ಟೊಯೊಟಾ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಮಾದರಿಯಾಗಿರುವ ಇನೋವಾ ಕ್ರಿಸ್ಟಾ ಕಾರನ್ನು ಶೀಘ್ರದಲ್ಲೇ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಭಾರತದಲ್ಲಿ ಮುಂದಿನ ತಿಂಗಳು 2ನೇ ವಾರದಲ್ಲಿ ಮಾರುಕಟ್ಟೆ ಪ್ರವೇಶಿಸುವ ನೀರಿಕ್ಷೆಗಳಿವೆ.

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಮಾದರಿಯನ್ನು ಕಳೆದ ವಾರವಷ್ಟೇ ಅನಾವರಣಗೊಳಿಸಿರುವ ಟೊಯೊಟಾ ಕಂಪನಿಯು ಮೊದಲ ಹಂತವಾಗಿ ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಿದ್ದು, ಇದೀಗ ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ. ಫೇಸ್‌ಲಿಫ್ಟ್ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮುಂಭಾಗದ ವಿನ್ಯಾಸದಲ್ಲಿ ಹೊಸ ಬದಲಾವಣೆ ಪಡೆದುಕೊಂಡಿದೆ.

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

2004ರಲ್ಲಿ ಬಿಡುಗಡೆಯಾಗಿದ್ದ ಇನೋವಾ ಕಾರು 2016ರಲ್ಲಿ ಮೊದಲ ಬಾರಿಗೆ ಇನೋವಾ ಕ್ರಿಸ್ಟಾ ಹೆಸರಿನೊಂದಿಗೆ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿತ್ತು. ಇದೀಗ ಫೇಸ್‌ಲಿಫ್ಟ್ ಆವೃತ್ತಿಯ ಮೂಲಕ ಕಾರಿನ ಹೊರಭಾಗ ಮತ್ತು ಒಳಭಾಗದ ವಿನ್ಯಾಸದಲ್ಲಿ ಸಾಕಷ್ಟು ಹೊರ ಬದಲಾವಣೆ ಪರಿಚಯಿಸುತ್ತಿದೆ.

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಫೇಸ್‌ಲಿಫ್ಟ್ ಆವೃತ್ತಿ ಮೂಲಕ ಎಂಪಿವಿ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ಇನೋವಾ ಕ್ರಿಸ್ಟಾ ಕಾರು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಕಾರಿನ ಹೊರ ಮತ್ತು ಒಳ ಭಾಗದ ವಿನ್ಯಾಸಗಳಲ್ಲಿ ಮಹತ್ವದ ಬದಲಾವಣೆ ಪಡೆದುಕೊಂಡಿದೆ.

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಮರವಿನ್ಯಾಸಗೊಳಿಸಲಾದ ಗ್ರಿಲ್‌ಗೆ ಹೊಂದಿಕೊಂಡಂತಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್ ಒಳಗೊಂಡ ಫ್ರಂಟ್ ಫಾಸಿಯಾ, ಮರುವಿನ್ಯಾಸಗೊಂಡ ಗ್ರಿಲ್ ಮತ್ತು ಬಂಪರ್, ಹೊಸ ಮಾದರಿಯ ಟೈಲ್ ಲ್ಯಾಂಪ್ಸ್ ನೀಡಲಾಗುತ್ತಿದ್ದು, ಕ್ರೋಮ್ ಸೌಲಭ್ಯವು ಕಾರಿನ ಅಂದವನ್ನು ಹೆಚ್ಚಿಸಿದೆ.

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹಾಗೆಯೇ ಫ್ಲಕ್ಸ್ ಸಿಲ್ವರ್ ಸ್ಕ್ರೀಡ್ ಪ್ಲೇಟ್, ತ್ರಿಕೋನಾಕಾದಲ್ಲಿರುವ ಹೊಲೊಜೆನ್ ಫಾಗ್ ಲ್ಯಾಂಪ್, ಸಿಲ್ವರ್ ಫೀನಿಷ್ ಹೊಂದಿರುವ 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್ ಹೊಂದಿದ್ದು, ಹಿಂಭಾಗದ ಬಂಪರ್ ಮತ್ತು ಇತರೆ ವಿನ್ಯಾಸದಲ್ಲಿ ಯಾವುದೇ ಹೊಸ ಬದಲಾವಣೆಗಳನ್ನು ತಂದಿಲ್ಲ.

