ಈ ವರ್ಷ ಹೆಚ್ಚು ಬಾರಿ ಸರ್ಚ್ ಮಾಡಲ್ಪಟ್ಟ ಕಾರುಗಳಿವು
ಆಟೋ ಮೊಬೈಲ್ ಉದ್ಯಮಕ್ಕೆ ಈ ವರ್ಷ ಅಷ್ಟೇನೂ ಆಶಾದಾಯಕವಾಗಿಲ್ಲ. ಲಾಕ್‌ಡೌನ್ ಜಾರಿಗೊಳಿಸಿದ್ದ ಕಾರಣಕ್ಕೆ ಕಾರುಗಳ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತವಾಗಿದೆ. ಗ್ರಾಹಕರು ಕಾರು ಖರೀದಿಗೂ ಮುನ್ನ ಕಾರುಗಳ ಬಗೆಗಿನ ಮಾಹಿತಿಯನ್ನು ಶೋಧಿಸುತ್ತಾರೆ. ಭಾರತೀಯ ಗ್ರಾಹಕರು ಈ ವರ್ಷ ಯಾವ ಯಾವ ಕಾರುಗಳ ಬಗೆಗಿನ ಮಾಹಿತಿಯನ್ನು ಹೆಚ್ಚು ಶೋಧಿಸಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

2020ರ ಜನವರಿ - ಜೂನ್ ನಡುವೆ ಭಾರತದಲ್ಲಿ ಸೆಲ್ಟೋಸ್ ಕಾರಿನ ಮಾಹಿತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಶೋಧಿಸಲಾಗಿದೆ. ನಂತರದ ಸ್ಥಾನಗಳಲ್ಲಿ ಟಾಟಾ ಆಲ್ಟ್ರೋಜ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಟಾಟಾ ಹ್ಯಾರಿಯರ್, ಟಾಟಾ ಟಿಯಾಗೊ, ಜೀಪ್ ಕಂಪಾಸ್, ಮಹೀಂದ್ರಾ ಎಕ್ಸ್‌ಯುವಿ 300, ಮಹೀಂದ್ರಾ ಸ್ಕಾರ್ಪಿಯೋ ಹಾಗೂ ಮಹೀಂದ್ರಾ ಎಕ್ಸ್‌ಯುವಿ 500 ಕಾರುಗಳಿವೆ.

ಕಿಯಾ ಮೋಟಾರ್ಸ್ ಕಂಪನಿಯ ಸೆಲ್ಟೋಸ್ ದೇಶದಲ್ಲಿ ಹೆಚ್ಚು ಮಾರಾಟವಾದ ಎಸ್ ಯುವಿಯಾಗಿದೆ. ಹೆಚ್ಕು ಶೋಧಿಸಲಾಗಿರುವ ಎಲ್ಲಾ ಕಾರುಗಳು ಎಸ್ ಯುವಿಗಳಾಗಿವೆ ಎಂಬುದು ಗಮನಾರ್ಹ. ಇದರಿಂದ ಭಾರತದಲ್ಲಿ ಎಸ್ ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸಬಹುದು.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಇನ್ನು ಹೆಚ್ಚು ಹುಡುಕಲಾದ ಕಂಪನಿಗಳ ಬಗ್ಗೆ ಹೇಳುವುದಾದರೆ ಲ್ಯಾಂಬೊರ್ಗಿನಿ ಕಂಪನಿಯ ಬಗ್ಗೆ ಹೆಚ್ಚು ಶೋಧ ನಡೆಸಲಾಗಿದೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ, ಕಿಯಾ ಮೋಟಾರ್ಸ್, ಹೋಂಡಾ, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು, ಜಾಗ್ವಾರ್ ಹಾಗೂ ರೋಲ್ಸ್ ರಾಯ್ಸ್ ಕಂಪನಿಗಳಿವೆ.

ಮಾಧ್ಯಮ ಮೂಲಗಳು ಬಿಡುಗಡೆಗೊಳಿಸಿರುವ ಈ ಮಾಹಿತಿಯಲ್ಲಿ ಗ್ರಾಹಕರು ಕಂಪನಿಯ ಹೆಸರಿನಿಂದ ಹುಡುಕಿದರೆ ಅವರು ಅದರ ಬಗ್ಗೆ ತಿಳಿದುಕೊಳ್ಳಲು ಮಾತ್ರ ಬಯಸುತ್ತಾರೆ. ಆದರೆ ಕಾರುಗಳ ಹೆಸರಿನಿಂದ ಹುಡುಕಿದರೆ ಆ ಕಾರನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಹೆಚ್ಚು ಹುಡುಕಲಾದ ಐದು ಕಂಪನಿಗಳು ಐಷಾರಾಮಿ ಕಂಪನಿಗಳಾಗಿವೆ. ಈ ಕಂಪನಿಗಳ ಕಾರುಗಳನ್ನು ಕೆಲವರು ಮಾತ್ರ ಖರೀದಿಸುತ್ತಾರೆ. ಉದಾಹರಣೆಗೆ ಲ್ಯಾಂಬೊರ್ಗಿನಿ ಕಂಪನಿಯ ಬಗೆಗಿನ ಮಾಹಿತಿಯನ್ನು 5.91 ಲಕ್ಷ ಬಾರಿ ಹುಡುಕಲಾಗಿದೆ. ಈ ಕಂಪನಿಯ ಕೆಲವೇ ಮಾದರಿಗಳು ಮಾತ್ರ ಮಾರಾಟವಾಗಿವೆ.

ಆದರೆ ಕಾರಿನ ಮಾದರಿಗಳ ವಿಷಯವೇ ಬೇರೆ. ಸೆಲ್ಟೋಸ್ ಕಾರ್ ಅನ್ನು 7.23 ಲಕ್ಷ ಬಾರಿ ಹುಡುಕಲಾಗಿದೆ. ಇದುವರೆಗೂ ಸೆಲ್ಟೋಸ್ ಕಾರಿನ 81,000ಕ್ಕೂ ಹೆಚ್ಚು ಯೂನಿಟ್ ಗಳು ಮಾರಾಟವಾಗಿದೆ. ಮಾರಾಟದ ಡೇಟಾವನ್ನು ಲಿಂಕ್ ಮಾಡುವ ಮೂಲಕವೂ ಮಾದರಿಯ ಹುಡುಕಾಟವನ್ನು ಕಾಣಬಹುದು.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೀಗೆ ಹುಡುಕಲಾದ ವಾಹನಗಳ ಪಟ್ಟಿಯಲ್ಲಿ ಒಟ್ಟು ಏಳು ಎಸ್ ಯುವಿಗಳಿವೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನಪ್ರಿಯವಾಗಿದ್ದ ಆಡಿ ಕಂಪನಿಯು ಈ ಪಟ್ಟಿಯಿಂದ ಹೊರಗುಳಿದಿದೆ. ಕಿಯಾ ಮೋಟಾರ್ಸ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಮಾರಾಟದ ದೃಷ್ಟಿಯಿಂದ ಕಿಯಾ ಮೋಟಾರ್ಸ್ ಮೂರನೇ ಸ್ಥಾನದಲ್ಲಿದೆ.


Click it and Unblock the Notifications