ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಾದ ಟಾಪ್ ಕಾರುಗಳಿವು

ಭಾರತದ ಕಾರು ತಯಾರಕ ಕಂಪನಿಗಳು ಉತ್ಪಾದನೆ ಹಾಗೂ ರಫ್ತಿಗೆ ಹೆಸರುವಾಸಿಯಾಗಿದ್ದು, ಪ್ರತಿ ವರ್ಷ ಸಾವಿರಾರು ಯುನಿಟ್ ಕಾರುಗಳನ್ನು ರಫ್ತು ಮಾಡುತ್ತವೆ. ಕರೋನಾ ವೈರಸ್ ಆರ್ಭಟದ ನಡುವೆಯೂ ದೇಶಿಯ ಕಾರು ಮಾರುಕಟ್ಟೆ ಸುಧಾರಿಸುತ್ತಿದ್ದರೆ, ರಫ್ತು ಪ್ರಮಾಣವು ನಿಧಾನಗತಿಯಲ್ಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಾದ ಟಾಪ್ ಕಾರುಗಳಿವು

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಾರುಗಳ ರಫ್ತು ಪ್ರಮಾಣವು ಅರ್ಧದಷ್ಟು ಕಡಿಮೆಯಾಗಿದೆ. ಈ ವರ್ಷದ ಏಪ್ರಿಲ್ ತಿಂಗಳಿನಿಂದ ಜುಲೈ ತಿಂಗಳವರೆಗೆ ಹೆಚ್ಚು ರಫ್ತು ಮಾಡಲಾದ ಟಾಪ್ 6 ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಭಾರತದಿಂದ ವಿದೇಶಗಳಿಗೆ ಅತಿ ಹೆಚ್ಚು ರಫ್ತು ಮಾಡಲಾದ ಕಾರು ಫೋಕ್ಸ್‌ವ್ಯಾಗನ್ ಕಂಪನಿಯ ವೆಂಟೊ. ಏಪ್ರಿಲ್‌ನಿಂದ ಜುಲೈವರೆಗೆ ವೆಂಟೊ ಕಾರಿನ ಒಟ್ಟು 8,983 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಾದ ಟಾಪ್ ಕಾರುಗಳಿವು

ಇನ್ನೂ ಫೋರ್ಡ್ ಕಂಪನಿಯ ಇಕೋಸ್ಪೋರ್ಟ್ ಕಾರು ಎರಡನೇ ಸ್ಥಾನದಲ್ಲಿದೆ. ಈ ವರ್ಷದ ಏಪ್ರಿಲ್ - ಜುಲೈ ಅವಧಿಯಲ್ಲಿ ಫೋರ್ಡ್ ಇಕೋಸ್ಪೋರ್ಟ್‌ ಕಾರಿನ ಒಟ್ಟು 8,850 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಾದ ಟಾಪ್ ಕಾರುಗಳಿವು

2019ರ ಏಪ್ರಿಲ್-ಜುಲೈ ಅವಧಿಗೆ ಹೋಲಿಸಿದರೆ ಇಕೋಸ್ಪೋರ್ಟ್ ಕಾರಿನ ರಫ್ತು ಪ್ರಮಾಣವು 61.1%ನಷ್ಟು ಕುಸಿದಿದೆ. ಕಿಯಾ ಕಂಪನಿಯ ಸೆಲ್ಟೋಸ್ ಮೂರನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಸೆಲ್ಟೋಸ್ ಕಾರಿನ 7,800 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಾದ ಟಾಪ್ ಕಾರುಗಳಿವು

ಹೆಚ್ಚು ರಫ್ತು ಮಾಡಲಾದ ಕಾರುಗಳ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ಜನರಲ್ ಮೋಟಾರ್ಸ್ ಕಂಪನಿ ಇದೆ. ಕಂಪನಿಯು ಇನ್ನು ಮುಂದೆ ಭಾರತದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದರೆ ಕಂಪನಿಯು ರಫ್ತು ಮಾಡಲು ಮಾತ್ರ ಕಾರುಗಳನ್ನು ಉತ್ಪಾದಿಸಲಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಾದ ಟಾಪ್ ಕಾರುಗಳಿವು

ಕಂಪನಿಯು ಶೆವ್ರೊಲೆಟ್ ಬೀಟ್ ಹ್ಯಾಚ್‌ಬ್ಯಾಕ್‌ ಕಾರಿನ 7,781 ಯುನಿಟ್‌ಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ. ಕಳೆದ ವರ್ಷದ ರಫ್ತು ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷದ ರಫ್ತು ಪ್ರಮಾಣವು 71%ನಷ್ಟು ಕುಸಿದಿದೆ. 2019ರ ಏಪ್ರಿಲ್ - ಜುಲೈ ಅವಧಿಯಲ್ಲಿ 26,842 ಯುನಿಟ್ ಕಾರುಗಳನ್ನು ರಫ್ತು ಮಾಡಲಾಗಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಾದ ಟಾಪ್ ಕಾರುಗಳಿವು

ಹ್ಯುಂಡೈ ವರ್ನಾ ಕಾರಿನ ರಫ್ತು ಪ್ರಮಾಣವು 75.2%ನಷ್ಟು ಕುಸಿದಿದೆ. ಕಳೆದ ವರ್ಷ ಈ ಅವಧಿಯಲ್ಲಿ 24,384 ಯುನಿಟ್ ಕಾರುಗಳನ್ನು ರಫ್ತು ಮಾಡಲಾಗಿತ್ತು. ಈ ವರ್ಷ 6,049 ಯುನಿಟ್‌ಗಳನ್ನು ಮಾತ್ರ ರಫ್ತು ಮಾಡಲಾಗಿದೆ. ಮಾರುತಿ ಎಸ್-ಪ್ರೆಸ್ಸೊ ಕಾರಿನ 4,055 ಯುನಿಟ್ ಹಾಗೂ ಹ್ಯುಂಡೈ ಒರಾ ಕಾರಿನ 3,006 ಯುನಿಟ್‌ಗಳನ್ನು ಈ ವರ್ಷದ ಏಪ್ರಿಲ್ - ಜುಲೈ ಅವಧಿಯಲ್ಲಿ ರಫ್ತು ಮಾಡಲಾಗಿದೆ.

Most Read Articles

Kannada
English summary
Top exported cars from India during April July 2020. Read in Kannada.
Story first published: Thursday, August 27, 2020, 17:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X