ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಕಳೆದ ಒಂದು ದಶಕದಲ್ಲಿ ಹಲವಾರು ಜನಪ್ರಿಯ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. ಆದರೆ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವೀಫ್ ಕಳೆದ 15 ವರ್ಷದಿಂದ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ.

ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಬ್ಯಾಂಡ್ ಮಾರುತಿ ಸುಜುಕಿಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ನಿರ್ವಹಣೆ ವೆಚ್ಚ ಮತ್ತು ಉತ್ತಮ ಸರ್ವಿಸ್ ನಿಂದಾಗಿ ಮಾರುತಿ ಸುಜುಕಿ ಕಾರುಗಳಿಗೆ ಬಹುಬೇಡಿಕೆಯನ್ನು ಹೊಂದಿದೆ. ಅಲ್ಲದೇ ಮಾರುತಿ ಸುಜುಕಿ ಕಾರುಗಳು ಉತಮ ರಿಸೇಲ್ ವ್ಯಾಲ್ಯೂ ಅನ್ನು ಹೊಂದಿದೆ. ಭಾರತದಲ್ಲಿ ಪ್ರಯಾಣಿಕರ ವಾಹನ ವಿಭಾಗದಲ್ಲಿ ಒಟ್ಟಾರೆ ಮಾರುಕಟ್ಟೆಯ ಶೇ.55 ರಷ್ಟು ಪಾಲನ್ನು ಮಾರುತಿ ಸುಜುಕಿ ಕಂಪನಿ ಪಡೆದುಕೊಂಡಿದೆ. ಇನ್ನು 2020ರ ಜೂನ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಅತಿ ಹೆಚ್ಚು ಮಾರಾಟವಾದ ಕಾರುಗಳ ಮಾಹಿತಿ ಇಲ್ಲಿವೆ.

ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಮಾರುತಿ ಸುಜುಕಿ ಸ್ವಿಫ್ಟ್

ಜಾಟೊ ಡೈನಾಮಿಕ್ಸ್ ಇಂಡಿಯಾ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, 2020ರ ಜೂನ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ವಿಫ್ಟ್ ಮೊದಲ ಸ್ಥಾನವನ್ನು ಪಡೆದಿದೆ. ಮಾರುತಿ ಸುಜುಕಿ ಪ್ರತಿ ತಿಂಗಳು ಸರಾಸರಿ 15,798 ಯುನಿಟ್ ಸ್ವಿಫ್ಟ್ ಅನ್ನು ಮಾರಾಟ ಮಾಡಿದ್ದಾರೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ 2005ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿತ್ತು.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಮಾರುತಿ ಸುಜುಕಿ ವ್ಯಾಗನ್ಆರ್

2020ರ ಜೂನ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಎರಡನೇ ಸ್ಥಾನವನ್ನು ಪಡೆದಿದೆ. ಇದೇ ಅವಧಿಯಲ್ಲಿ ವ್ಯಾಗನ್ಆರ್ 14,466 ಯುನಿಟ್‌ಗಳು ಮಾರಾಟವಾಗಿವೆ.

ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಮಾರುತಿ ಸುಜುಕಿ ಆಲ್ಟೋ

ಮಾರುತಿ ಸುಜುಕಿ ಆಲ್ಟೋ ಮಾದರಿಯು ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿದೆ. ಕೆಲವು ತಿಂಗಳ ಕಾಲ ಆಲ್ಟೋ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹ್ಯಾಚ್‌ಬ್ಯಾಕ್ ಆಗಿತ್ತು. ಆದರೆ ಇದೀಗ ಮಾರಾಟದ ಪ್ರಮಾಣ ಸಣ್ಣ ಮಟ್ಟದಲ್ಲಿ ಇಳಿಮುಖವಾಗಿದೆ. ಮಾರುತಿ ಸುಜುಕಿ ಆಲ್ಟೋ ಮಾದರಿಯ 14,461 ಯುನಿಟ್‌ಗಳು ಮಾರಾಟವಾಗಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಮಾರುತಿ ಸುಜುಕಿ ಬಲೆನೊ

ಮಾರುತಿ ಸುಜುಕಿ ಬಲೆನೊ ಕಾರು ಸತತವಾಗಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. 2020ರ ಜೂನ್ ಮತ್ತು ನವೆಂಬರ್ ತಿಂಗಳುಗಳ ನಡುವೆ 14,316 ಯುನಿಟ್‌ಗಳು ಮಾರಾಟವಾಗಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ನೆಕ್ಸಾ ಡೀಲರ್ಸ್‌ಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಮಿಡ್ ಎಸ್‍ಯುವಿಯು 2020ರ ಜೂನ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಹ್ಯುಂಡೈ ಕ್ರೆಟಾ ಮಿಡ್ ಎಸ್‍ಯುವಿಯ 11,480 ಯುನಿಟ್‌ಗಳು ಮಾರಾಟವಾಗಿವೆ. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾದ ಹೊಸ ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಮಾರುತಿ ಸುಜುಕಿ ಡಿಜೈರ್

2020ರ ಜೂನ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಮಾರುತಿ ಸುಜುಕಿ ಡಿಜೈರ್ ಮಾದರಿಯ 11,328 ಯುನಿಟ್‌ಗಳು ಮಾರಾಟವಾಗಿವೆ.

ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಮಾರುತಿ ಸುಜುಕಿ ಇಕೋ

2020ರ ಜೂನ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಇಕೋ ಮಾದರಿಯು ಕೂಡ ಸ್ಥಾನವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಮಾರುತಿ ಸುಜುಕಿ ಇಕೋ ಮಾದರಿಯ 9522 ಯುನಿಟ್‌ಗಳು ಮಾರಾಟವಾಗಿವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

2020ರ ಜೂನ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶ್ವಸಿಯಾಗಿದೆ. ಈ ಅವಧಿಯಲ್ಲಿ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್9,380 ಯುನಿಟ್‌ಗಳು ಮಾರಾಟವಾಗಿವೆ.

ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಕಿಯಾ ಸೆಲ್ಟೋಸ್

ಕಿಯಾ ಮೋಟಾರ್ಸ್ ಸಂಸ್ಥೆಯ ಸೆಲ್ಟೋಸ್ 2020ರ ಜೂನ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಒಂಬತ್ತನೆಯ ಸ್ಥಾನವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಮಾದರಿಯ 8,871 ಯುನಿಟ್‌ಗಳು ಮಾರಾಟವಗಿವೆ.

ಬಿಡುಗಡೆಯಾಗಿ 15 ವರ್ಷಗಳ ನಂತರವೂ ಬದಲಾಗದ ಮಾರುತಿ ಸ್ವಿಫ್ಟ್ ಕಾರಿನ ಹವಾ

ಮಾರುತಿ ಸುಜುಕಿ ಎರ್ಟಿಗಾ

2020ರ ಜೂನ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಮಾರುತಿ ಸುಜುಕಿ ಎರ್ಟಿಗಾ ಪಡೆದಿಕೊಂಡಿದೆ. ಈ ಅವಧಿಯಲ್ಲಿ ಮಾರುತಿ ಸುಜುಕಿ ಎರ್ಟಿಗಾ ಮಾದರಿಯ 8,067 ಯುನಿಟ್‌ಗಳು ಮಾರಾಟವಗಿವೆ.

Most Read Articles

Kannada
English summary
Maruti Suzuki Swift Remains The Highest Selling Car Models. Read In Kannada.
Story first published: Friday, December 18, 2020, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X