ಪರಿಸರ ಸಂರಕ್ಷಣೆಗಾಗಿ ವಿನೂತನ ಯೋಜನೆ ಜಾರಿಗೆ ತಂದ ಟಾಟಾ ಮೋಟಾರ್ಸ್

ಹೆಚ್ಚುತ್ತಿರುವ ನಗರೀಕರಣ ಮತ್ತು ಮಾಲಿನ್ಯ ಪ್ರಮಾಣದಿಂದ ಅರಣ್ಯ ಸಂಪತ್ತು ಕಳೆದ ಕೆಲವು ದಶಕಗಳಿಂದ ಸಾಕಷ್ಟು ಪ್ರಮಾಣದಲ್ಲಿ ನಾಶಗೊಂಡಿದ್ದು, ಭವಿಷ್ಯಕ್ಕಾಗಿ ಅರಣ್ಯೀಕರಣ ಮತ್ತು ಪರಿಸರ ಅಭಿವೃದ್ಧಿ ಕಾರ್ಯಕ್ರಮಗಳು ಅತಿಅವಶ್ಯವಾಗಿದೆ.

ಪರಿಸರ ಸಂರಕ್ಷಣೆಗಾಗಿ ವಿನೂತನ ಯೋಜನೆ ಜಾರಿಗೆ ತಂದ ಟಾಟಾ ಮೋಟಾರ್ಸ್

ಅರಣ್ಯೀಕರಣ ಮತ್ತು ಪರಿಸರ ಅಭಿವೃದ್ಧಿಗಾಗಿ ಸರ್ಕಾರದ ಮಟ್ಟದಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳು ವಿವಿಧ ಯೋಜನೆ ಕೈಗೊಳ್ಳುತ್ತಿದೆಯಾದರೂ ಪ್ರತಿಯೊಬ್ಬ ನಾಗರೀಕರು ಕೂಡಾ ಭವಿಷ್ಯಕ್ಕಾಗಿ ಮಹತ್ವದ ಯೋಜನೆಯಲ್ಲಿ ಪಾಲ್ಗೊಳ್ಳುವ ಅವಶ್ಯಕತೆಯಿದ್ದು, ದೇಶದ ಜನಪ್ರಿಯ ವಾಹನ ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ ಈ ನಿಟ್ಟಿನಲ್ಲಿ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

ಪರಿಸರ ಸಂರಕ್ಷಣೆಗಾಗಿ ವಿನೂತನ ಯೋಜನೆ ಜಾರಿಗೆ ತಂದ ಟಾಟಾ ಮೋಟಾರ್ಸ್

ಅರಣ್ಯೀಕರಣ ಮತ್ತು ಪರಿಸರ ಅಭಿವೃದ್ಧಿಯಲ್ಲಿ ತನ್ನ ಗ್ರಾಹಕರನ್ನು ತೊಡಗಿಸಿಕೊಳ್ಳುವಂತೆ ಮಾಡಲು ಗೋ ಗ್ರಿನ್ ಅಭಿಯಾನವನ್ನು ಆರಂಭಿಸಿದ್ದು, ಹೊಸ ವಾಹನ ಖರೀದಿ ಮಾಡುವ ಮತ್ತು ಬಿಡಿಭಾಗಗಳ ಸೇವೆಗಳನ್ನು ಪಡೆದುಕೊಳ್ಳುವ ಪ್ರತಿಯೊಬ್ಬ ಗ್ರಾಹಕನಿಗೂ ವಿವಿಧ ಮಾದರಿಯ ಗಿಡಗಳನ್ನು ಕಾಣಿಕೆ ರೂಪದಲ್ಲಿ ನೀಡಿ ಕಾಳಜಿಯಿಂದ ಬೆಳೆಸುವ ಹೊಣೆ ನೀಡುತ್ತಿದೆ.

ಪರಿಸರ ಸಂರಕ್ಷಣೆಗಾಗಿ ವಿನೂತನ ಯೋಜನೆ ಜಾರಿಗೆ ತಂದ ಟಾಟಾ ಮೋಟಾರ್ಸ್

ಹೊಸ ವಾಹನ ಖರೀದಿ ಅಥವಾ ಬಿಡಿಭಾಗಗಳ ಸೇವೆಗಳ ನಂತರ ಕಾಣಿಕೆ ರೂಪದಲ್ಲಿ ಅಪರೂಪದ ಗಿಡಗಳನ್ನು ಕಾಣಿಕೆಯಾಗಿ ನೀಡುತ್ತಿರುವ ಟಾಟಾ ಕಂಪನಿಯು ಭವಿಷ್ಯ ದಿನಗಳಿಗೆ ಸಸ್ಯ ಸಂಪತ್ತಿನ ಅರಿವು ಮೂಡಿಸಲಾಗುತ್ತಿದೆ.

