ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರುಗಳು

ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳ ಮಾರಾಟವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಕಳೆದ ವರ್ಷಕ್ಕಿಂತಲೂ ಇದೀಗ ಹೆಚ್ಚಿನ ಮಟ್ಟದ ಎಲೆಕ್ಟ್ರಿಕ್ ಕಾರುಗಳ ಮಾರಾಟವು ದಾಖಲಾಗಿದೆ. ಇದರಲ್ಲಿ ಟಾಟಾ ನೆಕ್ಸಾನ್, ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹ್ಯುಂಡೈ ಕೊನಾ ಕಾರುಗಳು ಅಗ್ರಸ್ಥಾನದಲ್ಲಿವೆ.

ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರು

ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವು ಕಡಿಮೆ ಸಂಖ್ಯೆ ಹೊಂದಿದ್ದರೂ ಕಳೆದ ವರ್ಷಕ್ಕಿಂತಲೂ ಹೆಚ್ಚು ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿದಂತೆ ಇವಿ ಕಾರುಗಳ ಮಾರಾಟವು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿವೆ. ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಟಾಟಾ ನೆಕ್ಸಾನ್ ಇವಿ ಪ್ರಥಮ ಸ್ಥಾನದಲ್ಲಿದ್ದು, ತದನಂತರ ಎಂಜಿ ಜೆಡ್ಎಸ್ ಮತ್ತು ಹ್ಯುಂಡೈ ಕೊನಾ ಕಾರುಗಳು ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರು

ಟಾಟಾ ಮೋಟಾರ್ಸ್ ಕಂಪನಿಯು ಈ ವರ್ಷದ ಸೆಪ್ಟೆಂಬರ್‌ನಲ್ಲಿ 303 ಯುನಿಟ್ ಮಾರಾಟ ಮಾಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ನೆಕ್ಸಾನ್ ಇವಿ ಮಾದರಿಯು 1151 ಯನಿಟ್‌ ಮಾರಾಟಗೊಂಡಿವೆ.

ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರು

ಟಾಟಾ ಮೋಟಾರ್ಸ್ ಕಂಪನಿಯು ಇವಿ ವಾಹನಗಳ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ತಂತ್ರಜ್ಞಾನ ಪ್ರೇರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿದ್ದು, ಇವಿ ವಾಹನಗಳ ಮೇಲೆ ಗರಿಷ್ಠ ಎಂಟು ವರ್ಷಗಳ ವಾರಂಟಿ ನೀಡುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ ಎನ್ನಬಹುದು.

ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರು

ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಪ್ರಮುಖ ವೆರಿಯೆಂಟ್‌ನೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.15.99 ಲಕ್ಷ ಬೆಲೆ ಪಡೆದುಕೊಂಡಿದ್ದು, ಎ‍ಆರ್‌ಎಐ ಪ್ರಮಾಣ ಪತ್ರದಂತೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಆದಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುವ ಎಂಜಿ ಮೋಟಾರ್ ನಿರ್ಮಾಣದ ಜೆಡ್ಎಸ್ ಇವಿ ಕೂಡಾ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಸೆಪ್ಟೆಂಬರ್ ಅವಧಿಯಲ್ಲಿ 127 ಯನಿಟ್ ಮಾರಾಟಗೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜೆಡ್ಎಸ್ ಇವಿ ಕಾರು ಒಟ್ಟು 514 ಯುನಿಟ್ ಮಾರಾಟಗೊಂಡಿದ್ದು, ಶೀಘ್ರದಲ್ಲೇ ಹೈ ರೇಂಜ್ ಮೈಲೆಜ್ ಮಾದರಿಯನ್ನು ಸಹ ಪಡೆದುಕೊಳ್ಳುತ್ತಿದೆ.

ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರು

ಜೆಡ್ಎಸ್ ಎಲೆಕ್ಟ್ರಿಕ್ ಕಾರು ಸದ್ಯ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸೈಟ್ ಆವೃತ್ತಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20.58 ಲಕ್ಷ ಮತ್ತು ಟಾಪ್ ಎಂಡ್ ಆವೃತ್ತಿಗೆ ರೂ.23.58 ಲಕ್ಷ ನಿಗದಿ ಪಡಿಸಲಾಗಿದೆ.

ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರು

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎರಡು ವೆರಿಯೆಂಟ್‌ಗಳಲ್ಲೂ 44.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ. ಈ ಮೂಲಕ ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರು

ಇನ್ನು ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮೂರನೇ ಸ್ಥಾನದಲ್ಲಿರುವ ಹ್ಯುಂಡೈ ಕೊನಾ ಇವಿ ಕಾರು ಮಾದರಿಯು ಸೆಪ್ಟೆಂಬರ್ ಅವಧಿಯಲ್ಲಿ 29 ಯುನಿಟ್ ಮಾರಾಟಗೊಂಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಕೊನಾ ಇವಿ ಕಾರು ಒಟ್ಟು 100 ಯುನಿಟ್ ಮಾರಾಟಗೊಂಡಿದೆ.

ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರು

ದುಬಾರಿ ಬೆಲೆಯಾದರೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಜೊತೆಗೆ ಹೆಚ್ಚಿನ ಮಟ್ಟದ ಬ್ಯಾಟರಿ ರೇಂಜ್ ಹೊಂದಿರುವ ಕೊನಾ ಇವಿ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 23.90 ಲಕ್ಷ ಬೆಲೆ ಹೊಂದಿದೆ. ಕೊನಾ ಇವಿ ಕಾರಿನಲ್ಲಿ 39.2kWh ಬ್ಯಾಟರಿ ಜೋಡಣೆ ಮಾಡಲಾಗಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರು

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಪರ್ಫಾಮೆನ್ಸ್ ಕಾರುಗಳಂತೆಯೇ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

Article Published On: Tuesday, October 6, 2020, 11:16 [IST]
English summary
Top Selling Electric Cars September 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+