ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಟಾಟಾ ಮೋಟಾರ್ಸ್ ಇತ್ತೀಚಿಗೆ ತನ್ನ ಆಲ್ಟ್ರೋಜ್ ಹ್ಯಾಚ್‍‍ಬ್ಯಾಕ್ ಕಾರಿಗಾಗಿ ಇಮ್ಯಾಜಿನೇಟರ್ ಅನ್ನು ಬಿಡುಗಡೆಗೊಳಿಸಿದೆ. ಈ ಆಲ್ಟ್ರೋಜ್ ಇಮ್ಯಾಜಿನೇಟರ್ ಅನ್ನು ಐದು ವಿವಿಧ ಫ್ಯಾಕ್ಟರಿ ಕಸ್ಟಮೈಸ್ ಪ್ಯಾಕ್‍‍ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಈ ಐದು ಪ್ಯಾಕ್‍‍ಗಳಲ್ಲಿ ರಿದಮ್ ಪ್ಯಾಕ್ ಮೊದಲನೆಯದಾಗಿದ್ದು, ಇದನ್ನು ಆಲ್ಟ್ರೋಜ್ ಎಕ್ಸ್ ಇ ಮಾದರಿಯಲ್ಲಿ ಬಳಸಲಾಗುತ್ತದೆ. ಈ ಕಸ್ಟಮೈಸ್ ಪ್ಯಾಕ್‍‍ನಲ್ಲಿ 7 ಇಂಚಿನ ಇನ್ಫೋಟೆನ್‍‍ಮೆಂಟ್ ಸಿಸ್ಟಂ, 4 ಸ್ಪೀಕರ್‍‍ಗಳು, ರಿಮೋಟ್ ಕೀ ಹಾಗೂ ಡ್ಯುಯಲ್ ಟೋನ್ ಹಾರ್ನ್‍‍ಗಳಿವೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಟಾಟಾ ಆಲ್ಟ್ರೋಜ್ ಎಕ್ಸ್ ಎಂ ಮಾದರಿಯಲ್ಲಿ ಟೋ ಕಸ್ಟಮೈಸೇಷನ್ ಪ್ಯಾಕ್‍‍ಗಳಿವೆ. ರಿದಮ್ ಪ್ಯಾಕ್‍‍ನಲ್ಲಿ 7 ಇಂಚಿನ ಇನ್ಫೋಟೆನ್‍‍ಮೆಂಟ್ ಸಿಸ್ಟಂ, 4 ಸ್ಪೀಕರ್‍‍ಗಳ ಜೊತೆಗೆ ಎರಡು ಟ್ವಿಟರ್, ಸ್ಟೀಯರಿಂಗ್ ಮೌಂಟೆಂಡ್ ಕಂಟ್ರೋಲ್ ಹಾಗೂ ರೇರ್ ಪಾರ್ಕಿಂಗ್ ಕ್ಯಾಮರಾಗಳಿವೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಸ್ಟೈಲ್ ಪ್ಯಾಕ್ ಎಕ್ಸ್ ಎಂ ಮಾದರಿಯಲ್ಲಿರುವ ಕಸ್ಟಮ್ ಪ್ಯಾಕ್ ಆಗಿದ್ದು, ಆರ್ 16 ಸೈಲಿನ ವ್ಹೀಲ್, ಡ್ಯುಯಲ್ ಟೋನ್ ರೂಫ್, ಬಾಡಿ ಕಲರ್ ಒ‍ಆರ್‍‍ವಿಎಂ ಹಾಗೂ ಕ್ರೋಮ್ ಏರ್ ಕಂಡಿಷನಿಂಗ್ ವೆಂಟ್‍‍‍ಗಳನ್ನು ಹೊಂದಿದೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಟಾಟಾ ಆಲ್ಟ್ರೋಜ್ ಎಕ್ಸ್ ಟಿ ಮಾದರಿಯು ಲ್ಯೂಕ್ಸ್ ಕಸ್ಟಮ್ ಪ್ಯಾಕ್ ಅನ್ನು ಹೊಂದಿದ್ದು, ಆರ್ 16 ಸ್ಟೈಲಿನ್ ಸ್ಟೀಲ್ ವ್ಹೀಲ್, ಡ್ಯುಯಲ್ ಟೋನ್ ರೂಫ್, ಬಾಡಿ ಕಲರ್ ಒ‍ಆರ್‍‍ವಿ‍ಎಂ, ಲೆದರ್ ವ್ರಾಪ್ ಸ್ಟೀಯರಿಂಗ್ ವ್ಹೀಲ್ ಹಾಗೂ ರೇರ್ ಆರ್ಮ್ ರೆಸ್ಟ್ ಹೊಂದಿದೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಟಾಟಾ ಆಲ್ಟ್ರೋಜ್ ಎಕ್ಸ್ ಝಡ್ ಮಾದರಿಯು ಅರ್ಬನ್ ಕಸ್ಟಮ್ ಪ್ಯಾಕ್ ಹೊಂದಿದ್ದು, ಬಾಡಿ ಕಲರ್ ಕಂಸೋಲ್ ಜಿ‍ಎಸ್ ಬೆಜೆಲ್, ಬಾಡಿ ಕಲರ್ ಏರ್ ವೆಂಟ್ ಬೆಜೆಲ್, ಡ್ಯುಯಲ್ ಟೋನ್ ರೂಫ್, ಬಾಡಿ ಕಲರ್ ಒ‍ಆರ್‍‍ವಿ‍ಎಂಗಳನ್ನು ಹೊಂದಿದೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಟಾಟಾ ಕಂಪನಿಯು ಈ ಐದು ಕಸ್ಟಮೈಸ್ ಪ್ಯಾಕ್‍‍ಗಳ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಪ್ಯಾಕ್ ಖರೀದಿಸ ಬಯಸುವವರು ಮಾದರಿಯ ಜೊತೆಗೆ ಪ್ಯಾಕ್‍‍ಗಳನ್ನು ಕಂಪನಿಯ ವೆಬ್‍‍ಸೈಟಿನಿಂದ ಬುಕ್ಕಿಂಗ್ ಮಾಡಬಹುದು.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಆಲ್ಟ್ರೋಜ್ ಕಾರಿಗಾಗಿ ರೂ.21,000 ಹಾಗೂ ಕಸ್ಟಮೈಸ್ ಪ್ಯಾಕ್‍‍ಗಳಿಗಾಗಿ ರೂ.10,000 ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಟಾಟಾ ಆಲ್ಟ್ರೋಜ್ ಕಾರಿನಲ್ಲಿ ಮೊದಲ ಬಾರಿಗೆ ಟಾಟಾ ಕಂಪನಿಯ ಆಲ್ಫಾ ಆರ್ಕಿಟೆಕ್ಚರ್ ಅಳವಡಿಸಲಾಗಿದೆ. ಈ ಕಾರು ಕಂಪನಿಯ ಇಂಪ್ಯಾಕ್ಟ್ 2.0 ಡಿಸೈನ್ ಲ್ಯಾಂಗ್ವೇಜ್ ಹಾಗೂ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಈ ಕಾರು ಭಾರತದಲ್ಲಿಯೇ ಮೊದಲ ಬಾರಿಗೆ 90 ಡಿಗ್ರಿಯಲ್ಲಿ ಒಪನ್ ಆಗುವ ಡೋರ್‍‍ಗಳನ್ನು ಹೊಂದಿದೆ. ಉಳಿದಂತೆ ಎಲ್‍ಇ‍‍ಡಿ ಡಿ‍ಆರ್‍ಎಲ್, ಟೇಲ್‍‍ಲೈಟ್ ಹಾಗೂ 16 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಇದರ ಜೊತೆಗೆ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಆಪಲ್ ಕಾರ್‍‍ಫ್ಲೇ ಹಾಗೂ ಆಂಡ್ರಾಯಿಡ್ ಆಟೋ‍ಗಳಿಗೆ ಹೊಂದಿಕೊಳ್ಳಬಲ್ಲ 7 ಇಂಚಿನ ಫ್ಲೋಟಿಂಗ್ ಟೈಪ್ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂಗಳನ್ನು ಹೊಂದಿದೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರ್ ಅನ್ನು 1.2 ಲೀಟರಿನ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರಿನ ರೆವೊಟಾರ್ಕ್ ಡೀಸೆಲ್ ಎಂಜಿನ್‍‍ನಲ್ಲಿ ಮಾರಾಟ ಮಾಡಲಾಗುವುದು. ಈ ಎರಡೂ ಎಂಜಿನ್‍‍ಗಳು ಬಿ‍ಎಸ್ 6 ಎಂಜಿನ್‍‍ಗಳಾಗಿವೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

