ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಕಾರು ಖರೀದಿಸಲು ಬಯಸುವ ಭಾರತದ ಗ್ರಾಹಕರು ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕರೋನಾ ವೈರಸ್ ಕಾರಣದಿಂದಾಗಿ ಭಾರತದಲ್ಲಿ ಕಾರುಗಳ ಮಾರಾಟವು ಕುಸಿದಿದ್ದರೂ ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳ ಮಾರಾಟವು ಸ್ವಲ್ಪ ಪ್ರಮಾಣದ ಪ್ರಗತಿಯನ್ನು ಸಾಧಿಸಿದೆ.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಹ್ಯುಂಡೈ ಕಂಪನಿಯ ವೆನ್ಯೂ ಮೊದಲ ಸ್ಥಾನದಲ್ಲಿದೆ. ಆಗಸ್ಟ್‌ ತಿಂಗಳಿನಲ್ಲಿ ವೆನ್ಯೂವಿನ 8,267 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ. ಮೊದಲ ಸ್ಥಾನದಲ್ಲಿದ್ದರೂ ವೆನ್ಯೂವಿನ ಮಾರಾಟ ಪ್ರಮಾಣವು 2019ರ ಆಗಸ್ಟ್ ತಿಂಗಳಿಗಿಂತ ಕಡಿಮೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

