ಕಳೆದ ವಾರ ಆಟೋಮೊಬೈಲ್ ಉದ್ಯಮದಲ್ಲಿ ನಡೆದ 5 ಪ್ರಮುಖ ಘಟನೆಗಳಿವು
ಭಾರತದ ಆಟೋ ಮೊಬೈಲ್ ಉದ್ಯಮವು ಮೊದಲಿಗಿಂತ ಕಳೆದ ವಾರ ಚೇತರಿಕೆಯನ್ನು ಕಂಡಿದೆ. ಆಟೋ ಮೊಬೈಲ್ ಕಂಪನಿಗಳು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿವೆ. ಕಳೆದ ಈ ವಾರ ಅನೇಕ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಾಗಿದ್ದರೆ, ಅನೇಕ ವಾಹನಗಳ ಬುಕ್ಕಿಂಗ್ ಹಾಗೂ ವಿತರಣೆಯನ್ನು ಆರಂಭಿಸಲಾಗಿದೆ. ದೇಶಿಯ ಆಟೋಮೊಬೈಲ್ ಉದ್ಯಮದಲ್ಲಿ ಕಳೆದ ವಾರ ನಡೆದ 5 ಪ್ರಮುಖ ಘಟನೆಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

5. ಎಂಜಿ ಝಡ್ಎಸ್ ಇವಿ ಬುಕ್ಕಿಂಗ್: ಎಂಜಿ ಕಂಪನಿಯು ತನ್ನ ಹೊಸ ಝಡ್‌ಎಸ್ ಇವಿ ವಾಹನದ ಬುಕ್ಕಿಂಗ್‌ಗಳನ್ನು ಜೂನ್ 1ರಿಂದ ಆರು ಹೊಸ ನಗರಗಳಲ್ಲಿ ಆರಂಭಿಸಲಿದೆ. ಎಂಜಿ ಝಡ್ಎಸ್ ಇವಿ ಬುಕ್ಕಿಂಗ್‌ಗಳನ್ನು ಪುಣೆ, ಸೂರತ್, ಕೊಚ್ಚಿನ್, ಚಂಡೀಗಢ, ಜೈಪುರ, ಚೆನ್ನೈ ನಗರಗಳಲ್ಲಿ ಜೂನ್ 2020ರಿಂದ ಆರಂಭಿಸಲಾಗುವುದು.

4. ಟಾಟಾ ನೆಕ್ಸಾನ್ ವಿತರಣೆ: ಲಾಕ್‌ಡೌನ್ ಸಡಿಲಗೊಂಡ ನಂತರ ಟಾಟಾ ಮೋಟಾರ್ಸ್ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯ ವಿತರಣೆಯನ್ನು ಆರಂಭಿಸಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ವಿತರಣೆಯನ್ನು ಆಯ್ದ ನಗರಗಳಲ್ಲಿ ಆರಂಭಿಸಲಾಗಿದೆ. ಸ್ಥಳೀಯ ಆಡಳಿತದಿಂದ ಅನುಮತಿ ಪಡೆದ ನಂತರ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ವಿತರಿಸಲಾಗುತ್ತಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

3. ಜೀಪ್ ಕಂಪಾಸ್ ಫೇಸ್‌ಲಿಫ್ಟ್: ಜೀಪ್ ಕಂಪನಿಯು ಈ ವರ್ಷದ ಕೊನೆಗೆ ಕಂಪಾಸ್ ಕಾರನ್ನು ಬಿಡುಗಡೆಗೊಳಿಸಲಿದೆ. ಜೂನ್ 4ರಂದು ಫೇಸ್‌ಲಿಫ್ಟ್ ಕಾರ್ ಅನ್ನು ಅನಾವರಣಗೊಳಿಸಲಾಗುವುದು. ಜೀಪ್ ಕಂಪನಿಯು ಕಂಪಾಸ್ ಕಾರ್ ಅನ್ನು ಹಲವಾರು ಕಾಸ್ಮೆಟಿಕ್ ಬದಲಾವಣೆಗಳು ಹಾಗೂ ನವೀಕರಿಸಿದ ತಂತ್ರಜ್ಞಾನದೊಂದಿಗೆ ಬಿಡುಗಡೆಗೊಳಿಸಲಿದೆ.

2. ಮಾರುತಿ ಎಕ್ಸ್‌ಟೆಂಡೆಡ್ ವಾರಂಟಿ ಅವಧಿ: ಮಾರುತಿ ಸುಜುಕಿ ಕಂಪನಿಯು ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದೆ. ಕಂಪನಿಯ ಫ್ರೀ ಸರ್ವೀಸ್, ವಾರಂಟಿ ಹಾಗೂ ಎಕ್ಸ್‌ಟೆಂಡೆಡ್ ವಾರಂಟಿ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಮೇ ತಿಂಗಳಿನಲ್ಲಿ ವಾರಂಟಿ ಅವಧಿ ಮುಕ್ತಾಯವಾಗಲಿರುವ ಗ್ರಾಹಕರಿಗೆ ಇದು ಅನ್ವಯವಾಗಲಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

1. ಹೊಸ ಸ್ಕೋಡಾ ರಾಪಿಡ್ ಬಿಡುಗಡೆ: ಸ್ಕೋಡಾ ಕಂಪನಿಯು ಹೊಸ ರಾಪಿಡ್ ಪೆಟ್ರೋಲ್ ಬಿಎಸ್ 6 ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಸ್ಕೋಡಾ ಕಂಪನಿಯ ರಾಪಿಡ್ 1.0 ಟಿಎಸ್‌ಐ ಬಿಎಸ್ 6 ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.7.49 ಲಕ್ಷಗಳಾಗಿದೆ.

ಇದರ ಜೊತೆಗೆ ಸ್ಕೋಡಾ ಕಂಪನಿಯು ತನ್ನ ಕರೋಕ್ ಹಾಗೂ ಸೂಪರ್ಬ್ ಫೇಸ್ ಲಿಫ್ಟ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಸ್ಕೋಡಾ ಕರೋಕ್ ಕಾರಿನ ಬೆಲೆ ರೂ.24.99 ಲಕ್ಷಗಳಾದರೆ, ಸೂಪರ್ಬ್ ಫೇಸ್ ಲಿಫ್ಟ್ ಕಾರಿನ ಬೆಲೆ ರೂ.29.99 ಲಕ್ಷಗಳಾಗಿದೆ. ಕಂಪನಿಯು ಈ ಮೂರು ಕಾರುಗಳನ್ನು ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತ್ತು.


Click it and Unblock the Notifications