ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು

ಲಾಕ್‌ಡೌನ್ ಕಾರಣದಿಂದಾಗಿ ಕಳೆಗುಂದಿದ್ದ ಆಟೋ ಮೊಬೈಲ್ ಉದ್ಯಮವು ನಿಧಾನಕ್ಕೆ ಚೇತರಿಕೆಯನ್ನು ಕಾಣುತ್ತಿದೆ. ಕಳೆದ ವಾರ, ಮಾರುಕಟ್ಟೆಯಲ್ಲಿರುವ ಹಲವು ಕಾರುಗಳನ್ನು ಅಪ್‌ಡೇಟ್ ಮಾಡಿ ಬಿಡುಗಡೆಗೊಳಿಸಲಾಗಿದೆ.

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು

ಹೊಸ ಕಾರುಗಳ ಬುಕ್ಕಿಂಗ್‌ಗಳನ್ನು ಆರಂಭಿಸಲಾಗಿದೆ. ಇದರ ಜೊತೆಗೆ ಕೆಲವು ಕಾರುಗಳನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲಾಗಿದೆ. ಕಳೆದ ವಾರ ಆಟೋಮೊಬೈಲ್ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳನ್ನು ಈ ಲೇಖನದಲ್ಲಿ ನೋಡೋಣ.

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು

2020 ಸೆಲ್ಟೋಸ್ ಬಿಡುಗಡೆ:

ಕಿಯಾ ಮೋಟಾರ್ಸ್ 2020ರ ಹೊಸ ಸೆಲ್ಟೋಸ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2020ರ ಸೆಲ್ಟೋಸ್ ಕಾರು ಹಲವು ಹೊಸ ಫೀಚರ್‌ಗಳನ್ನು ಹೊಂದಿದೆ.ಹಲವು ಫೀಚರ್‌ಗಳನ್ನು ಲೋ ಎಂಡ್ ಮಾದರಿಗಳಲ್ಲಿಯೂ ನೀಡಲಾಗಿದೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.89 ಲಕ್ಷಗಳಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು

ಹ್ಯುಂಡೈ ಕ್ರೆಟಾ ಮೇ ಮಾರಾಟ:

2020ರ ಮೇ ತಿಂಗಳಲ್ಲಿ ಹ್ಯುಂಡೈ ಕ್ರೆಟಾ ಕಾರಿನ 3212 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳನ್ನು ಮೀರಿಸಿದೆ. ಮಾರುತಿ ಸುಜುಕಿ ಕಂಪನಿಯು ಮಾರಾಟದಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ.

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಬಿಡುಗಡೆ:

ಟೊಯೊಟಾ ಕಂಪನಿಯು ಫಾರ್ಚೂನರ್ ಫೇಸ್‌ಲಿಫ್ಟ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಕಂಪನಿಯು 2021ರ ಟೊಯೊಟಾ ಫಾರ್ಚೂನರ್ ಕಾರ್ ಅನ್ನು ಅನೇಕ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಗೊಳಿಸಿದೆ. ಈ ಕಾರಿನಲ್ಲಿ ಹಲವಾರು ಫೀಚರ್ ಹಾಗೂ ಎಕ್ವಿಪ್‌ಮೆಂಟ್‌ಗಳನ್ನು ಅಳವಡಿಸಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು

2020 ಮಹೀಂದ್ರಾ ಥಾರ್ ಬುಕಿಂಗ್:

ಮಹೀಂದ್ರಾ ಕಂಪನಿಯು 2020ರ ಥಾರ್ ಕಾರ್ ಅನ್ನು ಹಲವು ದಿನಗಳಿಂದ ಪರೀಕ್ಷಿಸುತ್ತಿದೆ. ಕಂಪನಿಯು ಶೀಘ್ರದಲ್ಲಿಯೇ ಈ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈಗ 2020ರ ಮಹೀಂದ್ರಾ ಥಾರ್‌ನ ಬುಕ್ಕಿಂಗ್‌ಗಳನ್ನು ಆರಂಭಿಸಲಾಗಿದೆ.

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು

2020ರ ಮಹೀಂದ್ರಾ ಥಾರ್‌ನ ಬುಕ್ಕಿಂಗ್‌ಗಳನ್ನು ದೇಶದ ಬಹುತೇಕ ಶೋರೂಂಗಳಲ್ಲಿ ಆರಂಭಿಸಲಾಗಿದೆ. ಈ ಕಾರ್ ಅನ್ನು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಕಾರು ಉತ್ತಮ ವಿನ್ಯಾಸ, ಆಕರ್ಷಕವಾದ ಇಂಟಿರಿಯರ್ ಹಾಗೂ ಹಲವಾರು ಫೀಚರ್‌ಗಳನ್ನು ಹೊಂದಿದೆ.

Article Published On: Monday, June 8, 2020, 23:45 [IST]
English summary
Top Car News from last week Mahindra Thar Bookings Kia Seltos and others. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+