ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ ಟೊಯೊಟಾ

ಟೊಯೊಟಾ ಇಂಡಿಯಾ ಕಂಪನಿಯು ಕ್ರಿಸ್ಮಸ್ ಅಂಗವಾಗಿ ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಇಯರ್ ಎಂಡ್ ಆಫರ್ ನೀಡುತ್ತಿದ್ದು, ಹೊಸ ಕಾರು ಖರೀದಿದಾರರಿಗೆ ಟೊಯೊಟಾ ಕಂಪನಿಯು ಗರಿಷ್ಠ 45 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದೆ.

ಟೊಯೊಟಾ ಆಫರ್

ಟೊಯೊಟಾ ಇಯರ್ ಎಂಡ್ ಆಫರ್‌ಗಳನ್ನು ಮೆಗಾ ಕಾರ್ನಿವಾಲ್ ಎಂದು ಕರೆದಿರುವ ಕಂಪನಿಯು ಹೊಸ ಆಫರ್‌ಗಳನ್ನು ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿವೆ. ಹೊಸ ಆಫರ್‌ಗಳು ಇನೋವಾ ಕ್ರಿಸ್ಟಾ, ಯಾರಿಸ್, ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಮಾದರಿಗಳಿಗೆ ಮಾತ್ರ ಅನ್ವಯಿಸಲಿದ್ದು, ಈ ತಿಂಗಳು 11ರಿಂದ 13ರ ವರೆಗೆ ಪ್ರಮುಖ ಶೋರೂಂಗಳಲ್ಲಿ ಮೆಗಾ ಕಾರ್ನಿವಾಲ್ ನಡೆಸಲಾಗುತ್ತಿದೆ.

ಟೊಯೊಟಾ ಆಫರ್

ಮೆಗಾ ಕಾರ್ನಿವಾಲ್‌ನಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ವಿವಿಧ ಆಫರ್‌ಗಳೊಂದಿಗೆ ಅತಿ ಕಡಿಮೆ ಡೌನ್ ಪೇಮೆಂಟ್ ಮತ್ತು ಇಎಂಐ ಮರುಪಾವತಿಗೆ ಕೆಲವು ವಿನಾಯ್ತಿಗಳು ಲಭ್ಯವಾಗಲಿದ್ದು, ನಿಗದಿತ ಅವಧಿಯಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರ ಹೊಸ ಆಫರ್ ಲಭ್ಯವಾಗುತ್ತದೆ.

ಟೊಯೊಟಾ ಆಫರ್

ಟೊಯೊಟಾ ಕಂಪನಿಯು ಇನೋವಾ ಕ್ರಿಸ್ಟಾ ಕಾರು ಖರೀದಿ ಮೇಲೆ ರೂ. 40 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದ್ದು, ರೂ.99,999 ಡೌನ್ ಪೇಮೆಂಟ್ ಮೂಲಕ ಕಾರು ಮಾಲೀಕತ್ವ ಪಡೆದುಕೊಳ್ಳಬಹುದು. ಕಾರು ಖರೀದಿ ನಂತರ 4 ತಿಂಗಳ ಕಾಲ ಇಎಂಐ ಮರುಪಾವತಿಗೆ ವಿನಾಯ್ತಿ ನೀಡಲಾಗಿದೆ.

ಟೊಯೊಟಾ ಆಫರ್

ಕಾರು ಖರೀದಿ ಮಾಡಿ ನಾಲ್ಕು ತಿಂಗಳ ನಂತರ ಇಎಂಐ ಮರುಪಾವತಿ ಆರಂಭವಾಗಲಿದ್ದು, ವಿನಾಯ್ತಿ ನೀಡಲಾದ ಅವಧಿಯಲ್ಲಿನ ಇಎಂಐ ದರವು ಇನ್ನುಳಿದ ಕಂತುಗಳಲ್ಲಿ ಸೇರ್ಪಡೆಯಾಗಿರುತ್ತದೆ. ಆದರೆ ಸದ್ಯದ ಮಟ್ಟಿಗೆ ಕಾರು ಖರೀದಿಯನ್ನು ಸುಲಭವಾಗಿಸಲು ಸಾಲ ಮರುಪಾವತಿಗೆ ಅವಕಾಶ ನೀಡಿರುವ ಟೊಯೊಟಾ ಕಂಪನಿಯು ಎಂಪಿವಿ ಕಾರು ಖರೀದಿದಾರರನ್ನು ಸೆಳೆಯುತ್ತಿದೆ.

ಟೊಯೊಟಾ ಆಫರ್

ಯಾರಿಸ್ ಸೆಡಾನ್ ಕಾರು ಖರೀದಿಯ ಮೇಲೆ ಟೊಯೊಟಾ ಕಂಪನಿಯು ರೂ.45 ಸಾವಿರ ಉಳಿತಾಯಕ್ಕೆ ಅವಕಾಶ ನೀಡಿದ್ದು, ಕೇವಲ ರೂ.1 ಡೌನ್ ಪೇಮೆಂಟ್ ಮೂಲಕ ಕಾರು ವಿತರಣೆ ಮಾಡಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಟೊಯೊಟಾ ಆಫರ್

ಮಧ್ಯಮ ಕ್ರಮಾಂಕರ ಸೆಡಾನ್ ಕಾರು ಖರೀದಿದಾರರನ್ನು ಸೆಳೆಯಲು ಅತ್ಯುತ್ತಮ ಅವಕಾಶ ನೀಡಿರುವ ಟೊಯೊಟಾ ಕಂಪನಿಯು ಶೇ. 8.99 ಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ಸಹ ಒದಗಿಸಲಿದ್ದು, ಯಾರಿಸ್ ಕಾರಿನ ಸಾಲ ಮರುಪಾವತಿಗೆ ಯಾವುದೇ ವಿನಾಯ್ತಿ ನೀಡಲಾಗಿಲ್ಲ.

ಟೊಯೊಟಾ ಆಫರ್

ಇನ್ನು ಎಂಟ್ರಿ ಲೆವಲ್ ಕಾರು ಮಾದರಿಯಾದ ಗ್ಲಾಂಝಾ ಹ್ಯಾಚ್‌ಬ್ಯಾಕ್ ಕಾರು ಖರೀದಿಯ ಮೇಲೆ ಟೊಯೊಟಾ ಕಂಪನಿಯು ರೂ.15 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದ್ದು, ರೂ. 9,999 ಡೌನ್ ಪೇಮೆಂಟ್‌ನೊಂದಿಗೆ ಕಾರಿನ ಮಾಲೀಕತ್ವ ನೀಡಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಟೊಯೊಟಾ ಆಫರ್

ಇತ್ತೀಚೆಗೆ ಹೊಸದಾಗಿ ಬಿಡುಗಡೆಯಾದ ಅರ್ಬನ್ ಕ್ರೂಸರ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಮೇಲೆ ಟೊಯೊಟಾ ಕಂಪನಿಯು ಪ್ರತಿ ತಿಂಗಳು ರೂ. 5,888 ಇಎಂಐ ಮೊತ್ತದಲ್ಲಿ ಕಾರಿನ ಮಾಲೀಕತ್ವ ನೀಡಲಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್ ಮತ್ತು ಎಕ್ಸ್‌ಚೆಂಜ್ ಡಿಸ್ಕೌಂಟ್ ಸಹ ಒಳಗೊಂಡಿರಲಿವೆ.

Most Read Articles

Kannada
Read more on ಟೊಯೊಟಾ toyota
English summary
Toyota Announces New Finance Schemes Mega Carnival. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X