ಉದ್ಯೋಗಸ್ಥ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದ ಟೊಯೊಟಾ

ಟೊಯೊಟಾ ಕಂಪನಿಯು ದಸರಾ ಮತ್ತು ದೀಪಾವಳಿ ಪ್ರಯುಕ್ತ ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಹಲವು ಆಫರ್‌ಗಳನ್ನು ಘೋಷಣೆ ಮಾಡಿದ್ದು, ವಿಶೇಷವಾಗಿ ಉದ್ಯೋಗಸ್ಥ ಗ್ರಾಹಕರಿಗಾಗಿಯೇ ಆಕರ್ಷಕ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ.

ಉದ್ಯೋಗಸ್ಥ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದ ಟೊಯೊಟಾ

ಟೊಯೊಟಾ ಕಾರುಗಳ ಮೇಲೆ ಲಭ್ಯಲಿರುವ ಆಫರ್‌ಗಳಿಗೆ ಸರ್ಕಾರಿ ಉದ್ಯೋಗಿಗಳು ಮಾತ್ರವಲ್ಲದೆ ಮತ್ತು ಖಾಸಲಿ ವಲಯದಲ್ಲಿನ ಉದ್ಯೋಗಸ್ಥ ಗ್ರಾಹಕರು ಕೂಡಾ ಅರ್ಹರಾಗಿದ್ದು, ಹೊಸ ಆಫರ್‌ಗಳ ಅಡಿಯಲ್ಲಿ ಗ್ರಾಹಕರು ಸುಲಭವಾಗಿ ಮಾಲೀಕತ್ವವನ್ನು ಹೊಂದಬಹುದಾಗಿದೆ. ಹೊಸ ಪ್ಯಾಕೇಜ್ ಅಡಿ ಕಾರು ಖರೀದಿಸುವ ಗ್ರಾಹಕರಿಗೆ ಮೂರು ತಿಂಗಳ ಇಎಂಐ ಹಾಲಿಡೇ ಘೋಷಣೆ ಮಾಡಿದ್ದು, ಆಕರ್ಷಕ ಇಎಂಐ ದರಗಳು ಕಾರು ಖರೀದಿಯ ಹೊರೆಯನ್ನು ಇಳಿಕೆ ಮಾಡಲಿವೆ.

ಉದ್ಯೋಗಸ್ಥ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದ ಟೊಯೊಟಾ

ಕರೋನಾ ವೈರಸ್ ಪರಿಣಾಮ ಸ್ವಂತ ವಾಹನಗಳ ಖರೀದಿಯ ಪ್ರಕ್ರಿಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಲಾಕ್‌ಡೌನ್ ವೇಳೆ ಕಾರು ಮಾರಾಟದಲ್ಲಿ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ಆಫರ್‌ಗಳ ಮೂಲಕ ಮಾರಾಟ ಹೆಚ್ಚಳದ ನೀರಿಕ್ಷೆಯಲ್ಲಿವೆ.

ಉದ್ಯೋಗಸ್ಥ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದ ಟೊಯೊಟಾ

ಟೊಯೊಟಾ ಕಂಪನಿಯು ಕಳೆದ ಐದು ತಿಂಗಳಿನಿಂದ ಕಾರು ಮಾರಾಟ ಸುಧಾರಣೆಗಾಗಿ ನಿರಂತರವಾಗಿ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಇದೀಗ ದಸರಾ ಮತ್ತು ದೀಪಾವಳಿ ಹೊತ್ತಿಗೆ ಗರಿಷ್ಠ ಮಟ್ಟದ ಕಾರು ಮಾರಾಟ ಗುರಿಯೊಂದಿಗೆ ಉದ್ಯೋಗಸ್ಥ ಗ್ರಾಹಕರಿಗಾಗಿಯೇ ವಿಶೇಷ ಆಫರ್ ನೀಡುತ್ತಿದೆ.

ಉದ್ಯೋಗಸ್ಥ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದ ಟೊಯೊಟಾ

ಉದ್ಯೋಗಸ್ಥ ಗ್ರಾಹಕರು ಟೊಯೊಟಾ ನಿರ್ಮಾಣದ ಗ್ಲಾಂಝಾ, ಅರ್ಬನ್ ಕ್ರೂಸರ್, ಯಾರಿಸ್, ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರುಗಳ ಖರೀದಿಗೆ ಮೇಲೆ ದೀರ್ಘಾವಧಿಯ ಸಾಲಸೌಲಭ್ಯಗಳೊಂದಿಗೆ ಕನಿಷ್ಠ ಪ್ರಮಾಣದ ಇಎಂಐ ಆಯ್ಕೆ ಮಾಡಬಹುದಾಗಿದ್ದು, ಇದರ ಜೊತೆಗೆ ವಾಹನ ಖರೀದಿ ಮಾಡಿದ ಮೂರು ಅವಧಿಗೆ ಇಎಂಐ ಹಾಲಿಡೇ ಆಫರ್ ಪಡೆದುಕೊಳ್ಳಬಹುದಾಗಿದೆ.

