2020ರ ಹ್ಯಾರಿಯರ್ ಟೀಸರ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಆವೃತ್ತಿಯು ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್, ಹೆಚ್ಚುವರಿ ಬಣ್ಣಗಳ ಆಯ್ಕೆ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನ ಟೀಸರ್ ಬಿಡುಗಡೆ ಮಾಡಲಾಗಿದೆ.

2020ರ ಹ್ಯಾರಿಯರ್ ಟೀಸರ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಜೊತೆಗೆ ನೆಕ್ಸಾನ್, ಟಿಗೋರ್, ಟಿಯಾಗೋ ಕಾರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಹ್ಯಾರಿಯರ್ ಮತ್ತು ಹೆಕ್ಸಾ ಫೇಸ್‌ಲಿಫ್ಟ್ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರಿನಲ್ಲಿ ಈ ಬಾರಿ ಮಾರುಗಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿರುವುದು ಎಸ್‌ಯುವಿ ಖರೀದಿದಾರರ ಗಮನಸೆಳೆಯಲಿದೆ.

ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಟಾಟಾ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ಬಿಎಸ್-6 ವಾಹನ ಮಾರಾಟಕ್ಕೆ ಭರ್ಜರಿ ಚಾಲನೆ ನೀಡಿರುವುದು ಮಹತ್ವದ ಬದಲಾವಣೆಗೆ ಕಾರಣವಾಗಿದೆ.

2020ರ ಹ್ಯಾರಿಯರ್ ಟೀಸರ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಹೊಸ ಎಮಿಷನ್ ನಿಯಮದಿಂದಾಗಿ ಸಣ್ಣ ಗಾತ್ರದ ಡೀಸೆಲ್ ಎಂಜಿನ್ ಮಾರಾಟಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಪೆಟ್ರೋಲ್ ಕಾರುಗಳ ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ತಂದಿರುವುದು ಮಾಲಿನ್ಯ ತಡೆಗೆ ಸಾಕಷ್ಟು ಸಹಕಾರಿಯಾಗಲಿದೆ.

2020ರ ಹ್ಯಾರಿಯರ್ ಟೀಸರ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಸದ್ಯ ಹ್ಯಾರಿಯರ್‌ನಲ್ಲೂ ಡಿಸೇಲ್ ಮ್ಯಾನುವಲ್ ಆವೃತ್ತಿಗಳನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಬಹುಬೇಡಿಕೆಯ ಡೀಸೆಲ್ ಆಟೋಮ್ಯಾಟಿಕ್ ಮತ್ತು ಪೆಟ್ರೋಲ್ ಆವೃತ್ತಿಯು ಬಿಡುಗಡೆಗೆ ಸಜ್ಜಾಗುತ್ತಿರುವುದು ಹೊಸ ಕಾರಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಇದರಲ್ಲಿ ಉನ್ನತೀಕರಿಸಲಾಗುತ್ತಿರುವ 2020ರ ಡೀಸೆಲ್ ಮಾದರಿಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಟಾಟಾ ಸಂಸ್ಥೆಯು ಪ್ರತಿ ವೆರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್, ಎಲ್ಇಡಿ ಟೈಲ್‌ಲೈಟ್ಸ್ ನೀಡಿದೆ.

2020ರ ಹ್ಯಾರಿಯರ್ ಟೀಸರ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಚ್‌ ಸ್ಕ್ರೀನ್ ಇನ್ಪೋಟೈನ್‌ಮೆಂಟ್‌ಗಿಂತಲೂ ದೊಡ್ಡದಾದ ಸ್ಕ್ರೀನ್ ನೀಡಲು ನಿರ್ಧರಿಸಿದ್ದು, ಸುಧಾರಿತ ಮಾದರಿಯ ಡ್ಯಾಶ್‌ಬೋರ್ಡ್, ಸಾಫ್ಟ್ ಟಚ್ ಮೆಟಿರಿಯಲ್‌ಗಳು ಮತ್ತು ಹೆಚ್ಚುವರಿ ಬಣ್ಣಗಳ ಆಯ್ಕೆಯು ಎಸ್‌ಯುವಿ ಪ್ರಿಯರ ಗಮನಸೆಳೆಯಲಿವೆ.

2020ರ ಹ್ಯಾರಿಯರ್ ಟೀಸರ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಮೂಲಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲು ಸಜ್ಜಾಗುತ್ತಿರುವ ಹ್ಯಾರಿಯರ್ ಕಾರು ಶೀಘ್ರದಲ್ಲೇ ಬಿಎಸ್-6 ಎಂಜಿನ್‌ನೊಂದಿಗೆ ರಸ್ತೆಗಿಳಿಯಲಿದ್ದು, ಬಿಎಸ್-6 ಎಂಜಿನ್‌ನಿಂದಾಗಿ ಹೊಸ ಕಾರಿನ ಬೆಲೆಯು ಮತ್ತಷ್ಟು ದುಬಾರಿಯಾಗಲಿದೆ.

2020ರ ಹ್ಯಾರಿಯರ್ ಟೀಸರ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಕಳೆದ ತಿಂಗಳು ಸಹ ಹ್ಯಾರಿಯರ್ ಕಾರಿನ ಬೆಲೆ ಹೆಚ್ಚಳ ಮಾಡಲಾಗಿದ್ದು, ಹೊಸ ದರ ಪಟ್ಟಿ ಪ್ರಕಾರ ಹ್ಯಾರಿಯರ್ ಬೆಲೆಯಲ್ಲಿ ಆರಂಭಿಕವಾಗಿ ರೂ.43 ಸಾವಿರದಿಂದ ಟಾಪ್ ಎಂಡ್ ಮಾದರಿಯ ಬೆಲೆಯಲ್ಲಿ ರೂ.45 ಸಾವಿರ ಬೆಲೆ ಏರಿಕೆ ಮಾಡಲಾಗಿದೆ.

2020ರ ಹ್ಯಾರಿಯರ್ ಟೀಸರ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಹೊಸ ದರ ಪಟ್ಟಿ ನಂತರ ಹ್ಯಾರಿಯರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆಂಭಿಕವಾಗಿ ರೂ.12.99 ಲಕ್ಷದಿಂದ ರೂ.13.43 ಲಕ್ಷಕ್ಕೆ ಏರಿಕೆಯಾಗಿದ್ದಲ್ಲಿ ಟಾಪ್ ಎಂಡ್ ಮಾದರಿಯು ರೂ.16.85 ಲಕ್ಷದಿಂದ ರೂ.17.30 ಲಕ್ಷಕ್ಕೆ ಏರಿಕೆಯಾಗಿದೆ.

2020ರ ಹ್ಯಾರಿಯರ್ ಟೀಸರ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಹ್ಯಾರಿಯರ್ ಕಾರು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೆರಿಯೆಂಟ್‌ಗಳೊಂದಿಗೆ ಮಾರಾಟವಾಗುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಡಾರ್ಕ್ ಎಡಿಷನ್ ಸದ್ಯ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಬಿಎಸ್-6 ಎಂಜಿನ್ ದುಬಾರಿ ಬೆಲೆಯೊಂದಿಗೆ ಮತ್ತಷ್ಟು ಹೊಸ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ.

Most Read Articles

Kannada
English summary
Tata Motors is all set to launch 2020 Harrier with automatic gearbox option in India very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X