವಿಜೇತರಿಗೆ ನಗದು ಬಹುಮಾನದ ಜೊತೆಗೆ ಕಾರು ಗೆಲ್ಲುವ ಅವಕಾಶ ನೀಡುತ್ತಿದೆ.

ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾದ ಟಾಟಾ

ಆಟಗಾರರಿಗೆ ಮೈದಾನದಲ್ಲಿ ಪ್ರದರ್ಶನ ನೀಡುವ ಕೌಶಲ್ಯದ ಆಧಾರದ ಮೇಲೆ ಕಾರು ಗೆಲ್ಲುವ ಅವಕಾಶ ನೀಡಿದ್ದಲ್ಲಿ ವಿಕ್ಷಕರಿಗೆ ಕಾರಿನ ಜೊತೆಗೆ ವಿವಿಧ ಬಹುಮಾನ ಗೆಲ್ಲಲು ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆದಿದೆ. ಆಲ್ಟ್ರೋಜ್ ಸೂಪರ್ ಸ್ಟ್ರೈಕ್(Altroz Super Strike) ಮೊಬೈಲ್ ಗೇಮ್‌ನಲ್ಲಿ ಭಾಗಿಯಾಗಲಿರುವ ವಿಕ್ಷಕರಿಗೆ ಪ್ರತಿ ದಿನ ರೂ. 5 ಸಾವಿರ ಮೌಲ್ಯದ ವೊಚರ್ ಗೆಲ್ಲುವ ಅವಕಾಶ ನೀಡಿದ್ದು, ಹೆಚ್ಚು ವೊಚರ್ ಪಡೆದುಕೊಳ್ಳುವ ವಿಕ್ಷಕರಿಗೆ ಆಲ್ಟ್ರೋಜ್ ಸೂಪರ್ ಸ್ಟ್ರೈಕ್ ಟ್ರೋಫಿ ಜೊತೆಗೆ ರೂ.1 ಲಕ್ಷ ನಗದು ಬಹುಮಾನವನ್ನು ವಿತರಣೆ ಮಾಡಲಿದೆ.

ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾದ ಟಾಟಾ

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾಗಲು ಹಲವಾರು ಸವಾಲುಗಳಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಮಾರಾಟದಲ್ಲಿ ಮತ್ತಷ್ಟು ಮುನ್ನಡೆ ಕಾಯ್ದಕೊಳ್ಳುವ ವಿಶ್ವಾಸದೊಂದಿಗೆ ಪಾಲುದಾರ ಕಂಪನಿಯಾಗುವ ಮೂಲಕ ವಿವಿಧ ಕಾರು ಮಾದರಿಗಳನ್ನು ಪ್ರದರ್ಶನ ಮಾಡುತ್ತಿದೆ.

ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾದ ಟಾಟಾ

ಆಲ್‌ಟ್ರೊಜ್ ಕಾರು ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಬೆಲೆಗಳನ್ನು ಪಡೆದುಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾದ ಟಾಟಾ

ಆಲ್‌ಟ್ರೊಜ್ ಕಾರು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.29 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.9.34 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಎಕ್ಸ್‌ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಜೊತೆ ಹೊಸದಾಗಿ ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌ ಅನ್ನು ಹೊಸದಾಗಿ ಪಡೆದುಕೊಂಡಿದೆ.

ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾದ ಟಾಟಾ

ಹೊಸ ಕಾರಿನಲ್ಲಿ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋದಿಂದ ಮತ್ತು ಡೀಸೆಲ್ ಎಂಜಿನ್ ಅನ್ನು ನೆಕ್ಸಾನ್ ಕಾರಿನಿಂದ ಎರವಲು ಪಡೆಯಲಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರ ಕಂಪನಿಯಾಗಿ ಆಯ್ಕೆಯಾದ ಟಾಟಾ

ಸದ್ಯಕ್ಕೆ ಆಲ್‌ಟ್ರೊಜ್ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಶೀಘ್ರದಲ್ಲೇ ಹೊಸ ಕಾರು ಟರ್ಬೋ ಪೆಟ್ರೋಲ್ ಮಾದರಿಯನ್ನು ಪಡೆದುಕೊಳ್ಳಲಿದ್ದು, ಹ್ಯಾಚ್‌ಬ್ಯಾಕ್ ಮಾದರಿಯಲ್ಲೇ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ.

Most Read Articles

Kannada
English summary
Tata Altroz Becomes Official Partners For IPL 2020. Read in Kannada.
Story first published: Monday, September 14, 2020, 18:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X