ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಮತ್ತೊಮ್ಮೆ ಸಹಾಯಹಸ್ತ ಚಾಚಿದ ಟಾಟಾ

ಕರೋನಾ ವೈರಸ್ ಪರಿಣಾಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಾಮಾರಿ ವೈರಸ್ ಪ್ರಮಾಣವನ್ನು ತಡೆಯಲು ಹೆಗಣಾಡುತ್ತಿದೆ.

ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಮತ್ತೊಮ್ಮೆ ಸಹಾಯಹಸ್ತ ಚಾಚಿದ ಟಾಟಾ

ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಈಗಾಗಲೇ ಹಲವಾರು ಸಂಘ-ಸಂಸ್ಥೆಗಳು ಸೇರಿದಂತೆ ಜನಸಾಮಾನ್ಯರು ಕೂಡಾ ತಮ್ಮ ಕೈಗಾದಷ್ಟು ದೇಣಿಗೆ ನೀಡಿ ಸರ್ಕಾರದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಶೋಚನೀಯ ಆರ್ಥಿಕ ಪರಿಸ್ಥಿತಿಯಿಂದಾಗಿ ವೈರಸ್ ತಡೆಗಟ್ಟಲು ಹೆಣಗಾಡುತ್ತಿರುವ ಸರ್ಕಾರಕ್ಕೆ ಭಾರೀ ಪ್ರಮಾಣದ ವೈದ್ಯಕೀಯ ಉಪಕರಣಗಳ ದೇಣಿಗೆ ಕೂಡಾ ಹರಿದುಬಂದಿದ್ದು, ಟಾಟಾ ಸಮೂಹ ಸಂಸ್ಥೆಗಳು ದೇಣಿಗೆ ನೀಡುವ ವಿಚಾರದಲ್ಲಿ ದೇಶದ ಜನತೆಯ ಮೆಚ್ಚುಗೆ ಕಾರಣವಾಗಿದೆ.

ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಮತ್ತೊಮ್ಮೆ ಸಹಾಯಹಸ್ತ ಚಾಚಿದ ಟಾಟಾ

ಕರೋನಾ ವಿರುದ್ಧ ಹೋರಾಟದಲ್ಲಿ ನಿರತವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒಂದಿಲ್ಲಾ ಒಂದು ರೀತಿಯ ಸಹಾಯ ಹಸ್ತ ಚಾಚುತ್ತಿರುವ ಟಾಟಾ ಕಂಪನಿಯು ಇದೀಗ ಮತ್ತೊಮ್ಮೆ ಜನತೆಯ ಮೆಚ್ಚುಗೆಗೆ ಕಾರಣವಾಗಿದೆ.

ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಮತ್ತೊಮ್ಮೆ ಸಹಾಯಹಸ್ತ ಚಾಚಿದ ಟಾಟಾ

ವೈರಸ್ ವಿರುದ್ಧ ಹೋರಾಟಕ್ಕಾಗಿ ಅತಿ ಹೆಚ್ಚು ದೇಣಿಗೆ ನೀಡಿದ ಖಾಸಗಿ ಕಂಪನಿಗಳ ಪೈಕಿ ಅಗ್ರಸ್ಥಾನದಲ್ಲಿರುವ ಟಾಟಾ ಸಮೂಹ ಸಂಸ್ಥೆಗಳು ಇದೀಗ ಮಾಹಾರಾಷ್ಟ್ರ ಸರ್ಕಾರಕ್ಕೆ ಮತ್ತೊಮ್ಮೆ ಸಹಾಯಹಸ್ತಚಾಚಿದ್ದು, ತುರ್ತು ವೈದ್ಯಕೀಯ ಸೇವೆಗಳಿಗಾಗಿ 20 ಆ್ಯಂಬುಲೆನ್ಸ್, 100 ವೆಂಟಿಲೇಟರ್ ಮತ್ತು ರೂ.10 ಕೋಟಿ ಆರ್ಥಿಕ ಸಹಾಯ ನೀಡಿದೆ.

ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಮತ್ತೊಮ್ಮೆ ಸಹಾಯಹಸ್ತ ಚಾಚಿದ ಟಾಟಾ

ಟಾಟಾ ಸನ್ಸ್ ಫೌಂಡೇಶನ್ ಮೂಲಕ ಮಹಾರಾಷ್ಟ್ರ ಸರ್ಕಾರಕಕ್ಕೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉಪಸ್ಥಿತಿಯಲ್ಲಿ ಹೊಸ ವೈದ್ಯಕೀಯ ಉಪಕರಣಗಳನ್ನು ಬೃಹತ್ ಮುಂಬೈ ಮಾಹಾನಗರ ಪಾಲಕೆ ವ್ಯಾಪ್ತಿಯಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಉಪಕರಣಗಳನ್ನು ಹಸ್ತಾಂತರ ಮಾಡಲಾಗಿದೆ.

ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಮತ್ತೊಮ್ಮೆ ಸಹಾಯಹಸ್ತ ಚಾಚಿದ ಟಾಟಾ

ಇದಕ್ಕೂ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೂ ಹಲವು ಮಾದರಿಯ ಸಹಾಯಹಸ್ತ ಚಾಚಿರುವ ಟಾಟಾ ಸಮೂಹ ಸಂಸ್ಥೆಗಳು ಬರೋಬ್ಬರಿ ರೂ.1,500 ಕೋಟಿ ದೇಣಿಗೆ ನೀಡಿತ್ತು. ಇದೀಗ ಸೋಂಕು ಹೆಚ್ಚಿರುವುದರಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ಒದಗಿಸಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಮತ್ತೊಮ್ಮೆ ಸಹಾಯಹಸ್ತ ಚಾಚಿದ ಟಾಟಾ

ಇನ್ನು ಮಾಹಾಮಾರಿ ಕರೋನಾ ವೈರಸ್ ಹೊಡೆದೊಡಿಸಲು ಆಟೋ ಉತ್ಪಾದನಾ ಕಂಪನಿಗಳಲ್ಲೇ ಗರಿಷ್ಠ ಪ್ರಮಾಣದ ಸಹಾಯಧನ ನೀಡಿರುವ ಟಾಟಾ ಮೋಟಾರ್ಸ್ ಕಂಪನಿಯು ಸರ್ಕಾರಕ್ಕೆ ನೆರವು ನೀಡುವುದರ ಜೊತೆಗೆ ಲಾಕ್‌ಡೌನ್ ಸಂದರ್ಭದಲ್ಲಿ ದಿನಂಪ್ರತಿ ದೇಶದ ವಿವಿಧಡೆ ಲಕ್ಷಾಂತರ ಜನರ ಹಸಿವು ನೀಗಿಸುವ ಮಹತ್ಕಾರ್ಯ ಮಾಡಿದೆ.

ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಮತ್ತೊಮ್ಮೆ ಸಹಾಯಹಸ್ತ ಚಾಚಿದ ಟಾಟಾ

ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸರ್ಕಾರಕ್ಕೆ ವಿವಿಧ ಹಂತಗಳಲ್ಲಿ ಹಣಕಾಸಿನ ಸಹಾಯ ಮಾಡಿರುವ ಟಾಟಾ ಸಮೂಹ ಸಂಸ್ಥೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿವೆ.

MOST READ: ಬಾಯ್ಕಟ್ ಚೀನಾ ಅಭಿಯಾನ: ಚೆರಿ ಕಂಪನಿ ಜೊತೆಗಿನ ಹೊಸ ಯೋಜನೆಗೆ ಗುಡ್‌ಬೈ ಹೇಳಲಿದೆ ಟಾಟಾ

ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಮತ್ತೊಮ್ಮೆ ಸಹಾಯಹಸ್ತ ಚಾಚಿದ ಟಾಟಾ

ಮೊದಲ ಮತ್ತು ಎರಡನೇ ಹಂತದ ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಕೋಟ್ಯಾಂತರ ಜನರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಇಂತಹ ಹೊತ್ತಿನಲ್ಲಿ ಸರ್ಕಾರದ ಜೊತೆ ಕೈಜೋಡಿಸಿದ ಸಾವಿರಾರು ಸಂಘ-ಸಂಸ್ಥೆಗಳು ಭಾರೀ ಪ್ರಮಾಣದ ದೇಣಿಗೆ ಜೊತೆಗೆ ಬಡವರಿಗೆ ಊಟ ವಿತರಣೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ.

Most Read Articles

Kannada
English summary
Tata Sons Foundation Donates 20 Tata Winger Ambulances, Rs 10 Crore To Government Of Maharashtra. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X