ಹೆಚ್ಚಿದ ಕರೋನಾ ಭೀತಿ: ವಾಹನ ದಾಖಲೆಗಳ ಮಾನ್ಯತಾ ಅವಧಿಯು ಮತ್ತೊಮ್ಮೆ ವಿಸ್ತರಣೆ
ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶದ ಜನತೆಗೆ ಹಲವಾರು ವಿನಾಯ್ತಿ ಘೋಷಿಸಿರುವ ಕೇಂದ್ರ ಸರ್ಕಾರವು ಎರಡನೇ ಬಾರಿಗೆ ವಾಹನಗಳ ಅಗತ್ಯ ದಾಖಲೆಗಳ ಮಾನ್ಯತಾ ಅವಧಿಯನ್ನು ಮತ್ತೊಮ್ಮೆ ಹೆಚ್ಚಿಸಿದೆ.

ದೇಶಾದ್ಯಂತ ಕರೋನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ವೈರಸ್ ಭೀತಿ ನಡುವೆಯೂ ವಾಣಿಜ್ಯ ಚಟುವಟಿಕೆಗಳಿಗೆ ಷರತ್ತುಬದ್ಧ ಅವಕಾಶ ನೀಡಲಾಗುತ್ತಿದೆ. ಲಾಕ್‌ಡೌನ್‌ನಿಂದಾದ ನಷ್ಟವನ್ನು ಸರಿದೂಗಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರವು ವಾಹನ ಮಾಲೀಕರಿಗೂ ಹಲವಾರು ವಿನಾಯ್ತಿಗಳನ್ನು ನೀಡಿದೆ.

ಮಾರ್ಚ್‌ನಿಂದ ಮೇ ಅವಧಿಯಲ್ಲಿ ಮುಕ್ತಾಯಗೊಂಡ ವಾಹನ ಅಗತ್ಯ ದಾಖಲೆಗಳ ಮಾನ್ಯತಾ ಅವಧಿಯನ್ನು ಎರಡನೇ ಬಾರಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದು, ಸೆಪ್ಟೆಂಬರ್ ತನಕ ಯಾವುದೇ ತೊಂದರೆಯಿಲ್ಲ ಎಂಬುವುದಾಗಿ ಸ್ಪಷ್ಟಪಡಿಸಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ಈ ಹಿಂದೆ ಜುಲೈ 31ರ ತನಕ ವಾಹನ ದಾಖಲೆಗಳಿಗೆ ಮಾನ್ಯತಾ ಅವಧಿಯನ್ನು ಘೋಷಿಸಿದ್ದ ಕೇಂದ್ರ ಸರ್ಕಾರವು ಇದೀಗ ವೈರಸ್ ಭೀತಿ ಹೆಚ್ಚುತ್ತಿರುವುದರಿಂದ ಸೆಪ್ಟೆಂಬರ್ 30ರ ವರೆಗೆ ಕಾಲಾವಕಾಶ ನೀಡಿದೆ.

ಲಾಕ್‌ಡೌನ್ ಅವಧಿಯಲ್ಲಿ ಮುಕ್ತಾಯಗೊಂಡ ವಾಹನ ದಾಖಲೆಗಳ ನವೀಕರಣಕ್ಕೆ ಯಾವುದೇ ಹೆಚ್ಚುವರಿ ಮೊತ್ತ ವಿಧಿಸುವುದಿಲ್ಲ ಎಂಬುವುದನ್ನು ಸಹ ಸ್ಪಷ್ಟಪಡಿಸಿರುವ ಕೇಂದ್ರ ಸಾರಿಗೆ ಇಲಾಖೆಯು ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಹೀಗಾಗಿ ಲಾಕ್‌ಡೌನ್ ಸಂದರ್ಭದಲ್ಲಿ ಮಾನ್ಯತೆ ಮುಕ್ತಾಯಗೊಂಡಿದ್ದ ಆರ್‌ಸಿ(ನೋಂದಣಿ ಪ್ರಮಾಣಪತ್ರ), ಡಿಎಲ್(ಚಾಲನಾ ಪ್ರಮಾಣಪತ್ರ) ಮತ್ತು ಎಫ್‌ಸಿ(ಫಿಟ್‌ನೆಸ್ ಪ್ರಮಾಣಪತ್ರ)ಗಳ ಅವಧಿಯು ಲಾಕ್‌ಡೌನ್ ಅವಧಿಯ ಆಧಾರದ ಮೇಲೆ ಸೆಪ್ಟೆಂಬರ್ 30ರ ತನಕ ಮಾನ್ಯತೆ ಪಡೆದುಕೊಂಡಿರಲಿವೆ.

ಆರ್‌ಸಿ, ಡಿಎಲ್ ಮತ್ತು ಎಫ್‌ಸಿ ಹೊರತುಪಡಿಸಿ ಇನ್ಸುರೆನ್ಸ್‌ಗೆ ಯಾವುದೇ ಘೋಷಣೆ ಮಾಡಿಲ್ಲ. ಆದರೆ ಇನ್ಸುರೆನ್ಸ್ ನವೀಕರಣ ಅವಧಿಯನ್ನು ಮಾರ್ಚ್ ಮತ್ತು ಎಪ್ರಿಲ್ ತಿಂಗಳಿನಲ್ಲಿ ಮಗಿದ್ದ ವಾಹನ ಮಾಲೀಕರಿಗೆ ಲಾಕ್‌ಡೌನ್ ವಿನಾಯ್ತಿಯ ದಿನವರೆಗೂ ವಿಸ್ತರಣೆ ಮಾಡಲಾಗಿತ್ತು. ಆದರೆ ಇದೀಗ ಇನ್ಸುರೆನ್ಸ್ ಗೆ ಯಾವುದೇ ವಿನಾಯ್ತಿ ನೀಡಿಲ್ಲ.
MOST READ: ಅಕ್ಟೋಬರ್ 1ರಿಂದ ಹೊಸ ಸ್ಟಿಕ್ಕರ್ ಹೊಂದಲಿವೆ ಬಿಎಸ್ 6 ವಾಹನಗಳು

ಇನ್ನು ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಹಲವಾರು ಕಠಿಣ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರವು ಸಂಕಷ್ಟ ಸಮಯದಲ್ಲೂ ವಾಣಿಜ್ಯ ಚಟುವಟಿಕೆಗಳಿಗೆ ವಿನಾಯ್ತಿ ನೀಡಿದ್ದು, ಅಗತ್ಯ ದಾಖಲೆಗಳಿದ್ದರೂ ಮಾನ್ಯತೆ ಹೊಂದಿರದ ವಾಹನ ದಾಖಲೆಗಳಿಗೆ ಹೆಚ್ಚುವರಿ ಅವಧಿ ವಿಸ್ತರಿಸಿರುವುದು ಸ್ವಾಗತಾರ್ಹ.


Click it and Unblock the Notifications