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಫೇಸ್‌ಲಿಫ್ಟ್ ಒಳಭಾಗದ ವಿನ್ಯಾಸವು ಕೂಡಾ ಸಾಕಷ್ಟು ಬದಲಾವಣೆಗೊಂಡಿದ್ದು, ಆಲ್ ಬ್ಲ್ಯಾಕ್ ಥೀಮ್ ಇಂಟಿಯರ್, ಹೊಸದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 9-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, 360 ಡಿಗ್ರಿ ಕ್ಯಾಮೆರಾ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಇನ್ ಬಿಲ್ಟ್ ಏರ್ ಪೂರಿಫ್ಲಿಯರ್, ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೇರಿದಂತೆ ಪ್ರಸ್ತುತ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಸುರಕ್ಷತೆಗಾಗಿ ಪ್ರಸ್ತುತ ಮಾದರಿಯಲ್ಲಿರುವಂತೆಯೇ ಎಬಿಎಸ್ ಜೊತೆಗೆ ಇಬಿಡಿ, 7 ಏರ್‌ಬ್ಯಾಗ್, ಸ್ಪಿಡ್ ಸೆನ್ಸಾರ್ ಡೋರ್ ಲಾಕ್, ಕ್ರೂಸ್ ಕಂಟ್ರೋಲ್, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಕೀ ಲೆಸ್ ಎಂಟ್ರಿ, ಆ್ಯಂಬಿಯೆಂಟ್ ಲೈಟಿಂಗ್ಸ್, ಲೆದರ್ ಆಸನಗಳು, ರಿವರ್ಸ್ ಕ್ಯಾಮೆರಾ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಎಂಜಿನ್ ಮತ್ತು ಪರ್ಫಾಮೆನ್ಸ್

ಸದ್ಯ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿರುವ ಕಿಜಂಗ್ ಇನೋವಾ ಮಾದರಿಯು 139-ಬಿಎಚ್‌ಪಿ ಪ್ರೇರಿತ 2.0-ಲೀಟರ್ ಪೆಟ್ರೋಲ್ ಮತ್ತು 149-ಬಿಎಚ್‌ಪಿ ಪ್ರೇರಿತ 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ಭಾರತದಲ್ಲಿ ಇನೋವಾ ಕ್ರಿಸ್ಟಾ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆವೃತ್ತಿಗಳೊಂದಿಗೆ ಮಾರಾಟವಾಗಲಿದೆ.

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಟೊಯೊಟಾ ಕಂಪನಿಯು ಬಿಎಸ್-6 ಜಾರಿ ನಂತರ ಈ ಹಿಂದಿನ 2.8-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಹೊಸ ಎಮಿಷನ್ ಪ್ರಕಾರ ಸ್ಥಗಿತಗೊಳಿಸಿದ್ದು, ಹೊಸ ಕಾರಿನಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆಯನ್ನು ಸಹ ನೀಡುವ ಸಿದ್ದತೆ ನಡೆಸಲಾಗುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಏಪ್ರಿಲ್ 1ರಿಂದಲೇ ಬಿಎಸ್-6 ಎಮಿಷನ್ ಜಾರಿಗೆ ತರಲಾಗಿದ್ದು, ಹೊಸ ನಿಯಮ ಅನುಸಾರವಾಗಿ ಬಹುತೇಕ ಕಾರು ಮಾದರಿಗಳು ಈಗಾಗಲೇ ಎಂಜಿನ್‌ನೊಂದಿಗೆ ಬಿಡುಗಡೆಗೊಂಡಿವೆ. ಟೊಯೊಟಾ ಕೂಡಾ ಇನೋವಾ ಕ್ರಿಸ್ಟಾ ಸೇರಿದಂತೆ ವಿವಿಧ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಕಾರುಗಳ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

Article Published On: Friday, October 23, 2020, 20:56 [IST]
English summary
Toyota Innova Crysta Facelift Expected To Launch On November Second Week. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+