ಉದ್ಯೋಗಸ್ಥ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದ ಟೊಯೊಟಾ

ಸರ್ಕಾರಿ ಅಧಿಕಾರಿಗಳಿಗೆ ಇತ್ತೀಚೆಗೆ ಕೇಂದ್ರ ಹಣಕಾಸು ಇಲಾಖೆಯು ರೂ. 10 ಸಾವಿರ ರೂಪಾಯಿ ಬಡ್ಡಿ ರಹಿತ ಹಬ್ಬದ ಮುಂಗಡ ಯೋಜನೆಯನ್ನು ಘೋಷಿಸಿರುವ ಆಧಾರದ ಮೇಲೆ ಈ ಆಫರ್ ನೀಡಲಾಗಿದ್ದು, ಎಲ್ ಟಿಸಿಯ ಬದಲಾಗಿ ಈ ಬಾರಿ ನಗದು ವೋಚರ್ ಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಹೊಸ ವಾಹನ ಖರೀದಿಗೆ ಸಹಕಾರಿಯಾಗಿದೆ ಎನ್ನುವುದು ಆಟೋ ಉತ್ಪಾದನಾ ಕಂಪನಿಗಳ ಲೆಕ್ಕಾಚಾರ.

ಉದ್ಯೋಗಸ್ಥ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದ ಟೊಯೊಟಾ

ಇದರೊಂದಿಗೆ ಇತರೆ ಗ್ರಾಹಕರನ್ನು ಒಳಗೊಂಡಂತೆ ಕಾರು ಖರೀದಿಗೆ ಸುಲಭವಾಗುವಂತೆ ಹಲವಾರು ಇಎಂಐ ಆಫರ್‌ಗಳನ್ನು ನೀಡಲಾಗಿದ್ದು, ಗರಿಷ್ಠ 7 ವರ್ಷಗಳ ದೀರ್ಘಾವಧಿಯ ಸಾಲ ಸೌಲಭ್ಯದೊಂದಿಗೆ ಕನಿಷ್ಠ ಇಎಂಐ ಪಾವತಿಗೆ ನೆರವಾಗುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಉದ್ಯೋಗಸ್ಥ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದ ಟೊಯೊಟಾ

ಕರೋನಾ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಆಟೋ ಉದ್ಯಮವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಚೇತರಿಸಿಕೊಳ್ಳುತ್ತಿದ್ದು, ಹಲವಾರು ಆಟೋ ಕಂಪನಿಗಳ ಹೊಸ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ.

ಉದ್ಯೋಗಸ್ಥ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದ ಟೊಯೊಟಾ

2020ರ ಸೆಪ್ಟೆಂಬರ್ ಅವಧಿಯಲ್ಲಿನ ವಿವಿಧ ಕಂಪನಿಗಳ ಕಾರು ಮಾರಾಟದಲ್ಲಿ ಶೇ.31 ರಷ್ಟು ಬೆಳವಣಿಗೆಯು ಕಂಡುಬಂದಿದ್ದು, ಒಟ್ಟು 2,92,894 ಯನಿಟ್ ಕಾರುಗಳು ಮಾರಾಟಗೊಂಡಿವೆ. ಸಂಕಷ್ಟದಲ್ಲೂ ಕಾರು ಮಾರಾಟವು ಚೇತರಿಸಿಕೊಂಡಿರುವುದು ಆಟೋ ಕಂಪನಿಗಳಲ್ಲಿ ಮತ್ತಷ್ಟು ಬಲತುಂಬಿದ್ದು, ದೀಪಾವಳಿ ಸಂಭ್ರಮಾಚರಣೆಗೆ ಹೊತ್ತಿಗೆ ಮತ್ತಷ್ಟು ಹೊಸ ವಾಹನಗಳನ್ನು ಮಾರಾಟಗೊಳಿಸುವ ನೀರಿಕ್ಷೆಯಲ್ಲಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಉದ್ಯೋಗಸ್ಥ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದ ಟೊಯೊಟಾ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಟೊಯೊಟಾ ಕೂಡಾ ವಿವಿಧ ಕಾರು ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್‌ಗಳನ್ನು ಘೋಷಣೆ ಮಾಡಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Announces Special Offer For Salaried Employees. Read in Kannada.
Story first published: Friday, October 16, 2020, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X