2019ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ 967 ಯುನಿಟ್ ಗಳು ಕಡಿಮೆ ಮಾರಾಟವಾಗಿವೆ. 2019ರ ಆಗಸ್ಟ್‌ನಲ್ಲಿಹ್ಯುಂಡೈ ವೆನ್ಯೂವಿನ 9,234 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಹ್ಯುಂಡೈ ಕಂಪನಿಯು ವೆನ್ಯೂ ಎಸ್‌ಯುವಿಯನ್ನು ಹೊಸ ರೀತಿಯ ಐಎಂಟಿ ಗೇರ್‌ಬಾಕ್ಸ್ ನೊಂದಿಗೆ ಬಿಡುಗಡೆಗೊಳಿಸಿದೆ. ಈ ಹೊಸ ಮಾದರಿಯಿಂದ ವೆನ್ಯೂವಿನ ಮಾರಾಟವು ಮತ್ತಷ್ಟು ಹೆಚ್ಚಬಹುದೆಂಬ ನಿರೀಕ್ಷೆಗಳಿವೆ. ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರೆಝಾ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಮಾರುತಿ ಸುಜುಕಿ ಕಂಪನಿಯು ಆಗಸ್ಟ್‌ ತಿಂಗಳಿನಲ್ಲಿ 6,903 ಯುನಿಟ್ ವಿಟಾರಾ ಬ್ರೆಝಾ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. 2019ರ ಆಗಸ್ಟ್ ತಿಂಗಳಿನಲ್ಲಿ 7,109 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಈ ಎಸ್‌ಯುವಿಯ ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ 2.90%ನಷ್ಟು ಕುಸಿತವಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಟಾಟಾ ನೆಕ್ಸಾನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಗಸ್ಟ್ ತಿಂಗಳಿನಲ್ಲಿ ಟಾಟಾ ನೆಕ್ಸಾನ್ ನ 5,179 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ. 2019ರಲ್ಲಿ ಆಗಸ್ಟ್ ನಲ್ಲಿ ನೆಕ್ಸಾನ್ ನ 2,275 ಯುನಿಟ್ ಗಳು ಮಾರಾಟವಾಗಿದ್ದವು. ನೆಕ್ಸಾನ್ ಮಾರಾಟ ಪ್ರಮಾಣವು ಕಳೆದ ವರ್ಷಕ್ಕಿಂತ ಈ ವರ್ಷ 127.65%ನಷ್ಟು ಹೆಚ್ಚಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಟಾಟಾ ನೆಕ್ಸಾನ್, ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಪೂರ್ತಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಮೊದಲ ಭಾರತೀಯ ಕಾರು ಎಂಬ ಹಿರಿಮೆಯನ್ನು ಹೊಂದಿದೆ. ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವವರು ಟಾಟಾ ನೆಕ್ಸಾನ್ ಕಾರು ಖರೀದಿಸುತ್ತಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 300 ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಎಕ್ಸ್‌ಯುವಿ 300ನ 2,990 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ. 2019 ಆಗಸ್ಟ್ ತಿಂಗಳಿನಲ್ಲಿ ಕೇವಲ 2,532 ಯುನಿಟ್ ಗಳು ಮಾರಾಟವಾಗಿದ್ದವು. ಎಕ್ಸ್‌ಯುವಿ 300ನ ಮಾರಾಟ ಪ್ರಮಾಣವು ಕಳೆದ ವರ್ಷಕ್ಕಿಂತ ಈ ವರ್ಷ 18.09%ನಷ್ಟು ಹೆಚ್ಚಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಟಾಟಾ ನೆಕ್ಸಾನ್‌ನಂತೆಯೇ, ಮಹೀಂದ್ರಾ ಎಕ್ಸ್‌ಯುವಿ 300 ಕಾರು ಸಹ ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಟಾಟಾ ನೆಕ್ಸಾನ್ ನಂತರ ಮಹೀಂದ್ರಾ ಎಕ್ಸ್‌ಯುವಿ 300 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಮಹೀಂದ್ರಾ ಎಕ್ಸ್‌ಯುವಿ 300 ಟಾಟಾ ನೆಕ್ಸಾನ್‌ಗಿಂತ ಉತ್ತಮವಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಫೋರ್ಡ್ ಇಕೋಸ್ಪೋರ್ಟ್ ಈ ಪಟ್ಟಿಯಲ್ಲಿ 5ನೇ ಹಾಗೂ ಕೊನೆಯ ಸ್ಥಾನದಲ್ಲಿದೆ. ಫೋರ್ಡ್ ಕಂಪನಿಯು ಕಳೆದ ತಿಂಗಳು 2,757 ಯುನಿಟ್ ಇಕೋಸ್ಪೋರ್ಟ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 2,882 ಇಕೋಸ್ಪೋರ್ಟ್ ಕಾರುಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕಿಂತ ಈ ವರ್ಷ ಇಕೋಸ್ಪೋರ್ಟ್ ಕಾರಿನ ಮಾರಾಟ ಪ್ರಮಾಣವು 4.34%ರಷ್ಟು ಕಡಿಮೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಶೀಘ್ರದಲ್ಲೇ ಕಿಯಾ ಸೊನೆಟ್ ಹಾಗೂ ಟೊಯೊಟಾ ಅರ್ಬನ್ ಕ್ರೂಸರ್ ಗಳು ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ ಮೆಂಟಿನಲ್ಲಿ ಬಿಡುಗಡೆಯಾಗಲಿವೆ. ಇವುಗಳ ಬಿಡುಗಡೆಯ ನಂತರ ಈ ಸೆಗ್ ಮೆಂಟಿನಲ್ಲಿ ಮತ್ತಷ್ಟು ಪೈಪೋಟಿ ಏರ್ಪಡಲಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಇನ್ನೂ ಬೆಲೆಯನ್ನು ಬಹಿರಂಗಪಡಿಸಿಲ್ಲವಾದರೂ ಕಿಯಾ ಸೊನೆಟ್ ನ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದೆ. ಕಿಯಾ ಸೊನೆಟ್ ಈ ಸೆಗ್ ಮೆಂಟಿನಲ್ಲಿ ಅಗ್ರ ಸ್ಥಾನಕ್ಕೇರಿದರೂ ಅಚ್ಚರಿಯಿಲ್ಲ.

Most Read Articles

Kannada
English summary
Top selling compact SUVs in Indian market during August 2020. Read in Kannada.
Story first published: Saturday, September 5, 2020, 11:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X