ಯಾರಿಸ್ ಮತ್ತು ಗ್ಲಾಂಝಾ ಕಾರು ಖರೀದಿಯ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ
ಟೊಯೊಟಾ ಕಂಪನಿಯು ಕಾರು ಮಾರಾಟ ಸುಧಾರಿಸುವತ್ತ ಹಲವು ಹೊಸ ಕ್ರಮಗಳನ್ನು ಪ್ರಕಟಿಸಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯಾದ ಗ್ಲಾಂಝಾ ಮತ್ತು ಮಧ್ಯಮ ಕ್ರಮಾಂಕದ ಯಾರಿಸ್ ಸೆಡಾನ್ ಕಾರು ಖರೀದಿಯ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್‌ಗಳನ್ನು ಘೋಷಿಸಿದೆ.

ಲಾಕ್‌ಡೌನ್ ವಿನಾಯ್ತಿ ನಂತರ ಕಾರುಗಳ ಮಾರಾಟ ಪ್ರಮಾಣವು ಮಂದಗತಿಯಲ್ಲಿ ಸಾಗಿದ್ದು, ಕಾರು ಖರೀದಿ ಹೆಚ್ಚಳದತ್ತ ಹಲವು ಹೊಸ ಆಫರ್‌ಗಳನ್ನು ಘೋಷಿಸುತ್ತಿರುವ ಆಟೋ ಕಂಪನಿಗಳು ಭರ್ಜರಿ ಆಫರ್ ನೀಡುತ್ತಿವೆ. ಟೊಯೊಟಾ ಕೂಡಾ ಕಾರು ಮಾರಾಟ ಸುಧಾರಿಸುವತ್ತ ಹಲವು ಕ್ರಮಗಳನ್ನು ಕೈಗೊಂಡಿದ್ದು, ತನ್ನ ಜನಪ್ರಿಯ ಕಾರು ಮಾದರಿಗಳಾದ ಗ್ಲಾಂಝಾ ಮತ್ತು ಯಾರಿಸ್ ಕಾರು ಖರೀದಿ ಮೇಲೆ ವಿವಿಧ ಮಾದರಿಯ ಆಫರ್ ಘೋಷಿಸಿದೆ.

ಹೊಸ ಆಫರ್‌ಗಳಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಖರೀದಿಯ ಮೇಲೆ ರೂ. 15 ಸಾವಿರದಷ್ಟು ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್ ಬೋನಸ್ ನೀಡಲಾಗುತ್ತಿದ್ದು, ಹೊಸ ಆಫರ್ ಅನ್ನು ಸಿಮೀತ ಅವಧಿಗಾಗಿ ಮಾತ್ರವೇ ನೀಡಲಾಗುತ್ತಿದೆ.

ಹಾಗೆಯೇ ಮತ್ತೊಂದು ಕಾರು ಮಾದರಿಯಾದ ಯಾರಿಸ್ ಸೆಡಾನ್ ಕಾರು ಖರೀದಿಯ ಮೇಲೆ ರೂ.72 ಸಾವಿರದಷ್ಟು ಆಫರ್ ಘೋಷಿಸಲಾಗಿದ್ದು, ಕರೋನಾ ವಾರಿಯರ್ಸ್‌ಗಾಗಿ ಪ್ರತ್ಯೇಕವಾಗಿ ರೂ. 32,500 ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ.
MOST READ: ಹೆಚ್ಚಿದ ಕರೋನಾ ಭೀತಿ: ವಾಹನ ದಾಖಲೆಗಳ ಮಾನ್ಯತಾ ಅವಧಿಯು ಮತ್ತೊಮ್ಮೆ ವಿಸ್ತರಣೆ

ಇನ್ನು ಕರೋನಾ ವೈರಸ್ ಪರಿಣಾಮ ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಆರ್ಥಿಕ ಸಂಕಷ್ಟವು ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಸಹ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಲಾಕ್‌ಡೌನ್‌ನಿಂದಾಗಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಬಹುತೇಕ ಆಟೋ ಕಂಪನಿಗಳು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೀಗಾಗಿ ಟೊಯೊಟಾ ಕೂಡಾ ವಿವಿಧ ಕಾರು ಮಾದರಿಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಕಾರು ಖರೀದಿಯ ನಂತರ 90 ದಿನಗಳ ನಂತರ ಇಎಂಐ ಪಾವತಿ ಶುರು ಮಾಡಬಹುದಾದ ಆಯ್ಕೆ ನೀಡಲಾಗುತ್ತಿದೆ.

ಸದ್ಯಕ್ಕೆ ಕಾರು ಖರೀದಿ ಸಾಧ್ಯವಿಲ್ಲವೆಂದು ಮುಂದೂಡುತ್ತಿರುವ ಗ್ರಾಹಕರಿಗೆ ಇದು ಅನುಕೂಲಕರವಾಗಿದ್ದು,ಹಾಗೆಯೇ ಜಿರೋ ಡೌನ್‌ಪೆಮೆಂಟ್‌ನೊಂದಿಗೆ ಕಾರು ಖರೀದಿ ಮಾಡಿದ ಆರು ತಿಂಗಳ ತನಕ ರೂ.899 ಮಾತ್ರ ಇಎಂಐ ಪಾವತಿ ಮಾಡಬಹುದಾಗಿದೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ತದನಂತರ ಪೂರ್ಣಪ್ರಮಾಣದ ಇಎಂಐ ಅನ್ವಯವಾಗುವಂತೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಹೊಸ ಆಫರ್‌ಗಳ ಕುರಿತಾಗಿ ಮತ್ತಷ್ಟು ಮಾಹಿತಿಗಾಗಿ ನಿಮ್ಮ ಹತ್ತಿರ ಡೀಲರ್ಸ್ ಬಳಿ ಮಾಹಿತಿ ಪಡೆಯಬಹುದಾಗಿದೆ.


Click it and Unblock the Notifications








