ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಕಳೆದ ತಿಂಗಳು ಅನಾವರಣಗೊಂಡಿದ್ದ ಟಾಟಾ ಬಹುನೀರಿಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಇದೇ ತಿಂಗಳು 28ರಂದು ಬಿಡುಗಡೆಯಾಗುತ್ತಿದ್ದು, ಹೊಸ ಕಾರು ಐಷಾರಾಮಿ ಕಾರು ಮಾದರಿಯಲ್ಲಿ ಬರೋಬ್ಬರಿ 35 ಕನೆಕ್ಟೆಡ್ ಫೀಚರ್ಸ್‌ಗಳನ್ನು ಪಡೆದುಕೊಂಡಿರುವುದು ಬಹಿರಂಗವಾಗಿದೆ.

ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಹೊಸ ವಾಹನಗಳ ಉತ್ಪಾದನೆಯಲ್ಲಿ ಸದ್ಯ ಭಾರೀ ಬದಲಾವಣೆ ತರುವ ಮೂಲಕ ಗ್ರಾಹಕರ ಆಕರ್ಷಣೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಸಂಸ್ಥೆಯು 2020ರ ಆಟೋ ಎಕ್ಸ್‌ಪೋ ಬಹುನೀರಿಕ್ಷಿತ ಕಾರು ಮಾದರಿಗಳ ಜೊತೆಗೆ ವಾಣಿಜ್ಯ ವಾಹನಗಳನ್ನು ಪ್ರದರ್ಶನಗೊಳಿಸುತ್ತಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಜೊತೆಗೆ ಈ ಬಾರಿ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಹ ಅನಾವರಣಗೊಳಿಸುತ್ತಿರುವ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಇದೇ ಕಾರಣಕ್ಕೆ ಆಟೋ ಎಕ್ಸ್‌ಪೋ ಆರಂಭಕ್ಕೂ ಮುನ್ನ ಆಲ್‌ಟ್ರೊಜ್ ಮತ್ತು ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವ ಟಾಟಾ ಸಂಸ್ಥೆಯು ಆಟೋ ಎಕ್ಸ್‌ಪೋ ನಂತರ ಬಿಎಸ್-6 ಮಾದರಿಗಳ ಮಾರಾಟಕ್ಕೆ ಚಾಲನೆ ನೀಡಲು ಮುಂದಾಗಿದೆ.

ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಹೊಸ ಕಾರುಗಳ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ರೂ.21,000 ಮುಂಗಡದೊಂದಿಗೆ ನೆಕ್ಸಾನ್ ಎಲೆಕ್ಟ್ರಿಕ್ ಬುಕ್ಕಿಂಗ್‍ ಕೂಡಾ ಆರಂಭವಾಗಿದ್ದು, ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ 30.2 ಕಿ.ವ್ಯಾಟ್ ಲೀಥಿಯಂ ಅಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಈ ಬ್ಯಾಟರಿಯು ಶಾಶ್ವತ ಮ್ಯಾಗ್ನೆಟ್ ಎಸಿ ಮೋಟರ್‌ಗೆ ಜೋಡಿಸಲಾಗಿದ್ದು, ಲಿಕ್ವಿಡ್ ಕೂಲ್ ಆಗಿರುವುದರಿಂದ ಧೂಳು ಹಾಗೂ ನೀರು ನಿರೋಧಕ ಐಪಿ 67 ಸರ್ಟಿಫಿಕೇಷನ್‍‍ನೊಂದಿಗೆ ಬರಲಿದೆ. ಈ ಮೂಲಕ ಒಂದು ಬಾರಿ ಚಾರ್ಜ್‌ ಮಾಡಿದರೆ ಗರಿಷ್ಠ 300 ಕಿ.ಮೀವರೆಗೂ ಚಲಿಸುವುದರೊಂದಿಗೆ 245-ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಟಾಟಾ ಮೋಟಾರ್ಸ್‍‍ನ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು 9.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ ಎಂದು ಹೇಳಲಾಗಿದೆ.

ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಟಾಟಾ ಮೋಟಾರ್ಸ್ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿರುವ ಬ್ಯಾಟರಿಯು ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಹೊಂದಿದ್ದು, ಕೇವಲ 60 ನಿಮಿಷಗಳಲ್ಲಿ ಬ್ಯಾಟರಿಯನ್ನು 80% ಚಾರ್ಜ್ ಮಾಡಬಹುದಲ್ಲದೇ ಸ್ಟಾಂಡರ್ಡ್ ಚಾರ್ಜಿಂಗ್‍‍ನಲ್ಲಿ 8 ಗಂಟೆ ತಗೆದುಕೊಳ್ಳುತ್ತದೆ.

ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿರುವ ಬ್ಯಾಟರಿಗಳು ಬಿಎಂಎಸ್ (ಬ್ಯಾಟರಿ ಮ್ಯಾನೇಜ್‍‍ಮೆಂಟ್ ಸಿಸ್ಟಂ)ನೊಂದಿಗೆ ಬರಲಿವೆ. ಈ ಸಿಸ್ಟಂ ಸ್ಥಿರವಾದ ಪರ್ಫಾಮೆನ್ಸ್ ನೊಂದಿಗೆ 8 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಪವರ್‌ಟ್ರೇನ್‌ನಲ್ಲಿ ಕೂಲಿಂಗ್ ಸರ್ಕ್ಯೂಟ್ ಅಳವಡಿಸಲಾಗಿದ್ದು, ಬಿಸಿಯಾದ ವಾತಾವರಣದಲ್ಲಿಯೂ ಸಹ ಸ್ಮೂಥ್ ಆದ ಪರ್ಫಾಮೆನ್ಸ್ ನೀಡುತ್ತದೆ.

ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸದ ಬಗೆಗೆ ಹೇಳುವುದಾದರೇ, ಸಾಮಾನ್ಯ ಪೆಟ್ರೋಲ್ ಎಂಜಿನ್ ಹೊಂದಿರುವ ಫೇಸ್‍‍ಲಿಫ್ಟ್ ಆವೃತ್ತಿಯಂತಿದ್ದು, ನೆಕ್ಸಾನ್ ಕಾರಿನ ಫೇಸ್‍‍ಲಿಫ್ಟ್ ಆವೃತ್ತಿಯು ಕೂಡಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಜೊತೆಗೆ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಎಲ್ಇಡಿ ಡಿಆರ್‍‍ಎಲ್‍‍ಗಳನ್ನು ಹೊಂದಿರುವ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳಿರಲಿದ್ದು, ಹೆಡ್‌ಲ್ಯಾಂಪ್‌ಗಳ ಮಧ್ಯದಲ್ಲಿ ಅಪ್‍‍‍‍ಡೇಟ್ ಮಾಡಲಾದ ಫ್ರಂಟ್ ಗ್ರಿಲ್‍‍ಗಳಿವೆ. ಮುಂಭಾಗದ ಬಂಪರ್‌ನಲ್ಲಿ ಹೊಸ ಫಾಗ್ ಲ್ಯಾಂಪ್ ಹಾಗೂ ಅಪ್‍‍ಡೇಟೆಡ್ ಸೆಂಟ್ರಲ್ ಏರ್ ಇನ್‍‍ಟೇಕ್‍‍ಗಳಿವೆ.

ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಹಾಗೆಯೇ ಕೀ ಲೆಸ್ ಎಂಟ್ರಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಡ್ಯುಯಲ್ ಡ್ರೈವಿಂಗ್ ಮೋಡ್, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ ಹಾಗೂ ವೈಪರ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಸೇರಿದಂತೆ ಇನ್ನಿತರ ಫೀಚರ್‍‍ಗಳಿವೆ.

ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಬಹುತೇಕ ತಾಂತ್ರಿಕ ಅಂಶಗಳನ್ನು ಜೆಡ್ ಕನೆಕ್ಟ್ ಆಪ್ ಮೂಲಕವೇ ಸಂಪೂರ್ಣ ನಿಯಂತ್ರಣ ಮಾಡಬಹುದಾಗಿದ್ದು, ಬ್ಯಾಟರಿ ಬಾಳಿಕೆ, ಟ್ರಾಕ್ಷನ್ ಮೋಟಾರ್ ಕಂಡೀಷನ್, ಹೆಚ್‌ವಿ ಸಿಸ್ಟಂ ಕಂಡೀಷನ್, ಏರ್‌ಬ್ಯಾಗ್ ಕಂಡೀಷನ್, ಎಬಿಎಸ್/ಬ್ರೇಕ್ ಕಂಡೀಷನ್ ಮತ್ತು ಸರ್ವೀಸ್ ರಿಮೆಂಡರ್‌ ಸೇರಿದಂತೆ ವಿವಿಧ 35 ತಾಂತ್ರಿಕ ಅಂಶಗಳ ಸ್ಥಿತಿಗತಿ ಬಗ್ಗೆ ಒಂದೇ ಸೂರಿನಡಿ ಮಾಹಿತಿ ಪಡೆಯಬಹುದಾಗಿದೆ.

ಐಷಾರಾಮಿ ಕಾರು ಮಾದರಿಯಲ್ಲೇ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಅಂದಾಜು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ನೆಕ್ಸಾನ್ ಎಲೆಕ್ಟ್ರಿಕ್ ಕಾರು ಟಾಟಾ ಮೋಟಾರ್ಸ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು ಅಲ್ಲದಿದ್ದರೂ ಕಂಪನಿಯ ಹೊಸ ಜಿಪ್‍‍ಟ್ರಾನ್ ಪವರ್‌ಟ್ರೈನ್ ಹೊಂದಿದ ಮೊದಲ ಕಾರು ಮಾದರಿಯಾಗಿದೆ. ಹೀಗಾಗಿ ಹೊಸ ಎಲೆಕ್ಟ್ರಿಕ್ ಕಾರಿನ ಬೆಲೆಯು ಭಾರತದಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ.15 ಲಕ್ಷದಿಂದ ರೂ.18 ಲಕ್ಷ ಆಗಿರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Tata Motors has revealed that the Nexon electric SUV will get ZConnect app with 35 connected car features in India.
Story first published: Saturday, January 18, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X