ಪರಿಸರ ಸಂರಕ್ಷಣೆಗಾಗಿ ವಿನೂತನ ಯೋಜನೆ ಜಾರಿಗೆ ತಂದ ಟಾಟಾ ಮೋಟಾರ್ಸ್

ಜೊತೆಗೆ ಅಪರೂಪದ ಗಿಡಮೂಲಿಕೆಗಳನ್ನು ಕಾಳಜಿಯಿಂದ ಬೆಳೆಸುವ ಬಗ್ಗೆ ಗ್ರಾಹಕರಿಗೆ ಹಲವಾರು ಸಲಹೆ ನೀಡುತ್ತಿರುವ ಕಂಪನಿಯು ಗಿಡಗಳನ್ನು ಕಾಣಿಕೆಯಾಗಿ ನೀಡುವುದಲ್ಲದೆ ಅವುಗಳ ಬೆಳವಣಿಗೆ ಕುರಿತು ಗ್ರಾಹಕರಿಂದ ಆಗಾಗ ಮಾಹಿತಿಯನ್ನು ಪಡೆದುಕೊಳ್ಳಲಿದೆ. ಇದಕ್ಕಾಗಿ ಸಂಕಲ್ಪ ತರು ಎನ್ನುವ ಎನ್‌ಜಿಒದೊಂದಿಗೆ ಕೈಜೋಡಿಸಿರುವ ಟಾಟಾ ಕಂಪನಿಯು ಮುಂದಿನ ಕೆಲವು ವರ್ಷಗಳ ತನಕ ಲಕ್ಷಾಂತರ ಗಿಡಗಳನ್ನು ತನ್ನ ಗ್ರಾಹಕರ ಮೂಲಕ ಬೆಳೆಸುವ ಸಂಕಲ್ಪ ಹೊಂದಿದೆ.

ಪರಿಸರ ಸಂರಕ್ಷಣೆಗಾಗಿ ವಿನೂತನ ಯೋಜನೆ ಜಾರಿಗೆ ತಂದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಹೊಸ ಯೋಜನೆಯನ್ನು ಸದ್ಯ ದೇಶದ ಪ್ರಮುಖ 10 ರಾಜ್ಯಗಳಲ್ಲಿ ಆರಂಭಿಕ ಯೋಜನೆಯಾಗಿ ಆರಂಭಿಸಿದ್ದು, ಶೀಘ್ರದಲ್ಲೇ ದೇಶದ ಪ್ರತಿ ಡೀಲರ್ಸ್‌ಗಳಲ್ಲೂ ಹೊಸ ವಾಹನಗಳ ಮತ್ತು ಬಿಡಿಭಾಗಗಳ ಸೇವೆಗೆ ಬರುವ ಗ್ರಾಹಕರಿಗೆ ವಿವಿಧ ಮಾದರಿಯ ಸಸ್ಯಗಳನ್ನು ಕಾಣಿಕೆಯಾಗಿ ಹಂಚಲಿದೆ.

ಪರಿಸರ ಸಂರಕ್ಷಣೆಗಾಗಿ ವಿನೂತನ ಯೋಜನೆ ಜಾರಿಗೆ ತಂದ ಟಾಟಾ ಮೋಟಾರ್ಸ್

ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿ ತಗ್ಗಿಸಲು ಮತ್ತು ಅರಣ್ಯ ಸಂಪತ್ತನ್ನು ಹೆಚ್ಚಿಸುವ ಹೊಣೆ ಹೊತ್ತಿರುವ ಕಂಪನಿಯು ಸಂಕಲ್ಪ ತರು ಎನ್‌ಜಿಒದೊಂದಿಗೆ ಮಹತ್ವದ ಯೋಜನೆಗೆ ಚಾಲನೆ ನೀಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಪರಿಸರ ಸಂರಕ್ಷಣೆಗಾಗಿ ವಿನೂತನ ಯೋಜನೆ ಜಾರಿಗೆ ತಂದ ಟಾಟಾ ಮೋಟಾರ್ಸ್

ಇನ್ನು ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ವಿವಿಧ ರಾಷ್ಟ್ರಗಳು 2030ರಿಂದಲೇ ಸಂಪೂರ್ಣವಾಗಿ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸಹ ಹೆಚ್ಚಿಸಲಾಗುತ್ತಿದೆ.

ಪರಿಸರ ಸಂರಕ್ಷಣೆಗಾಗಿ ವಿನೂತನ ಯೋಜನೆ ಜಾರಿಗೆ ತಂದ ಟಾಟಾ ಮೋಟಾರ್ಸ್

ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾಲಿನ್ಯ ಸಮಸ್ಯೆ ಅತಿಯಾಗಿ ಪರಿಣಮಿಸಿದ್ದು, ಮಾಲಿನ್ಯ ಉತ್ಪಾದನೆಗೆ ಇಂಧನ ಆಧರಿತ ವಾಹನಗಳೇ ಪ್ರಮುಖ ಕಾರಣವಾಗಿವೆ. ಹೀಗಾಗಿ ವಿಶ್ವದ ಪ್ರಮುಖ ರಾಷ್ಟ್ರಗಳು 2030ರ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ನಿಷೇಧಿಸಲು ಮುಂದಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಪರಿಸರ ಸಂರಕ್ಷಣೆಗಾಗಿ ವಿನೂತನ ಯೋಜನೆ ಜಾರಿಗೆ ತಂದ ಟಾಟಾ ಮೋಟಾರ್ಸ್

ಮುಂಬರುವ ದಿನಗಳಲ್ಲಿ ಡೀಸೆಲ್ ಜೊತೆಗೆ ಪೆಟ್ರೋಲ್ ವಾಹನಗಳ ಬಳಕೆಯನ್ನು ನಿರ್ಬಂಧಿಸುವತ್ತ ಹಲವಾರು ಹೊಸ ನೀತಿಗಳನ್ನು ಜಾರಿಗೆ ತರಲಾಗುತ್ತಿದ್ದು, 2030ರ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಹಲವಾರು ರಾಷ್ಟ್ರಗಳು ನಿರ್ಣಯ ಪ್ರಕಟಿಸಿವೆ. ಈ ನಿಟ್ಟಿನಲ್ಲಿ ಟಾಟಾ ಕೂಡಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯ ಮೂಲಕ ಇವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲಿದೆ.

Most Read Articles

Kannada
English summary
Tata Motors Commercial Vehicle ‘Go Green’ Initiative Announced. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X