ಸಾರಿಗೆ ಇಲಾಖೆಯ ಅಧಿಕಾರಿಗಳಿಗಾಗಿ 65 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ವಿತರಣೆ
ದೇಶಾದ್ಯಂತ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಕ್ರಿಯೆಯು ಹೆಚ್ಚುತ್ತಿದ್ದು, ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳ ಅಧಿಕೃತ ವಾಹನ ಮಾದರಿಯನ್ನಾಗಿ ಎಲೆಕ್ಟ್ರಿಕ್ ಆವೃತ್ತಿಗಳನ್ನು ಆಯ್ಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಕೇರಳದಲ್ಲಿ ಸಾರಿಗೆ ಇಲಾಖೆಯು ಕೂಡಾ ಹಿರಿಯ ಅಧಿಕಾರಿಗಳ ಅಧಿಕೃತ ವಾಹನವನ್ನಾಗಿ ಟಾಟಾ ನಿರ್ಮಾಣದ ನೆಕ್ಸಾನ್ ಎಲೆಕ್ಟ್ರಿಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಯ್ಕೆ ಮಾಡಿದ್ದು, ಹೊಸ ಕಾರುಗಳನ್ನು ಇಂದು ಸಾರಿಗೆ ಇಲಾಖೆಗೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ. ರಸ್ತೆ ಸುರಕ್ಷಾ ವಿಭಾಗದಲ್ಲಿನ ಹಿರಿಯ ಅಧಿಕಾರಿಗಳ ಗಸ್ತು ನಿರ್ವಹಣೆಗಾಗಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಆಯ್ಕೆ ಮಾಡಲಾಗಿದ್ದು, ಡೀಸೆಲ್ ವಾಹನಗಳನ್ನು ಕೈಬಿಟ್ಟು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ.

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಬಳಕೆಯನ್ನು ತಗ್ಗಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನ ಬಳಕೆಯತ್ತ ಗಮನಹರಿಸುತ್ತಿರುವುದು ಮಹತ್ವದ ಬೆಳವಣಿಗೆ ಕಾರಣವಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪೂರಕವಾಗಿ ಹಲವಾರು ಹೊಸ ನೀತಿಗಳನ್ನು ಜಾರಿಗೆ ಮಾಡಲಾಗಿದೆ.

ಕೇರಳ ಸಾರಿಗೆ ಇಲಾಖೆಯು ಒಟ್ಟು 65 ನೆಕ್ಸಾನ್ ಇವಿ ಕಾರುಗಳನ್ನು ಖರೀದಿಸಿದ್ದು, ಹೊಸ ಎಲೆಕ್ಟ್ರಿಕ್ ಕಾರು ಮಾದರಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಪ್ರಮುಖ ಮೂರು ವೆರಿಯೆಂಟ್‌ನೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.16.25 ಲಕ್ಷ ಬೆಲೆ ಪಡೆದುಕೊಂಡಿದೆ.

ಟಾಟಾ ಮೋಟಾರ್ಸ್ ಕಂಪನಿಯು ಇವಿ ವಾಹನಗಳ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ತಂತ್ರಜ್ಞಾನ ಪ್ರೇರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿದ್ದು, ಇವಿ ವಾಹನಗಳ ಮೇಲೆ ಗರಿಷ್ಠ ಎಂಟು ವರ್ಷಗಳ ವಾರಂಟಿ ನೀಡುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ ಎನ್ನಬಹುದು.

ಎಆರ್‌ಎಐ ಪ್ರಮಾಣ ಪತ್ರದಂತೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಆದಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರೆಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಸಾಮಾನ್ಯ ಮಾದರಿಯ ನೆಕ್ಸಾನ್ ಫೇಸ್‍ಲಿಫ್ಟ್ ಸ್ಟ್ಯಾಂಡರ್ಡ್ ಕಾರಿನ ಆಧಾರದ ಮೇಲೆ ತಯಾರಿಸಲಾಗಿದ್ದು, ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ 95 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ.

ಇನ್ನು ದೇಶಾದ್ಯಂತ ಸದ್ಯ ಎಲೆಕ್ಟ್ರಿಕ್ ವಾಹನ ಮಾರಾಟವು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದರೂ ಸಹ ಚಾರ್ಜಿಂಗ್ ಸ್ಟೆಷನ್‌ಗಳ ಕೊರತೆಯಿಂದಾಗಿ ಬಹುತೇಕ ಎಲೆಕ್ಟ್ರಿಕ್ ವಾಹನ ಖರೀದಿದಾರರು ಹಿಂದೇಟು ಹಾಕುತ್ತಿದ್ದಾರೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಈ ವಿಚಾರವಾಗಿ ಮಹತ್ವದ ನಿರ್ಣಯ ಕೈಗೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ 300ಕ್ಕೂ ಹೆಚ್ಚು ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳಿಗೆ ಚಾಲನೆ ನೀಡಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಟಿಯಾಗೋ ಮತ್ತು ನೆಕ್ಸಾನ್ ಇವಿ ನಂತರ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್ ವಾಹನಗಳು ಖರೀದಿಗೆ ಲಭ್ಯವಿದ್ದರೂ ಸಹ ಅವಶ್ಯಕತೆಗೆ ಅನುಗುಣವಾಗಿ ಚಾರ್ಜಿಂಗ್ ಸ್ಟೆಷನ್‌ಗಳು ಇಲ್ಲದಿರುವುದು ಇವಿ ವಾಹನ ಮಾರಾಟದಲ್ಲಿ ತೀವ್ರಗತಿಯ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತಿಲ್ಲ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನ ಮೇಲಿನ ಖರೀದಿಗೆ ಮಾತ್ರವಲ್ಲದೇ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣದ ಮೇಲೂ ಆಕರ್ಷಕ ಸಬ್ಸಡಿ ದರವನ್ನು ನೀಡುತ್ತಿದ್ದು, ಇದೀಗ ಟಾಟಾ ಸೇರಿದಂತೆ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳು ಫೇಮ್-2 ಯೋಜನೆ ಅಡಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕೆ ಮುಂದಾಗಿವೆ.


Click it and Unblock the Notifications