ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಟಾಟಾ ಆಲ್‍‍‍ಟ್ರೊಜ್ ಎಲೆಕ್ಟ್ರಿಕ್ ಕಾರು

ಟಾಟಾ ಮೋಟಾರ್ಸ್ ತನ್ನ ಹೊಸ ಆಲ್‍‍‍ಟ್ರೊಜ್ ಎಲೆಕ್ಟ್ರಿಕ್ ಕಾರ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಆಲ್‍‍ಟ್ರೊಜ್ ಎಲೆಕ್ಟ್ರಿಕ್ ಕಾರು ಆಲ್ಫಾ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಟಾಟಾ ಆಲ್‍‍‍ಟ್ರೊಜ್ ಎಲೆಕ್ಟ್ರಿಕ್ ಕಾರು

ಟಾಟಾ ಸಂಸ್ಥೆಯು ಇನ್ನೂ ಕೂಡ ಆಲ್‍‍‍ಟ್ರೊಜ್ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಈ ಎಲೆಕ್ಟ್ರಿಕ್ ಕಾರನ್ನು ಈ ವರ್ಷದ ಅಂತ್ಯದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಹೊಸ ಟಾಟಾ ಆಲ್‍‍ಟ್ರೊಜ್ ಇವಿನಲ್ಲಿ ಡ್ಯುಯಲ್ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿದೆ. ಇದರಲ್ಲಿ ತಂಪಾಗಿಸಲು ಅಗತ್ಯವಿರುವ ಐಸಿ ಎಂಜಿನ್ ಅನ್ನು ಹೊಂದಿಲ್ಲ. ಈ ಕಾರಿನಲ್ಲಿ ನವೀಕರಿಸಿದ ಬಂಪರ್ ಅನ್ನು ಹೊಂದಿದೆ. ಈ ಇವಿಯ ವಿಂಡೋಗಳಲ್ಲಿ ನೀಲಿ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಟಾಟಾ ಆಲ್‍‍‍ಟ್ರೊಜ್ ಎಲೆಕ್ಟ್ರಿಕ್ ಕಾರು

ಇನ್ನು ಆಲ್‍‍ಟ್ರೊಜ್ ಇವಿಯಲ್ಲಿನ ಎಸಿ ವೆಂಟ್ಸ್ ಸುತ್ತಲೂ ಮತ್ತು ಸೆಂಟರ್ ಕನ್ಸೋಲ್‍ನಲ್ಲಿ ನೀಲಿ ಬಣ್ಣದ ಅಂಶಗಳನ್ನು ಹೊರತು ಪಡಿಸಿದರೆ ಸಾಮಾನ್ಯ ಆಲ್‍‍ಟ್ರೊಜ್ ಕಾರಿನಂತೆ ಇದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಟಾಟಾ ಆಲ್‍‍‍ಟ್ರೊಜ್ ಎಲೆಕ್ಟ್ರಿಕ್ ಕಾರು

ಆಲ್‍‍ಟ್ರೊಜ್ ಇವಿನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಯಲ್ಲಿ ಜಾರ್ಜಿಂಗ್ ಅಂಶಗಳು, ಈ ಇವಿಯ ರೇಂಜ್ ಮತ್ತು ಇತರ ಮಾಹಿತಿಗಳನ್ನು ಹೊಂದಿರುವ ಟಿ‍ಎ‍ಫ್‍ಟಿ ಡಿಸ್‍‍ಪ್ಲೇಯನ್ನು ಹೊಂದಿದೆ. ಇನ್ನು ರೇರ್ ಸೀಟ್‍‍ನಲ್ಲಿ ಎಸಿ ವೆಂಟ್ಸ್, ಆಟೋ ಎಸಿ, ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‍‍ಪ್ಲೇಯೊಂದಿಗೆ 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಮತ್ತು ಕಾರ್‍ ಟೆಕ್‍‍ಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಟಾಟಾ ಆಲ್‍‍‍ಟ್ರೊಜ್ ಎಲೆಕ್ಟ್ರಿಕ್ ಕಾರು

ಟಾಟಾ ಸಂಸ್ಥೆಯು ಆಲ್ಟ್ರೊಜ್ ಇವಿಯ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸದಿದ್ದರೂ ಇದು ನೆಕ್ಸಾನ್ ಇವಿಯಂತೆಯೇ ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಟಾಟಾ ಆಲ್‍‍‍ಟ್ರೊಜ್ ಎಲೆಕ್ಟ್ರಿಕ್ ಕಾರು

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ 95 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಮೋಟರ್ ಮುಂಭಾಗದ ವ್ಹೀಲ್‍‍ಗಳಿಗೆ ಪವರ್ ನೀಡುತ್ತದೆ. ಈ ಮೋಟರ್‍‍ಗೆ 30.2 ಕಿ.ವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿ 129 ಬಿ‍‍ಹೆಚ್‍‍ಪಿ ಪವರ್ ಹಾಗೂ 245 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಟಾಟಾ ಆಲ್‍‍‍ಟ್ರೊಜ್ ಎಲೆಕ್ಟ್ರಿಕ್ ಕಾರು

ಎ‍ಆರ್‍ಎ‍ಐ ಪ್ರಮಾಣಪತ್ರದಂತೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಆದರೆ 312 ಕಿ.ಮೀವರೆಗೂ ಚಲಿಸುತ್ತದೆ ಎಂದು ಟಾಟಾ ಕಂಪನಿಯು ಹೇಳಿದೆ. ಆದರೆ ನೈಜ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಕಾರು 250 - 300 ಕಿ.ಮೀವರೆಗೂ ಚಲಿಸುತ್ತದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಟಾಟಾ ಆಲ್‍‍‍ಟ್ರೊಜ್ ಎಲೆಕ್ಟ್ರಿಕ್ ಕಾರು

ಇತ್ತೀಚೆಗೆ ಬಿಡುಗಡೆ ಮಾಡಿದ ಟಾಟಾ ಆಲ್‍‍ಟ್ರೊಜ್ ಸಾಮಾನ್ಯ ಕಾರನ್ನು 2019ರ ಜಿನೀವಾ ಮೋಟಾರ್ ಶೋನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿದರು. ಇದೀಗ 2020ರ ಆಟೋ ಎಕ್ಸ್ ಪೋದಲ್ಲಿ ಟಾಟಾ ಆಲ್‍‍ಟ್ರೊಜ್ ಎಲೆಕ್ಟ್ರಿಕ್ ಆವೃತ್ತಿಯನ್ನು ಅನಾವರಣಗೊಳಿಸಿದೆ.

Most Read Articles

Kannada
English summary
The Tata Altroz EV gets a semi-digital instrument cluster with a 7-inch TFT display. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X