1.2 ಲೀಟರಿನ ಪೆಟ್ರೋಲ್ ಎಂಜಿನ್ 82 ಬಿ‍‍ಹೆಚ್‍‍ಪಿ ಪವರ್ ಹಾಗೂ 113 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, 1.5 ಲೀಟರಿನ ಡೀಸೆಲ್ ಎಂಜಿನ್ 90 ಬಿ‍‍ಹೆಚ್‍‍ಪಿ ಪವರ್ ಹಾಗೂ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಈ ಎರಡೂ ಎಂಜಿನ್‍‍ಗಳಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಟಾಟಾ ಆಲ್ಟ್ರೋಜ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.5.29 ಲಕ್ಷದಿಂದ ರೂ.9.29 ಲಕ್ಷಗಳಾಗಿದೆ.

ಐದು ಕಸ್ಟಮ್ ಆಯ್ಕೆಗಳಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಇಮ್ಯಾಜಿನೇಟರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ಈ ಪ್ಯಾಕ್‍‍ಗಳನ್ನು ಯಾವ ಕಾರಣಕ್ಕೆ ಮಾರಾಟ ಮಾಡುತ್ತಿದೆ ಎಂಬುದು ತಿಳಿದು ಬಂದಿಲ್ಲ. ಪ್ರೀಮಿಯಂ ಕಾರುಗಳಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ, ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್ ಹಾಗೂ ಲೆದರ್ ವ್ರಾಪ್ ಸ್ಟೀಯರಿಂಗ್ ವ್ಹೀಲ್‍‍ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗಿರುತ್ತದೆ.

Most Read Articles

Kannada
English summary
Tata Altroz Imaginator Launched: Five Options To Customize Your Altroz At The Factory. Read in Kannada.
Story first published: Monday, January 27, 2020, 16:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X